ಮತ್ತೆ ರೀಲ್ ನಲ್ಲಿ ಒಂದಾಗಲಿದೆ ಈ ಜೋಡಿ

2007 ಏಪ್ರಿಲ್ 20ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಮತ್ತೆ ಜತೆಯಾಗಿ ನಟಿಸಲಿದ್ದಾರೆ. ಮಣಿರತ್ನಂ ನಿರ್ದೇಶನದ 'ರಾವನ್' ಚಿತ್ರ ಇವರಿಬ್ಬರು ಜತೆಯಾಗಿ ನಟಿಸಿದ್ದ ಕೊನೆಯ ಚಿತ್ರವಾಗಿತ್ತು.
ಜೊತೆಗೆ ಇವರಿಬ್ಬರು ಡಾಯಿ ಅಕ್ಷರ್ ಪ್ರೇಮ್ ಕೆ, ಕುಚ್ ನಾ ಕಹೋ, ಉಮ್ರಾವ್ ಜಾನ್ ಮತ್ತು ಗುರು ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದರು. ಮದುವೆ ಬಳಿಕ ಇವರಿಬ್ಬರು ಒಟ್ಟಾಗಿ ನಟಿಸಿದ್ದು ಕೇವಲ ಎರಡು ಚಿತ್ರಗಳಲ್ಲಿ ಮಾತ್ರ. ಇದೀಗ ಮತ್ತೆ ನಿರ್ಮಾಪಕ ಅನುರಾಗ್ ಕಶ್ಯಪ್ ಸಿನೆಮಾದಲ್ಲಿ ಇವರಿಬ್ಬರು ಜತೆಯಾಗಿ ನಟಿಸಲಿದ್ದಾರೆ. ಆ ಚಿತ್ರದ ಹೆಸರೇ ' ಗುಲಾಬ್ ಜಾಮೂನ್'. ಇದು ಕಾಮಿಡಿ ಜಾನರ್ ಸಿನಿಮಾ. ಈ ಚಿತ್ರದ ಕುರಿತು ಮಾತುಕತೆ ನಡೆದಿದೆ.
Comments