32ನೇ ದಿನ ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಗಳದ್ದೇ ಕಾರುಬಾರು

ಮ್ಯೂಸಿಕಲ್ ಚೇರ್ ಟಾಸ್ಕ್ ನಲ್ಲಿ ಬಿಗ್ ಬಾಸ್ ಬಗೆಬಗೆಯ ಸವಾಲುಗಳನ್ನು ನೀಡಿದ್ರು. ತೊಟ್ಟಿದ್ದ ಬಟ್ಟೆಯಲ್ಲಿ ಸ್ವಿಮ್ಮಿಂಗ್ ಫೂಲ್ ನಿಂದ ನೀರು ತಂದು ಕ್ಯಾನ್ ತುಂಬಿಸುವ ಸವಾಲು ಕೊಡಲಾಗಿತ್ತು. ಸ್ಪರ್ಧಿಗಳೆಲ್ಲ ಬಟ್ಟೆ ಹಿಂಡಿ ಹಿಂಡಿ ಟಾಸ್ಕ್ ಮುಗಿಸಿದ್ರು. ಅದಾದ್ಮೇಲೆ ಮತ್ತೆ ಲೆಕ್ಕದ ಸವಾಲು ಎದುರಾಗಿತ್ತು.
ನಿಂದ ನೀರು ತಂದು ಕ್ಯಾನ್ ತುಂಬಿಸುವ ಸವಾಲು ಕೊಡಲಾಗಿತ್ತು. ಸ್ಪರ್ಧಿಗಳೆಲ್ಲ ಬಟ್ಟೆ ಹಿಂಡಿ ಹಿಂಡಿ ಟಾಸ್ಕ್ ಮುಗಿಸಿದ್ರು. ಅದಾದ್ಮೇಲೆ ಮತ್ತೆ ಲೆಕ್ಕದ ಸವಾಲು ಎದುರಾಗಿತ್ತು. ಮ್ಯೂಸಿಕಲ್ ಚೇರ್ ನಲ್ಲಿ ಹೊರಬಿದ್ದವರೆಲ್ಲ 800 ರಿಂದ 1ರವರೆಗೆ ಅಂಕಿಗಳನ್ನು ಉಲ್ಟಾ ಎಣಿಸುವ ಸವಾಲನ್ನು ಕೊಡಲಾಗಿತ್ತು. ಗಂಟೆಗಟ್ಟಲೆ ಸರ್ಕಸ್ ಮಾಡಿ ಕೊನೆಗೂ ಸ್ಪರ್ಧಿಗಳು ಟಾಸ್ಕ್ ಮುಗಿಸಿದ್ರು. ಅದಾದ್ಮೇಲೆ ಬೀನ್ ಬ್ಯಾಗ್ ಗಳಲ್ಲಿ ಬೀನ್ ತುಂಬಲು ಬಿಗ್ ಬಾಸ್ ಸೂಚನೆ ನೀಡಿದ್ರು. ಕೈಯ್ಯಲ್ಲೇ ಬೀನ್ ತೆಗೆದುಕೊಂಡು ಬಂದು ಬ್ಯಾಗ್ ಗೆ ತುಂಬಿಸಬೇಕು. ಮನೆಯ ಸದಸ್ಯರೆಲ್ಲ ಪ್ಲಾನ್ ಮಾಡಿ ಕೈಗಳನ್ನು ಒದ್ದೆ ಮಾಡಿಕೊಂಡು ಲಗುಬಗನೆ ಬ್ಯಾಗ್ ತುಂಬಿಸಿದ್ರು. ಸಮೀರ್ ಆಚಾರ್ಯ ತೀರಾ ತಡವಾಗಿ ಅಡುಗೆ ಮಾಡಿಕೊಳ್ತಿರೋದು ಮನೆಯ ಸದಸ್ಯರ ಅಸಮಾಧಾನಕ್ಕೆ ಕಾರಣವಾಗಿದೆ ಅಂತಾ ಕ್ಯಾಪ್ಟನ್ ಚಂದನ್ ವಿಷಯ ಪ್ರಸ್ತಾಪಿಸಿದ್ರು.
ಎಲ್ಲರೆದುರು ಈ ವಿಷಯ ಎತ್ತಿ ಸಮಸ್ಯೆ ಬಗೆಹರಿಸ್ತೀನಿ ಅಂತಾನೂ ಅಭಯ ನೀಡಿದ್ರು. ಟಾಸ್ಕ್ ಮುಗಿದ ಬೆನ್ನಲ್ಲೇ ಅನುಪಮಾ ಹಾಗೂ ಜಗನ್ ಮಧ್ಯೆ ಮಾತಿನ ಚಕಮಕಿಯೂ ನಡೀತು. ಇನ್ನೊಂದ್ಕಡೆ ಅಡುಗೆ ಮನೆ ಗಲೀಜು ಮಾಡ್ತಿದ್ದಾರೆ ಅಂತಾ ಕೃಷಿ ಕೋಪ ಹೊರಹಾಕಿದ್ರು. ಫುಟ್ಬಾಲ್ ಕ್ರೀಡೆಯನ್ನು ಪ್ರೋತ್ಸಾಹಿಸಲು ಬಿಗ್ ಬಾಸ್ ಮನೆಯಲ್ಲೂ ಪಂದ್ಯ ಆಯೋಜಿಸಲಾಗಿತ್ತು. ಫನ್ನಿ ಮ್ಯಾಚ್ ನಲ್ಲಿ ಜೆಕೆ ನೇತೃತ್ವದ ತಂಡ ಗೆಲುವು ಸಾಧಿಸ್ತು. ಮನೆಯ ಸದಸ್ಯರೆಲ್ಲಾ ತಮ್ಮ ಮೊದಲ ಪ್ರೀತಿಯ ಬಗ್ಗೆ ಹೇಳಿಕೊಂಡಿದ್ದಾರೆ. ಪ್ರೇಮ ವೈಫಲ್ಯವನ್ನು ಎಲ್ರೂ ಫನ್ನಿಯಾಗೇ ಜನರ ಮುಂದಿಟ್ಟಿದ್ದಾರೆ.
Comments