ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ಭಾವುಕರಾಗಿದ್ದೇಕೆ ?

ಮಕ್ಕಳ ದಿನಾಚರಣೆ ಹಿನ್ನೆಲೆಯಲ್ಲಿ ಸ್ಪರ್ಧಿಗಳಿಗೆಲ್ಲ ಬಾಲ್ಯದ ಫೋಟೋಗಳನ್ನು ಪತ್ತೆ ಮಾಡುವ ಸ್ಪರ್ಧೆಯಿತ್ತು. ಅದರ ಜೊತೆಗೆ ಎಲ್ಲರೂ ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡ್ರು. ತಂದೆ-ತಾಯಿಯನ್ನು ನೆನೆದು ಕಣ್ಣೀರಿಟ್ಟರು. ಬಿಗ್ ಬಾಸ್ ಮನೆಯಲ್ಲಿ ಫನ್ನಿ ಗೇಮ್ ಜೊತೆಗೆ ಎಲ್ಲರೂ ಭಾವುಕರಾಗಿದ್ದೇ 30ನೇ ದಿನದ ಹೈಲೈಟ್.
ಭವಿಷ್ಯ ಹೇಳೋ ವಿಚಾರಕ್ಕೆ ಬಿಗ್ ಬಾಸ್ ಮನೆಯಲ್ಲಿ ಸಮೀರ್ ಆಚಾರ್ಯ ಹಾಗೂ ಜಯಶ್ರೀನಿವಾಸನ್ ಮಧ್ಯೆ ಮಾತಿನ ಚಕಮಕಿ ನಡೀತು. ಹೆಣ್ಣಿನ ಗ್ರಹ ಯಾವುದು ಅನ್ನೋ ಸಿಂಪಲ್ ಪ್ರಶ್ನೆಗೆ ಸಮೀರ್ ಸರಿಯಾಗಿ ಉತ್ತರಿಸಿಲ್ಲ ಅನ್ನೋದು ಜಯಶ್ರೀನಿವಾಸನ್ ವಾದ. ನಾಳೆಯಿಂದ ನಿಮ್ಮ ಬಳಿಯೇ ಪಾಠ ಹೇಳಿಸಿಕೊಳ್ತೀನಿ ಎನ್ನುವ ಮೂಲಕ ಸಮೀರ್ ಸೋಲೊಪ್ಪಿಕೊಂಡ್ರು. ಜೆಕೆ ಹಾಗೂ ಶ್ರುತಿ ಮಧ್ಯೆ ಫನ್ನಿ ಸಂಭಾಷಣೆ ನಡೀತು. ಶ್ರುತಿಯ ಕೆಟ್ಟ ಕನ್ನಡ ನೋಡಿ ಜೆಕೆ ಹಾಗೂ ಕೃಷಿ ತಮಾಷೆ ಮಾಡಿದ್ರು. ನಂತರ ನಡೆದಿದ್ದು ಮ್ಯೂಸಿಕಲ್ ಚೇರ್ ಸ್ಪರ್ಧೆ. ಮೊದಲ ರೌಂಡ್ ನಲ್ಲೇ ಹೊರಬಿದ್ದ ಜಗನ್, ಜೆಮ್ಸ್ ಅನ್ನು ಬಟ್ಟಲಿಗೆ ವರ್ಗಾಯಿಸುವ ಡಿಫರೆಂಟ್ ಶಿಕ್ಷೆಗೆ ತುತ್ತಾದ್ರು. ಎರಡನೆಯವರಾಗಿ ಹೊರಬಿದ್ದ ದಿವಾಕರ್ ಗೆ ಟಿಟಿ ಆಡುವ ಟಾಸ್ಕ್ ನೀಡಲಾಯ್ತು. ಗಂಟೆಗಟ್ಟಲೆ ಕಷ್ಟಪಟ್ಟು ಜಗಳವಾಡುತ್ತಲೇ ಆಡಿ ಮುಗಿಸಿದ್ರು. ನಂತರ ರಿಯಾಜ್ ಹೊರಬಿದ್ರು, ಮೂವರಿಗೂ 30 ಬಟ್ಟೆಗಳನ್ನು ಒಟ್ಟಿಗೆ ಧರಿಸುವ ವಿಚಿತ್ರ ಟಾಸ್ಕ್ ನೀಡಲಾಗಿತ್ತು.
Comments