ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ 'ಪ್ರೇಮಂ' ಬೆಡಗಿ ..!!
ಸಾಯಿಪಲ್ಲವಿ'ಯನ್ನ ಸ್ಯಾಂಡಲ್ ವುಡ್ ಸಿನಿಮಾಗಾಗಿ ಕರೆತರಲು ಸಿನಿಮಾ ತಂಡವೊಂದು ಸಜ್ಜಾಗಿದೆ. ಚಿತ್ರತಂಡ 'ಪ್ರಜ್ವಲ್ ದೇವರಾಜ್' ಜೊತೆಯಲ್ಲಿ 'ಪ್ರೇಮಂ' ಬೆಡಗಿಯನ್ನ ಜೋಡಿ ಮಾಡಲು ಸಿದ್ದತೆ ನಡೆಸಿದೆ. ಇನ್ನೂ ಟೈಟಲ್ ಇಡದ ಈ ಸಿನಿಮಾಗಾಗಿ ಸಾಯಿಪಲ್ಲವಿಯವರನ್ನ ಕರೆ ತರಲು ಪ್ರಯತ್ನ ನಡೆಯುತ್ತಿದೆ.
ಸೆಟ್ಟೇರಲು ಸಜ್ಜಾಗಿರುವ ಚಿತ್ರತಂಡ ಸಾಯಿಪಲ್ಲವಿಯವರನ್ನ ತಮ್ಮ ಸಿನಿಮಾಗೆ ನಾಯಕಿಯಾಗಿ ಆಯ್ಕೆ ಮಾಡಲು ಸಿದ್ದತೆ ನಡೆಸಿದೆ. ಸದ್ಯ ಡೇಟ್ಸ್ ಗಾಗಿ ಮಾತುಕತೆ ನಡೆಸಲು ಮುಂದಾಗಿದ್ದು, ನಟ ಪ್ರಜ್ವಲ್ ಅಭಿನಯದ ಮುಂದಿನ ಸಿನಿಮಾಗೆ ಸಾಯಿಪಲ್ಲವಿಯರನ್ನ ಕರೆತರುವ ಸಾಧ್ಯತೆಗಳು ಹೆಚ್ಚಾಗಿದೆ. ಪುಷ್ಪಕವಿಮಾನ' ಹತ್ತಿ ಬರಲಿರೋ 'ಮಲರ್'
'ಪುಷ್ಪಕವಿಮಾನ' ಟೀಂ ಜೊತೆ ಸಿನಿಮಾ ಈ ಹಿಂದೆ 'ಪುಷ್ಪಕ ವಿಮಾನ' ಸಿನಿಮಾ ನಿರ್ಮಾಣ ಮಾಡಿದ್ದ ನಿರ್ಮಾಪಕ 'ವಿಖ್ಯಾತ್' ಸದ್ಯ ಪ್ರಜ್ವಲ್ ಅಭಿನಯದ ಹೊಸ ಸಿನಿಮಾವನ್ನ ನಿರ್ಮಾಣ ಮಾಡುತ್ತಿದ್ದಾರೆ. ಇನ್ನೂ ಟೈಟಲ್ ಇಡದ ಈ ಸಿನಿಮಾಗಾಗಿ ಸಾಯಿಪಲ್ಲವಿಯವರನ್ನ ಕರೆ ತರಲು ಪ್ರಯತ್ನ ನಡೆಯುತ್ತಿದೆ. 'ಜೂಹಿಚಾವ್ಲಾ'ರನ್ನ ಕರೆಸಿದ ಟೀಂ
'ಮಲರ್' ಬರುವ ಸಾಧ್ಯತೆ ಹೆಚ್ಚಾಗಿದೆ. ಈ ಹಿಂದೆ 'ರಮೇಶ್ ಅರವಿಂದ್' ಅಭಿನಯದ 'ಪುಷ್ಪಕ ವಿಮಾನ' ಸಿನಿಮಾದ ಹಾಡೊಂದಕ್ಕೆ ನಟಿ ಜೂಹಿ ಚಾವ್ಲಾರನ್ನ ನಿರ್ಮಾಪಕ ವಿಖ್ಯಾತ್ ಕರೆತಂದಿದ್ರು. ಈಗ ಅದೇ ನಿರ್ಮಾಪಕರು ಪ್ರಜ್ವಲ್ ಜೊತೆ ನಾಯಕಿಯಾಗಿ ಸಾಯಿಪಲ್ಲವಿಯರನ್ನ ಆಯ್ಕೆ ಮಾಡಿದ್ದಾರೆ. ಪೊಲೀಸ್ ಅಧಿಕಾರಿಯಾಗಿ 'ಪ್ರಜ್ವಲ್'
ಸೆಟ್ಟೇರಲು ಸಿದ್ದವಾಯ್ತು ಸಿನಿಮಾ. ಪ್ರಜ್ವಲ್ ಸಿನಿಮಾದಲ್ಲಿ ಫನ್ ಕಾಪ್ ಕ್ಯಾರೆಕ್ಟರ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪವನ್ ಒಡೆಯರ್ ಜೊತೆಯಲ್ಲಿ ಕೆಲಸ ಮಾಡಿದ್ದ ಶ್ರೀ ನರಸಿಂಹ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ಸದ್ಯ ಪ್ರೀ ಪ್ರೊಡಕ್ಷನ್ ಕೆಲಸಗಳು ಶುರುವಾಗಿದ್ದು ಇನ್ನ ಕೆಲವೇ ದಿನಗಳಲ್ಲಿ ಸಿನಿಮಾ ಸೆಟ್ಟೇರಲಿದೆ.
Comments