'ಪದ್ಮಾವತಿ' ಚಿತ್ರ ವೀಕ್ಷಿಸಿದ ನಂತರ ರಜತ್ ಶರ್ಮಾಏನು ಹೇಳಿದ್ರು ..?

ಚಿತ್ರ ವೀಕ್ಷಣೆ ನಂತ್ರ ಯಾರೊಬ್ಬರೂ ಚಿತ್ರದಲ್ಲಿ ರಜಪೂತರ ಅದ್ಭುತ ಇತಿಹಾಸಕ್ಕೆ ವಿರುದ್ಧವಾದ ಯಾವುದೇ ದೃಶ್ಯ, ಸಂಭಾಷಣೆಯಿದೆ ಎನ್ನಲು ಸಾಧ್ಯವಿಲ್ಲ. ಸಂಜಯ್ ಲೀಲಾ ಬನ್ಸಾಲಿ ಸಂಪೂರ್ಣ ಸಂಶೋಧನೆ ನಡೆಸಿದ ನಂತ್ರ ಚಿತ್ರ ನಿರ್ಮಾಣ ಮಾಡಿದ್ದಾರೆ.
ರಜಪೂತರ ಸಂಪ್ರದಾಯ ಹಾಗೂ ಸಂಸ್ಕೃತಿಯನ್ನು ಗಮನದಲ್ಲಿಟ್ಟುಕೊಂಡು ಚಿತ್ರ ನಿರ್ಮಿಸಲಾಗಿದೆ. ಚಿತ್ರದಲ್ಲಿ ಇತಿಹಾಸವನ್ನು ತಿರುಚಲಾಗಿಲ್ಲ. ರಾಣಿ ಪದ್ಮಾವತಿ ರಣನೀತಿ, ಕೌಶಲ್ಯ, ಧೈರ್ಯವನ್ನು ಕಥೆ ಒಳಗೊಂಡಿದೆ ಎಂದು ರಜತ್ ಶರ್ಮಾ ಹೇಳಿದ್ದಾರೆ. ರಜಪೂತರು ಇತಿಹಾಸ ತಿರುಚಲಾಗಿದೆ, ಪದ್ಮಾವತಿಗೆ ಅವಮಾನ ಮಾಡಲಾಗಿದೆ ಎಂದು ಪ್ರತಿಭಟನೆ ನಡೆಸುತ್ತಿದ್ದಾರೆ. ಆದ್ರೆ ಚಿತ್ರದಲ್ಲಿ ಅದ್ಯಾವ ಸಂಗತಿಯೂ ಇಲ್ಲ ಎಂದು ಶರ್ಮಾ ಹೇಳಿದ್ದಾರೆ.
ರಾಣಿ ಪದ್ಮಾವತಿ ಸೇರಿದಂತೆ ರಜಪೂತ ಮಹಿಳೆಯರು ಸಾರ್ವಜನಿಕರ ಎದುರು ನೃತ್ಯ ಮಾಡುತ್ತಿರಲಿಲ್ಲವೆಂಬ ವಾದವಿದೆ. ನಾನೂ ರಾಜಸ್ಥಾನದವನು. ರಜಪೂತರ ಇತಿಹಾಸವನ್ನು ನಾನು ಓದಿದ್ದೇನೆ. ಅಲ್ಲಿನ ರಾಣಿಯರು ಕೇವಲ ಮಹಿಳೆಯರಿದ್ದಾಗ ಅದೂ ಅರಮನೆಯಲ್ಲಿ ಮಾತ್ರ ನೃತ್ಯ ಮಾಡುತ್ತಿದ್ದರು. ರಾಜನ ಎದುರು ರಾಣಿಯರು ನೃತ್ಯ ಮಾಡುವಾಗ ಪರಪುರುಷನಿಗೆ ಅಲ್ಲಿ ಪ್ರವೇಶವಿರಲಿಲ್ಲ. ಚಿತ್ರದಲ್ಲಿ ಕೂಡ ಇದನ್ನೇ ತೋರಿಸಲಾಗಿದೆ ಎಂದು ಶರ್ಮಾ ಹೇಳಿದ್ದಾರೆ.
Comments