ರಿಯಾಝ್ ರನ್ನು ನಾಮಿನೇಟ್ ಮಾಡಿದವರಿಗೆ ಮುಖಭಂಗವಾಯಿತಾ ..!!

ರಿಯಾಝ್ ರವರ ನಡೆ, ತೆಗೆದುಕೊಂಡ ನಿರ್ಧಾರಗಳು ಕೆಲವರಿಗೆ ಇಷ್ಟ ಆಗಲಿಲ್ಲ. ಹೀಗಾಗಿ, ಈ ವಾರದ ನಾಮಿನೇಷನ್ ಪ್ರಕ್ರಿಯೆಯಲ್ಲಿ ರಿಯಾಝ್ ಟಾರ್ಗೆಟ್ ಆಗಿದ್ದರು.ನಿರೀಕ್ಷೆಯಂತೆ, ನಾಮಿನೇಷನ್ ಪ್ರಕ್ರಿಯೆಯಲ್ಲಿ ರಿಯಾಝ್ ವಿರುದ್ಧ ಅತಿ ಹೆಚ್ಚು ಮತಗಳು ಲಭ್ಯವಾದವು. ಆದ್ರೆ, ಚಂದನ್ ಶೆಟ್ಟಿ ಕೃಪೆಯಿಂದ ಕ್ಷಣಾರ್ಧದಲ್ಲಿ ರಿಯಾಝ್ ಸೇಫ್ ಅದ್ರು.
'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ನಾಲ್ಕನೇ ವಾರ ಲಕ್ ಮೇಲೆ ಕ್ಯಾಪ್ಟನ್ ಆದ ರಿಯಾಝ್ ಯಾರಿಗೂ ಭೇದಭಾವ ಮಾಡಬಾರದು ಎಂಬ ಕಾರಣಕ್ಕೆ ಕಾರ್ಪೊರೇಟ್ ಸ್ಟೈಲ್ ನಲ್ಲಿ ಮನೆ ನಡೆಸಿದರು. ಹಾಲು ಮುಚ್ಚಿಟ್ಟು ದೊಡ್ಡ ರಾದ್ಧಾಂತ ಆದ ಕಾರಣ, ಸ್ಟಾಕ್ ಚೆಕ್ಕಿಂಗ್ ಮಾಡಿದರು. ಆದರೆ, ಇದೆಲ್ಲ ಸೆಲೆಬ್ರಿಟಿ ಸ್ಪರ್ಧಿಗಳಿಗೆ ಹಿಡಿಸಲಿಲ್ಲ. ಇದೇ ಮೊದಲ ಬಾರಿಗೆ ಐದನೇ ವಾರ ಓಪನ್ ನಾಮಿನೇಷನ್ ಪ್ರಕ್ರಿಯೆ ನಡೆಯಿತು. ಪ್ರತಿಯೊಬ್ಬ ಸ್ಪರ್ಧಿ ಕೂಡ ತಾವು ನಾಮಿನೇಟ್ ಮಾಡಲು ಇಚ್ಛಿಸುವ ಇಬ್ಬರು ಸದಸ್ಯರ ಭಾವಚಿತ್ರಗಳಿಂದ ನಾಲ್ಕು ಬ್ಲಾಕ್ ಗಳನ್ನು ತೆಗೆದುಕೊಂಡು ಬೆಂಕಿಗೆ ಹಾಕಬೇಕಿತ್ತು.
ವಾರದ ಕ್ಯಾಪ್ಟನ್ ಆಗಿ ಚಂದನ್ ಶೆಟ್ಟಿ ಆಯ್ಕೆ ಆಗಿದ್ದರು. ಕ್ಯಾಪ್ಟನ್ ಚಂದನ್ ಶೆಟ್ಟಿಗೆ 'ಬಿಗ್ ಬಾಸ್' ಒಂದು ವಿಶೇಷ ಅಧಿಕಾರ ನೀಡಿದ್ದರು. ಅದೇನಪ್ಪಾ ಅಂದ್ರೆ, ಈಗಾಗಲೇ ನಾಮಿನೇಟ್ ಆಗಿರುವವರ ಪೈಕಿ ಒಬ್ಬರನ್ನು ನಾಮಿನೇಷನ್ ನಿಂದ ಮುಕ್ತ ಮಾಡುವ ಅಧಿಕಾರ ಚಂದನ್ ಶೆಟ್ಟಿಗೆ ಲಭಿಸಿತು. ವಿಶೇಷ ಅಧಿಕಾರ ಸಿಕ್ಕ ಕೂಡಲೆ, ಹಿಂದು ಮುಂದು ಯೋಚಿಸದ ಚಂದನ್ ಶೆಟ್ಟಿ, ರಿಯಾಝ್ ರವರನ್ನು ಸೇಫ್ ಮಾಡಿದರು. ಹೀಗಾಗಿ, ಅತಿ ಹೆಚ್ಚು ಮತ ಪಡೆದು ನಾಮಿನೇಟ್ ಆಗಿದ್ದ ರಿಯಾಝ್ ಕ್ಷಣಾರ್ಧಲ್ಲಿ ಸೇಫ್ ಆಗ್ಬಿಟ್ಟರು. ಚಂದನ್ ಗೆ ರಿಯಾಝ್ ಧನ್ಯವಾದ ಅರ್ಪಿಸಿದರು.
Comments