ಮೊದಲ ಬಾರಿಗೆ ಕಾನ್ ಸ್ಟೇಬಲ್ ಆಗಿ ಮಂಗಳಮುಖಿ ನೇಮಕ

ಹೈಕೋರ್ಟ್ ತೀರ್ಪಿನ ನಂತರ ಮಂಗಳಮುಖಿಯರಿಗೆ ಸರ್ಕಾರಿ ನೌಕರಿ ಬಾಗಿಲು ತೆರೆದಂತಾಗಿದೆ. ಜಲೋರ್ ಜಿಲ್ಲೆಯ ಮಂಗಳಮುಖಿ ಗಂಗಾ ಕುಮಾರಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ರಾಜಸ್ತಾನ ಪೊಲೀಸ್ ಇಲಾಖೆಗೆ ಗಂಗಾ ನೇಮಕ ಮಾಡುವಂತೆ ಆದೇಶ ನೀಡಿದೆ.
ಹೈಕೋರ್ಟ್ ಆದೇಶದ ನಂತರ ರಾಜಸ್ಥಾನ ಪೊಲೀಸ್ ಇಲಾಖೆಯಲ್ಲಿ ಕಾನ್ಸ್ಟೇಬಲ್ ಆಗಿ ಇದೇ ಮೊದಲ ಬಾರಿ ಮಂಗಳಮುಖಿಯೊಬ್ಬರು ನೇಮಕಗೊಳ್ಳಲಿದ್ದಾರೆ. ನ್ಯಾಯಾಧೀಶ ದಿನೇಶ್ ಮೆಹ್ತಾ ಅರ್ಜಿ ವಿಚಾರಣೆ ನಡೆಸಿ ಈ ತೀರ್ಪು ನೀಡಿದ್ದಾರೆ. ಆರು ವಾರದಲ್ಲಿ ಗಂಗಾ ನೇಮಕ ಪೂರ್ಣಗೊಳ್ಳಬೇಕೆಂದು ನ್ಯಾಯಾಧೀಶರು ತಿಳಿಸಿದ್ದಾರೆ. ಮಂಗಳಮುಖಿಯೊಬ್ಬರು ಸರ್ಕಾರಿ ನೌಕರಿ ಸೇರುತ್ತಿರುವುದು ಇದೇ ಮೊದಲಾಗಿದೆ. 2013ರಲ್ಲಿ ರಾಜಸ್ಥಾನ ಪೊಲೀಸ್ ಇಲಾಖೆಯಲ್ಲಿ ನೇಮಕಾತಿ ಪರೀಕ್ಷೆ ನಡೆದಿತ್ತು. ಈ ಪರೀಕ್ಷೆಯಲ್ಲಿ ಗಂಗಾ ಪಾಸ್ ಆಗಿದ್ದಳು. ಪಟ್ಟಿಯಲ್ಲಿ ಆಕೆ ಹೆಸರಿತ್ತು. ಆದ್ರೆ ಮಂಗಳಮುಖಿ ಎನ್ನುವ ಕಾರಣಕ್ಕೆ ಉದ್ಯೋಗ ಸಿಕ್ಕಿರಲಿಲ್ಲ.
Comments