ಬಿಗ್ ಬಾಸ್ ಮನೆಯಲ್ಲಿ ಕಿರಿಕ್ ಕೀರ್ತಿದೆ ಹವಾ

ಶಾಲೆಯ ಶಿಕ್ಷಕರಾಗಿ ಎಂಟ್ರಿ ಕೊಟ್ಟ ಕೀರ್ತಿ ಅತ್ಯುತ್ತಮ ಪ್ರದರ್ಶನ ತೋರಿದ್ದಾರೆ. ದಿವಾಕರ್ ಮತ್ತು ಚಂದನ್ ಅವರ ಹೇರ್ ಸ್ಟೈಲ್ ಬದಲಿಸಿದ್ದು, ಮಕ್ಕಳಾದ ಸದಸ್ಯರಿಗೆ ಪಾಠ ಮಾಡಿ ಪ್ರಶ್ನೆ ಕೇಳಿದ್ದಾರೆ. ಜಯಶ್ರೀನಿವಾಸನ್ ಹಾಗೂ ಅನುಪಮಾ ನಡುವೆ ಕ್ಲಾಸ್ ನಲ್ಲೇ ವಾರ್ ನಡೆದಿದೆ.
'ಬಿಗ್ ಬಾಸ್ ಬೋರ್ಡಿಂಗ್ ಸ್ಕೂಲ್'ನಲ್ಲಿ ದಿವಾಕರ್ ಶ್ರೀಮಂತರ ಮಗನಾಗಿ ಶಿಕ್ಷಕರ ಮಾತು ಕೇಳದ ವಿದ್ಯಾರ್ಥಿಯಾದರೆ, ಕ್ಯಾಪ್ಟನ್ ನಿವೇದಿತಾ ಕ್ಲಾಸ್ ಲೀಡರ್ ಆಗಿದ್ದಾರೆ. ಕಾರ್ತಿಕ್ ಹುಡುಗಿಯರನ್ನು ಕಂಡರೆ ನಾಚಿಕೊಳ್ಳುವ ವಿದ್ಯಾರ್ಥಿಯಾಗಿದ್ದಾರೆ. ಶ್ರುತಿ ಅಳುಮುಂಜಿ ವಿದ್ಯಾರ್ಥಿನಿಯಾಗಿದ್ದಾರೆ. ಸಮೀರಾಚಾರ್ಯ ಕೀಟಲೆ ತಮಾಷೆಯಾಗಿತ್ತು. ಪ್ರಶ್ನೆಗೆ ಉತ್ತರಿಸುವ ಸಂದರ್ಭದಲ್ಲಿ ಬಹುತೇಕ ಸದಸ್ಯರು ತಪ್ಪು ಉತ್ತರ ನೀಡಿದ್ದು, ಅನುಪಮಾ ಹೆಚ್ಚು ಸರಿಯಾದ ಉತ್ತರ ನೀಡಿ ಬಹುಮಾನ ಪಡೆದುಕೊಂಡಿದ್ದಾರೆ. ನಿವೇದಿತಾ ಅವರೊಂದಿಗೆ ಅವರ ತಾಯಿ ಮಾತನಾಡಿ, ಕ್ಯಾಪ್ಟನ್ ಆಗಿ ತಪ್ಪಾಗಿ ನಿರ್ಧಾರ ಕೈಗೊಳ್ಳದೇ, ಪ್ರತಿಯೊಂದನ್ನು ಅರ್ಥ ಮಾಡಿಕೊಂಡು, ತೀರ್ಮಾನ ಕೈಗೊಳ್ಳುವಂತೆ ಸಲಹೆ ನೀಡಿದ್ದಾರೆ. ತಾಯಿಯ ಆಡಿಯೋ ಸಂಭಾಷಣೆ ಕೇಳಿದ ನಿವೇದಿತಾ ಥ್ಯಾಂಕ್ಸ್ ಹೇಳಿದ್ದಾರೆ.
Comments