ಖಡಕ್ ಪೊಲೀಸ್ ಗೆಟಪ್ ನಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್!

ಚಿತ್ರರಂಗಕ್ಕೆ ಬಂದು ಇಷ್ಟು ವರ್ಷಗಳಲ್ಲಿ ಹೆಚ್ಚಾಗಿ ಹೋಮ್ಲಿ ಲುಕ್ ನಲ್ಲಿ ರಚಿತಾ ರಾಮ್ ಕಾಣಿಸಿಕೊಂಡಿದ್ದರು. ಆದರೆ ಈಗ ಇದೇ ಮೊದಲ ಬಾರಿಗೆ ವಿಭಿನ್ನ ಪಾತ್ರ ಮಾಡುವುದಕ್ಕೆ ರಚಿತಾ ಮುಂದಾಗಿದ್ದಾರೆ. ಈ ಚಿತ್ರವನ್ನು ಆರ್.ಜೆ.ಮಯೂರ್ ನಿರ್ದೇಶನ ಮಾಡಲಿದ್ದಾರೆ.
ರಚಿತಾ ರಾಮ್ ತಮ್ಮ ಹೊಸ ಸಿನಿಮಾದಲ್ಲಿ ಪೊಲೀಸ್ ಪಾತ್ರವನ್ನು ಮಾಡಲಿದ್ದಾರೆ. ಈ ಹಿಂದೆ ರಚಿತಾ ನಿರ್ಮಾಣದ 'ರಿಷಭಪ್ರಿಯ' ಕಿರುಚಿತ್ರವನ್ನು ನಿರ್ದೇಶನ ಮಾಡಿದ್ದ ಆರ್.ಜೆ.ಮಯೂರ್ ಇದೇ ಮೊದಲ ಬಾರಿಗೆ ದೊಡ್ಡ ಸಿನಿಮಾವನ್ನು ಮಾಡುತ್ತಿದ್ದಾರೆ. ಚಿತ್ರದಲ್ಲಿ ರಚಿತಾ ಪೊಲೀಸ್ ಪಾತ್ರವನ್ನು ಮಾಡುತ್ತಿದ್ದು, ಇಲ್ಲಿ ಅವರು ಖಾಕಿ ತೊಡುವುದಿಲ್ಲವಂತೆ. ಮಫ್ತಿ ಪೊಲೀಸ್ ವೇಷದಲ್ಲಿ ರಚಿತಾ ಚಿತ್ರದಲ್ಲಿ ಕಾಣಿಸಿಕೊಳಲಿದ್ದಾರೆ. ಇನ್ನು ಇಡೀ ಚಿತ್ರದಲ್ಲಿ ರಚಿತಾ ಲುಕ್ ಮತ್ತು ಡೈಲಾಗ್ ಗಳು ಸಖತ್ ಖಡಕ್ ಆಗಿ ಇರಲಿದೆಯಂತೆ. ರಚಿತಾ ಅವರ ಈ ಹೊಸ ಸಿನಿಮಾ ಡಿಸೆಂಬರ್ ಮೂರನೇ ವಾರ ಶುರುವಾಗಲಿದ್ದು, ಜನವರಿ ಅಂತ್ಯಕ್ಕೆ ಶೂಟಿಂಗ್ ಮುಗಿಸುವ ಪ್ಲಾನ್ ಚಿತ್ರತಂಡದ್ದು. ಇನ್ನು ಅಂದುಕೊಂಡಂತೆ ಸಿನಿಮಾ ಮೇ ವೇಳೆಗೆ ರಿಲೀಸ್ ಆಗಲಿದೆ.ಈ ಸಿನಿಮಾದ ಟೈಟಲ್ ಇನ್ನೂ ಫಿಕ್ಸ್ ಆಗಿಲ್ಲ. ಆದರೆ 'ಈ ಚಿತ್ರ ಕಡ್ಡಾಯವಾಗಿ ಕನ್ನಡಿಗರಿಗೆ ಮಾತ್ರ' ಎನ್ನುವ ಮೂಲಕ ನಿರ್ದೇಶಕರು ದೊಡ್ಡ ನಿರೀಕ್ಷೆ ಹುಟ್ಟಿಸಿದ್ದಾರೆ.
Comments