ಈ ವಾರದ ಕ್ಯಾಪ್ಟನ್ ಆಗಿ ನಿವೇದಿತಾ ಗೌಡ ರವರು ಮಿಂಚುತ್ತಿದ್ದಾರೆ
ಕ್ಯಾಪ್ಟನ್ ಆಯ್ಕೆ ಪ್ರಕ್ರಿಯೆಗಾಗಿ ಸಾಮಾನ್ಯ ಜ್ಞಾನ ಪ್ರಶ್ನೆಗಳನ್ನು ಕೇಳಲಾಗಿದ್ದು, ಇದರಲ್ಲಿ ಅತಿ ಹೆಚ್ಚು ಪ್ರಶ್ನೆಗಳಿಗೆ ಉತ್ತರ ನೀಡಿದ ನಿವೇದಿತಾ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ. 'ಬಿಗ್ ಬಾಸ್' ಮನೆಯಲ್ಲಿ ತಿನಿಸು ಹಂಚಿಕೊಂಡು ತಿನ್ನುವ ವಿಚಾರಕ್ಕೆ ಸದಸ್ಯರ ನಡುವೆ ಭಾರೀ ಚರ್ಚೆಯೇ ನಡೆದಿದೆ.
ಯಾವುದೇ ಹಣ್ಣು, ತಿಂಡಿ, ತಿನಿಸು ಬಂದಾಗ ಮೊದಲಿಗೆ ಎಲ್ಲರಿಗೂ ಸಮನಾಗಿ ಹಂಚಬೇಕೆಂದು ಕೆಲವರು ಸಲಹೆ ನೀಡಿದರೆ, ಮತ್ತೆ ಕೆಲವರು ಹಂಚಿದ್ದರಿಂದ ಎಲ್ಲರಿಗೂ ಸಿಗಲ್ಲ. ಕೆಲವರು ಮೊದಲೇ ತಿಂದಿರುತ್ತಾರೆ ಎಂದು ಆಕ್ಷೇಪಿಸಿದ್ದಾರೆ. ಇಷ್ಟೇ ವಿಚಾರಕ್ಕೆ ಮನೆಯಲ್ಲಿ ಸದಸ್ಯರ ನಡುವೆ ಕಾವೇರಿದ ಚರ್ಚೆ ನಡೆದಿದೆ. ರಿಯಾಜ್, ಚಂದನ್, ಜಗನ್, ಚಂದ್ರು, ಅನುಪಮಾ, ಸಮೀರಾಚಾರ್ಯ ಅವರ ನಡುವೆ ಮಾತಿನ ಚಕಮಕಿ ಕೂಡ ನಡೆದಿದೆ.'ಡ್ಯಾನ್ಸ್ ಮಗಾ ಡ್ಯಾನ್ಸ್' ನಲ್ಲಿ ಹಾಡು ಕೇಳಿಬಂದಾಗ ಆಯಾ ಹಾಡಿಗೆ ನಿಗದಿಯಾದ ಸದಸ್ಯರು ಡ್ಯಾನ್ಸ್ ಮಾಡಬೇಕಿತ್ತು. ಇದರಲ್ಲಂತೂ ದಿವಾಕರ್ ಮತ್ತು ಜಯಶ್ರೀನಿವಾಸನ್ ಭರ್ಜರಿ ಸ್ಟೆಪ್ ಹಾಕಿದ್ದಾರೆ. ಕ್ಲೀನಿಂಗ್ ಮಾಡುವಾಗಲೇ ಕಾರ್ತಿಕ್ ಸರದಿ ಬಂದಿದ್ದು, ಅವರು ಬರುವಷ್ಟರಲ್ಲಿ ಹಾಡು ಬಂದ್ ಆಗಿದೆ. ಮತ್ತೆ ಹಾಡು ಕೇಳಿ ಬಂದಾಗ ಅವರು ಡ್ಯಾನ್ಸ್ ಮಾಡಿದ್ದು ತಮಾಷೆಯಾಗಿತ್ತು.
ಇನ್ನು ಮನೆಯಲ್ಲಿ ದಿವಾಕರ್ ಅವರಿಗೆ ಚಂದನ್ ವಿಶೇಷವಾದ ಕಟಿಂಗ್ ಮಾಡಿದ್ದು, ಸ್ಟೈಲಿಶ್ ಲುಕ್ ನಲ್ಲಿ ದಿವಾಕರ್ ಮಿಂಚಿದ್ದಾರೆ. ಈ ನಡುವೆ ಚಂದ್ರು ಮತ್ತೆ ಗ್ಯಾಸ್ ಆಫ್ ಮಾಡುವುದನ್ನು ಮರೆತಿದ್ದು, ಗ್ಯಾಸ್ ಬಂದ್ ಮಾಡಲಾಗಿದೆ. ಇದಕ್ಕಾಗಿ ಬಿಗ್ ಬಾಸ್ ಬಳಿ ಸಾರಿ ಕೇಳಿದ ಚಂದ್ರು ಇನ್ನು ಮುಂದೆ ಅಡುಗೆ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಇದೇ ಕಾರಣಕ್ಕೆ ಕಾರ್ತಿಕ್ ಅಸಮಾಧಾನ ತೋರಿದ್ದಾರೆ. ನಿವೇದಿತಾ ಕೆಲಸ ಹಂಚಿಕೆ ಮಾಡುವಾಗ ಚಂದ್ರು ಅಡುಗೆ ಜವಾಬ್ದಾರಿ ವಹಿಸಿಕೊಳ್ಳಲು ಹಿಂದೇಟು ಹಾಕಿದ್ದಾರೆ. ಬಳಿಕ ಅವರು ಒಪ್ಪಿಕೊಂಡಿದ್ದಾರೆ. ಅಂತರರಾಷ್ಟ್ರೀಯ ಪುರುಷರ ದಿನಾಚರಣೆ ಅಂಗವಾಗಿ ಮನೆಯ ಪುರುಷ ಸದಸ್ಯರಿಗೆ ಫೇರ್ ಅಂಡ್ ಹ್ಯಾಂಡ್ಸಮ್ ಉತ್ಪನ್ನ ಬಳಸಿ ತಮ್ಮ ಪ್ರತಿಭೆ ಪ್ರದರ್ಶಿಸಲು ತಿಳಿಸಲಾಗಿತ್ತು. ಇದರಲ್ಲಿ ಕಾರ್ತಿಕ್ ಆಯ್ಕೆಯಾಗಿದ್ದು, 2 ಲಕ್ಷ ರೂ. ಬಹುಮಾನ ಪಡೆದುಕೊಂಡಿದ್ದಾರೆ.
Comments