ಒಂದು ನ್ಯಾಯಕ್ಕೆ ಬದ್ಧರಾಗಬೇಕು, ಕಿಚ್ಚನ ಖಡಕ್ ಮಾತು
ಸ್ವಚ್ಛತೆ ಬಗ್ಗೆ ಪ್ರಶ್ನೆ ಮಾಡಿ ತೋರಿಸಿದವರು ಮಾಡುತ್ತಿರುವುದು ಸರಿಯೇ.?'' ಎಂಬುದನ್ನು ಚಂದನ್ ಶೆಟ್ಟಿ ಹಾಗೂ ದಿವಾಕರ್ ಕ್ಯಾಮರಾ ಮುಂದೆ ಕೇಳಿದರು. ಈ ಬಗ್ಗೆ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಸುದೀಪ್ ಕೇಳಿದ್ದು ಹೀಗೆ ನಮಗೆ ಒಂದು ನ್ಯಾಯಾ ಬೇರೆಯವರಿಗೆ ಒಂದು ನ್ಯಾಯ ಇದು ಸರಿನ ಎಂಬ ರೀತಿಯಲ್ಲಿ ಪ್ರಶ್ನೆ ಮಾಡಿದರು.
ಸಿಹಿ ಕಹಿ ಚಂದ್ರುಗೆ ಸುದೀಪ್ ಪ್ರಶ್ನೆ ''ಅಡುಗೆ ಮನೆಯ ಸ್ವಚ್ಛತೆ ಬಗ್ಗೆ ಮಾತನಾದುವಾಗ, ಅಂದಿನ ದಿನದ ಪಾತ್ರೆಯನ್ನ ಅಂದೇ ದಿನವೇ ತೊಳೆದು ಇಟ್ಟರೆ ಚೆನ್ನಾಗಿರುತ್ತದೆ ಅಂತ ಹೇಳಿದ್ರಿ ಚಂದ್ರು ಅವ್ರೆ. ಆದರೆ, ಒಂದು ದಿನ ರಾತ್ರಿ ಚಂದನ್, ಸಮೀರಾಚಾರ್ಯ ಹಾಗೂ ದಿವಾಕರ್ ಕ್ಯಾಮರಾ ಮುಂದೆ ಬಂದು ಅಡುಗೆ ಮನೆಯಲ್ಲಿ ಬಿದ್ದಿದ್ದ ಪಾತ್ರೆಗಳನ್ನ ತೋರಿಸುತ್ತಾರೆ ಈ ಬಗ್ಗೆ ತಾವು ಹೆಂ ಹೇಳುತ್ತೀರಿ ಎಂದು ಸುದೀಪ್ ಪ್ರಶ್ನಿಸುವ ಮೂಲಕ ಖಡಕ್ ಮಾತುಗಳನ್ನಾಡಿದರು. ಇದಕ್ಕೆ ಸಿಹಿ ಕಹಿ ಚಂದ್ರು ಕೊಟ್ಟ ಉತ್ತರ ಏನು ಗೊತ್ತ ? ''ಅವತ್ತಿನ ದಿನ ಟಾಸ್ಕ್ ಇತ್ತು ತುಂಬಾ ಸುಸ್ತಾಗಿತ್ತು. ಊಟ ತಡ ಆಗಿತ್ತು. ಹೀಗಾಗಿ, ಬೆಳಗ್ಗೆ ಪಾತ್ರೆ ತೊಳೆಯುವ ಬಗ್ಗೆ ಡಿಸೈಡ್ ಮಾಡಿದ್ವಿ'' ಎಂದು ಉತ್ತರಿಸಿದರು ಸಿಹಿ ಕಹಿ ಚಂದ್ರು. ಅವರೂ ಹಾಗೇ ಯೋಚಿಸಿರಬಹುದು.! ಸುಸ್ತು ಎಲ್ಲರಿಗೂ ಒಂದೇ.!''ಸುಸ್ತು ಅಂತ ಬಂದಾಗ, ಕಳೆದ ವಾರ ಕೂಡ ಕಷ್ಟವಾದ ಟಾಸ್ಕ್ ಇತ್ತು. ಸುಸ್ತು... ಎಲ್ಲರಿಗೂ ಸುಸ್ತೇ ತಾನೇ. ಒಂದು ನ್ಯಾಯಕ್ಕೆ ಬದ್ಧರಾಗಬೇಕು. "ಒಂದೊಂದು ಗುಂಪಿಗೆ ಒಂದೊಂದು ನ್ಯಾಯ ಇಲ್ಲ'' ಸುದೀಪ್ ಹೇಳಿದರು.
Comments