ಅರಬ್ ದೇಶದಲ್ಲಿ ಸದ್ದು ಮಾಡಿದೆ ಶಿವಣ್ಣನ ಟಗರು

ಅರಬ್ ದೇಶದಲ್ಲಿ ಬಿಡುಗಡೆಯಾದ ಕನ್ನಡದ ಮೊದಲ ಟೀಸರ್ ಎಂಬ ಹೆಗ್ಗಳಿಕೆಯನ್ನು 'ಟಗರು' ಪಡೆದಿದೆ. ಅಂದಹಾಗೆ, ಸೂರಿ ನಿರ್ದೇಶನದ ಈ ಚಿತ್ರ ಮುಂದಿನ ವರ್ಷ ಜನವರಿಯಲ್ಲಿ ತೆರೆಗೆ ಬರಲಿದೆ. ಇನ್ನು ಕಾರ್ಯಕ್ರಮದಲ್ಲಿ 'ಟಗರು' ಚಿತ್ರದ ಟೀಸರ್ ಕೂಡ ಬಿಡುಗಡೆ ಮಾಡಲಾಗಿದೆ. ಅಲ್ಲಿನ ಕನ್ನಡಿಗರು ಕೂಡ ಟೀಸರ್ ನೋಡಿ ಮೆಚ್ಚಿಕೊಂಡಿದ್ದಾರೆ.
'ಟಗರು' ಸಿನಿಮಾದ ಟೀಸರ್ ಈಗ ಮಸ್ಕತ್ ನಲ್ಲಿ ರಿಲೀಸ್ ಆಗಿದೆ. ಕನ್ನಡ ರಾಜ್ಯೋತ್ಸವದ ವಿಶೇಷವಾಗಿ ಮತ್ತು ಡಾ.ರಾಜ್ ಸ್ಮರಣಾರ್ಥ ನವೆಂಬರ್ 11ರಂದು ಅಲ್ಲಿ 'ನಿನ್ನ ಮರೆಯಲಾರೆ' ಎಂಬ ಕಾರ್ಯಕ್ರಮವನ್ನು ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ನಟ ಶಿವರಾಜ್ ಕುಮಾರ್ ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದಾರೆ. ಜೊತೆಗೆ ಗಾಯಕ ವಿಜಯ ಪ್ರಕಾಶ್ ಅಣ್ಣಾವ್ರ ಹಾಡನ್ನು ಹಾಡಿದ್ದಾರೆ.
Comments