ರಿಯಾಜ್ ಮಾಡಿದ್ದೂ ತಪ್ಪು ಎನ್ನುವ ಅನುಪಮಾ ತಾನು ಮಾಡಿದ್ದು ಮಾತ್ರ ಸರಿನಾ..?

ಬಿಸ್ಕತ್ತು ಪ್ಯಾಕೆಟ್ ಹಾಗೂ ಕೇಕ್ ಪ್ಯಾಕೆಟ್ ಸಿಕ್ಕ ತಕ್ಷಣ ಲೆಕ್ಕ ಮಾಡಿ, ''ಎಲ್ಲರಿಗೂ ಒಂದೊಂದು ಬರುತ್ತೆ'' ಅಂತ ಹೇಳ್ತಾ, ''ಇದು ನನಗೆ, ಇದು ಜಗನ್ ಗೆ, ಇದು ಕೃಷಿಗೆ, ಇದು ಆಶಿತಾಗೆ'' ಎನ್ನುತ್ತಾ ಅಷ್ಟೂ ಜನರ ಪಾಲನ್ನ ಅನುಪಮಾ ಗೌಡ ಎತ್ಕೊಂಡ್ ಬಿಟ್ಟರು.
ಹಿಂದಿನ ವಾರ ಸಮೀರಾಚಾರ್ಯ ಕ್ಯಾಪ್ಟನ್ ಆಗಿದ್ದಾಗ, ಅವರಿಗೆ ಅಡುಗೆ ಮಾಡಿಕೊಳ್ಳಲು ಸರಿಯಾಗಿ ಸಮಯ ಸಿಗದ ಕಾರಣ ಸಮೀರಾಚಾರ್ಯ ಹೆಚ್ಚು ಹಣ್ಣುಗಳನ್ನು ಸೇವಿಸಿದ್ದರು. ಇದರ ಬಗ್ಗೆ ಅದೇ ಸೆಲೆಬ್ರಿಟಿ ಸ್ಪರ್ಧಿಗಳು ಪ್ರಶ್ನೆ ಮಾಡಿದ್ದಕ್ಕೆ, ಹಣ್ಣುಗಳನ್ನ ಹಂಚಿಬಿಡುವುದೇ ವಾಸಿ ಅಂತ ರಿಯಾಝ್ ಸಮನಾಗಿ ಹಂಚಿಕೆ ಮಾಡಿದರು. ಇದೂ ಕೂಡ ಅನುಪಮಾ ಗೌಡ, ಆಶಿತಾ, ಕೃಷಿಗೆ ಸಿಟ್ಟು ತರಿಸಿತು. ಮನೆಯ ಸದಸ್ಯರಿಗೆಲ್ಲ 'ಬಿಗ್ ಬಾಸ್' ಬಿಸ್ಕತ್ತು ಹಾಗೂ ಕೇಕ್ ಕಳುಹಿಸಿದ್ದರು. ಬಿಸ್ಕತ್ತು ಹಾಗು ಕೇಕ್ ಬಂದ ಕೂಡಲೆ ಎಷ್ಟು ಪ್ಯಾಕೆಟ್ ಗಳಿವೆ ಅಂತ ಸಿಹಿ ಕಹಿ ಚಂದ್ರು ಎಣಿಸಿದರು.. ಕ್ಯಾಪ್ಟನ್ ಆಗಿದ್ದ ರಿಯಾಝ್, ಹಣ್ಣುಗಳನ್ನು ಹಂಚಿಕೆ ಮಾಡಿದ್ದು ಇಷ್ಟ ಆಗಲಿಲ್ಲ' ಎಂದು ಹೇಳಿದ್ದ ಅನುಪಮಾ ಬಿಸ್ಕತ್ತು, ಕೇಕ್ ಬಂದಾಗ ಅದನ್ನ ಭಾಗ ಮಾಡುತ್ತಿದ್ದರು. ಈ ಟಾಪಿಕ್ ಬಗ್ಗೆ ಶನಿವಾರ ಸುದೀಪ್ ಮಾತನಾಡಲೇಬೇಕು ಅಂತ ಕಲರ್ಸ್ ಸೂಪರ್ ವಾಹಿನಿಯ ಫೇಸ್ ಬುಕ್ ಪುಟದಲ್ಲಿಯೇ ವೀಕ್ಷಕರು ಒತ್ತಾಯಿಸಿದ್ದಾರೆ.
Comments