ಪವನ್ ಕಲ್ಯಾಣ್ ಗೆ ಸಿಕ್ಕಿರುವ ಪ್ರಶಸ್ತಿ ಯಾವುದು ಗೊತ್ತಾ ?

ಅಂದ್ಹಾಗೆ, ಪವನ್ ಕಲ್ಯಾಣ್ ಗೆ ಸಿಕ್ಕಿರುವ ಪ್ರಶಸ್ತಿ 'ಐಇಬಿಎಫ್ ಎಕ್ಸಲೆನ್ಸ್ ಅವಾರ್ಡ್ 2017 (ಇಂಡೋ ಯೂರೋಪನ್ ಬಿಸ್ ನೆಸ್ ಫೋರಂ)' 'ಗ್ಲೋಬಲ್ ಬಿಸ್ ನೆಸ್' ಸಮಿತಿ ಈ ಪ್ರಶಸ್ತಿಯನ್ನ ನೀಡಿ ಗೌರವಿಸಿದೆ.
ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸೇವೆ ಸಲ್ಲಿಸಿದವರನ್ನ ಗುರುತಿಸಿ ಗೌರವಿಸುವ IEBF ಸಂಸ್ಥೆ ಈ ವರ್ಷ ಪವನ್ ಕಲ್ಯಾಣ್ ಅವರನ್ನ ಆಯ್ಕೆ ಮಾಡಿಕೊಂಡಿದೆ. ನವೆಂಬರ್ 17 ರಂದು ಲಂಡನ್ ಪಾರ್ಲಿಮೆಂಟ್ ನಲ್ಲಿ 'ಐಇಬಿಎಫ್ ಎಕ್ಸಲೆನ್ಸ್ ಅವಾರ್ಡ್' ನೀಡಿ ಗೌರವಿಸಿದೆ. ಅಂದ್ಹಾಗೆ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ನೀಡಿರುವ 'ಗ್ಲೋಬಲ್ ಇಂಟೆಗ್ರಿಟಿ ಅವಾರ್ಡ್'ಗೂ ಈಗ ಪವನ್ ಕಲ್ಯಾಣ್ ಗೆ ಕೊಟ್ಟಿರುವ 'ಐಇಬಿಎಫ್ ಎಕ್ಸಲೆನ್ಸ್ ಅವಾರ್ಡ್'ಗೂ ಸಂಬಂಧವಿಲ್ಲ. ಆದ್ರೆ, ಲಂಡನ್ ಪಾರ್ಲಿಮೆಂಟ್ ನಲ್ಲಿ ಈ ನಟರಿಗೆ ಗೌರವಿಸಿರುವುದು ಖುಷಿಯ ವಿಚಾರ.
Comments