ಚಂದನ್ ಕ್ಯಾಪ್ಟನ್ಶಿಪ್ ಗೆ ಫಿದಾ ಆದ ಬಿಗ್ ಬಾಸ್ ಮನೆಯ ಸದಸ್ಯರು

ಕ್ಯಾಪ್ಟನ್ ಆಗಿ ಆಯ್ಕೆಯಾದಾಗ ಒಲ್ಲದ ಮನಸ್ಸಿನಿಂದಲೇ ಇದ್ದ ಚಂದನ್ ಚತುರತೆಗೆ ಮನೆಯ ಸದಸ್ಯರು ಫಿದಾ ಆಗಿದ್ದಾರೆ. ನಾಮಿನೇಷನ್ ಸಂದರ್ಭದಲ್ಲಿ ಬಹುತೇಕರು ನಾಮಿನೇಟ್ ಮಾಡಿದ್ದ ರಿಯಾಜ್ ಅವರನ್ನು ಉಳಿಸಿಕೊಂಡು ಚಂದನ್ ಜಾಣ್ಮೆ ಮೆರೆದಿದ್ದರು.
ವಾರವಿಡಿ ಸದಸ್ಯರು ತೋರಿದ ಪ್ರದರ್ಶನದ ಆಧಾರದ ಮೇಲೆ ದಿವಾಕರ್ ಅವರನ್ನು ಬೆಸ್ಟ್ ಪರ್ ಫಾರ್ಮರ್ ಆಗಿ, ಕಾರ್ತಿಕ್ ಅವರನ್ನು ವರ್ಸ್ಟ್ ಪರ್ ಫಾರ್ಮರ್ ಆಗಿ ಆಯ್ಕೆ ಮಾಡಿದ್ದಾರೆ. ಇದೇ ವಿಚಾರವಾಗಿ ಸಮೀರಾಚಾರ್ಯ ಬಳಿ ಮೊದಲಿಗೆ ಚರ್ಚಿಸಿದ್ದ ಚಂದನ್, ತಮಗೇ ಕಳಪೆ ಬೋರ್ಡ್ ಕೊಡಿ ಎಂದು ಸಮೀರಾಚಾರ್ಯ ಹೇಳಿದರೂ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ. ಸೀಕ್ರೆಟ್ ಟಾಸ್ಕ್ ನಲ್ಲಿ ಕಾರ್ತಿಕ್ 2000 ಲಕ್ಸುರಿ ಬಜೆಟ್ ಪಾಯಿಂಟ್ ಗಳನ್ನು ಗಳಿಸಲು ಅವಕಾಶವಿತ್ತು. ಅವರು ಇನ್ನಷ್ಟು ಜಾಣ್ಮೆ ಬಳಸಬೇಕಿತ್ತು. ಆದರೆ, ಇದರಲ್ಲಿ ಅವರು ಸೋತ ಕಾರಣಕ್ಕೆ 1000 ಪಾಯಿಂಟ್ಸ್ ಕಳೆದುಕೊಳ್ಳುವಂತಾಗಿದೆ ಎಂದು ಹೇಳಿದ ಚಂದನ್, ಕಳಪೆ ಫಲಕ ಹಾಕಿದ್ದಾರೆ. ದಿವಾಕರ್ ಎಲ್ಲಾ ಟಾಸ್ಕ್ ಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಕಾರಣಕ್ಕೆ ಬೆಸ್ಟ್ ಪರ್ ಫಾರ್ಮರ್ ಆಗಿದ್ದಾರೆ ಎಂದು ಚಂದನ್ ಹೇಳಿದ್ದಾರೆ. ನಾನು ಇದಕ್ಕೆ ಅರ್ಹನೇ ಎಂದು ದಿವಾಕರ್ ತಮ್ಮದೇ ಶೈಲಿಯಲ್ಲಿ ಕೇಳಿದ್ದು, ಎಲ್ಲರೂ ಅವರಿಗೆ ಮೆಚ್ಚುಗೆ ಸೂಚಿಸಿದ್ದಾರೆ. ಇನ್ನು ಮನೆಯಲ್ಲಿ ಸದಸ್ಯರೆಲ್ಲರ ಗಮನ ಸೆಳೆಯಲು ಚಂದ್ರು ಮತ್ತು ಸಮೀರಾಚಾರ್ಯ ಸುಮ್ಮನೆ ಜಗಳವಾಡಿದ್ದಾರೆ. ಇವರು ಜೋರು ಮಾತಿನಲ್ಲಿ ಜಗಳವಾಡಿದ್ದರಿಂದ ಸದಸ್ಯರೆಲ್ಲ ಬಂದಿದ್ದು, ನಗುತ್ತಾ ಜಗಳ ಮಾಡಿದ ಸಮೀರಾಚಾರ್ಯ ತಾವೇ ನಗೆಪಾಟಲೀಗೀಡಾಗಿದ್ದಾರೆ. ಈ ವಾರ ಆಶಿತಾ, ಸಿಹಿಕಹಿ ಚಂದ್ರು, ದಿವಾಕರ್, ಜಗನ್, ಕೃಷಿ, ನಿವೇದಿತಾ ನಾಮಿನೇಟ್ ಆಗಿದ್ದು, ಯಾರು ಮನೆಯಿಂದ ಹೊರ ಹೋಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
Comments