'ಬಿಗ್ ಬಾಸ್' ಮನೆಯೊಳಗೆ ಶ್ರುತಿ ಹರಿಹರನ್ ಹೋಗಿದ್ದಾದ್ರೂ ಏಕೆ ?

ಅಂದ ಹಾಗೇ, ಶ್ರುತಿ ಹರಿಹರನ್ ಹಾಗೂ ಮಾಜಿ ಕ್ರಿಕೆಟಿಗ ಗುಂಡಪ್ಪ ವಿಶ್ವನಾಥ್ ಅವರು ಭಾನುವಾರದ 'ಕಿಚ್ಚನ್ ಟೈಮ್'ಗೆ ಆಗಮಿಸಿದ್ದಾರೆ. ಸುದೀಪ್ ಅವರೊಂದಿಗೆ ಗುಂಡಪ್ಪ ವಿಶ್ವನಾಥ್ ಅವರು ಕ್ರಿಕೆಟ್ ಕುರಿತಾಗಿ ತಮ್ಮ ಅನುಭವ ಹಂಚಿಕೊಂಡರೆ, ಶ್ರುತಿ ಅವರು ಸಿನಿಮಾದ ಕುರಿತಾಗಿ ಹೇಳಿದ್ದಾರೆ.
ಇಂಟರ್ ನ್ಯಾಷನಲ್ ಮೆನ್ಸ್ ಡೇ ಅಂಗವಾಗಿ 'ಬಿಗ್ ಬಾಸ್' ಮನೆಯ ಪುರುಷ ಸದಸ್ಯರಿಗೆ ಫೇರ್ ಅಂಡ್ ಹ್ಯಾಂಡ್ಸಮ್ ಉತ್ಪನ್ನಗಳನ್ನು ಗಿಫ್ಟ್ ಆಗಿ ನೀಡಲಾಗಿದೆ. ಮನೆಯ ಸ್ಟೋರ್ ರೂಂನಲ್ಲಿ ಉತ್ಪನ್ನಗಳಿವೆ ಎಂದು ಮನೆಯೊಳಗೆ ಎಂಟ್ರಿ ಕೊಟ್ಟ ಶ್ರುತಿ ಹರಿಹರನ್ ಅವರು ತಿಳಿಸಿದ್ದಾರೆ. ಶ್ರುತಿ ಹರಿಹರನ್ ಅವರು ಮನೆಯೊಳಗೆ ಹೋದ ಸಂದರ್ಭದಲ್ಲಿ ಸದಸ್ಯರೆಲ್ಲಾ ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ. ಅವರೂ ಸ್ಪರ್ಧಿಯಾಗಿರಬಹುದೆಂದು ಕೆಲವರು ಮಾತಾಡಿದ್ದಾರೆ. ಆದರೆ, ಕೆಲ ಸಮಯದ ಬಳಿಕ ಶ್ರುತಿ ಮನೆಯಿಂದ ಹೊರಟಿದ್ದಾರೆ.
ಇದೇ ವೇಳೆ ಸುದೀಪ್ ಹಾಗೂ ಅತಿಥಿಗಳಾಗಿ ಆಗಮಿಸಿದ್ದ ಶ್ರುತಿ ಮತ್ತು ಗುಂಡಪ್ಪ ವಿಶ್ವನಾಥ್ ಅವರು ಸೇರಿ ಬಗೆಬಗೆಯ ತಿನಿಸು ಮಾಡಿ ಸವಿದಿದ್ದಾರೆ. ಮನೆಗೆ ಬಂದ ಅತಿಥಿಗಳಿಗೆ ಸುದೀಪ್ ಪ್ರಶ್ನೆ ಕೇಳಿದಾಗ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. 'ಸೂಪರ್ ಸಂಡೇ ವಿತ್ ಸುದೀಪ' 'ಬಿಗ್ ಬಾಸ್' ವೇದಿಕೆಯಲ್ಲಿ ಕಾಣಿಸಿಕೊಂಡ ಮನೆಯಿಂದ ಹೊರ ಬಂದ ಕೃಷಿ ಅವರು ಮನೆಯೊಳಗಿನ ಅನುಭವ ಹಂಚಿಕೊಂಡಿದ್ದಾರೆ. 5 ವಾರಗಳ ಕಾಲ ಮನೆಯಲ್ಲಿ ಕಳೆದ ಕ್ಷಣಗಳು, ಎಲ್ಲರೊಂದಿಗೆ 4 ಗೋಡೆಗಳ ಮಧ್ಯೆ ಕಳೆದ ಅನುಭವ ವಿಭಿನ್ನವಾಗಿತ್ತು ಎಂದು ಹೇಳಿದ್ದಾರೆ. ಮನೆಯ ಸದಸ್ಯರ ಕುರಿತಾಗಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಕೃಷಿ ಅವರ ಪ್ರಕಾರ, ದಿವಾಕರ್, ಅನುಪಮಾ, ಚಂದ್ರು, ಜಗನ್, ಕಾರ್ತಿಕ್ ಫೈನಲ್ ಗೆ ಬರಬಹುದು. ದಿವಾಕರ್ ಗೆಲ್ಲಬಹುದು. ಮುಂದಿನ ವಾರ ಆಶಿತಾ ಮನೆಯಿಂದ ಹೊರ ಬರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ನಂತರದಲ್ಲಿ 'ಬಿಗ್ ಬಾಸ್' ವೇದಿಕೆಗೆ ಬಂದ 'ಅತಿರಥ' ಚಿತ್ರತಂಡದೊಂದಿಗೆ ಸುದೀಪ್ ಮಾತನಾಡಿದ್ದಾರೆ. ಚೇತನ್, ರವಿಶಂಕರ್ ಗೌಡ, ನಿರ್ದೇಶಕ ಮಹೇಶ್ ಬಾಬು ಮೊದಲಾದವರು ಮಾತನಾಡಿದ್ದು, ಇದೇ ವೇಳೆ ಚಿತ್ರದ ಟ್ರೇಲರ್ ಪ್ರದರ್ಶಿಸಲಾಗಿದೆ.
Comments