ಬಿಗ್ ಬಾಸ್ ಮನೆಯಲ್ಲಿ, ಓಪನ್ ನಾಮಿನೇಷನ್ ನಲ್ಲಿ ಯಾರೆಲ್ಲಾ ನಾಮಿನೇಟ್ ಆಗಿದ್ದಾರೆ ?

ಎಂದಿನ ಹಾಗೆ ಕನ್ಫೆಶನ್ ರೂಮ್ ಒಳಗೆ ಈ ಬಾರಿ ನಾಮಿನೇಷನ್ ಪ್ರಕ್ರಿಯೆ ನಡೆಯಲಿಲ್ಲ. ಬದಲಾಗಿ, ಗಾರ್ಡನ್ ಏರಿಯಾದಲ್ಲಿ 'ಬಿಗ್ ಬಾಸ್' ಅಗ್ನಿಕುಂಡ ಇರಿಸಿದ್ದರು. ಪ್ರತಿಯೊಬ್ಬ ಸ್ಪರ್ಧಿ ಕೂಡ ತಾವು ನಾಮಿನೇಟ್ ಮಾಡಲು ಇಚ್ಛಿಸುವ ಇಬ್ಬರು ಸದಸ್ಯರ ಭಾವಚಿತ್ರಗಳಿಂದ ನಾಲ್ಕು ಬ್ಲಾಕ್ ಗಳನ್ನು ತೆಗೆದುಕೊಂಡು ಬೆಂಕಿಗೆ ಹಾಕಬೇಕಿತ್ತು.
'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಐದನೇ ವಾರದ ಕ್ಯಾಪ್ಟನ್ ಆಗಿ ಚಂದನ್ ಶೆಟ್ಟಿ ಆಯ್ಕೆ ಆದರು. ಹೀಗಾಗಿ, ಚಂದನ್ ಶೆಟ್ಟಿ ನಾಮಿನೇಷನ್ ಪ್ರಕ್ರಿಯೆಯಲ್ಲಿ ಸೇಫ್ ಆಗಿ ಉಳಿದರು. ಯಾವುದೇ ಕೆಲಸ ಮಾಡಲು ಮುಂದೆ ಬರಲ್ಲ, ಆಕೆ ಮಗು ಅಲ್ಲ ಎಂಬ ಕಾರಣ ನೀಡಿ ಅನುಪಮಾ ಗೌಡ, ಜಗನ್ನಾಥ್, ಆಶಿತಾ ಹಾಗೂ ಶ್ರುತಿ ಪ್ರಕಾಶ್.... ನಿವೇದಿತಾ ಗೌಡ ವಿರುದ್ಧ ಮತ ಚಲಾಯಿಸಿದರು. ದಿವಾಕರ್ ಮತ್ತು ರಿಯಾಝ್... ಕೃಷಿ ತಾಪಂಡ ಭಾವಚಿತ್ರದಿಂದ ಬ್ಲಾಕ್ ಗಳನ್ನು ತೆಗೆದು ಬೆಂಕಿಗೆ ಸಮರ್ಪಿಸಿದರು. ಹೀಗಾಗಿ, ಕೃಷಿ ತಾಪಂಡ ಕೂಡ ನಾಮಿನೇಟ್ ಆಗಬೇಕಾಯ್ತು. ಸಮೀರಾಚಾರ್ಯ ಮತ್ತು ಜಯಶ್ರೀನಿವಾಸನ್.... ಸಿಹಿ ಕಹಿ ಚಂದ್ರು ವಿರುದ್ಧ ಮತ ಚಲಾಯಿಸಿದರು. ದಿವಾಕರ್ ಮತ್ತು ಸಮೀರಾಚಾರ್ಯ.... ಜಗನ್ನಾಥ್ ಚಂದ್ರಶೇಖರ್ ರನ್ನ ನಾಮಿನೇಟ್ ಮಾಡಿದರು. ಆಶಿತಾ ಡಬಲ್ ಫೇಸ್ಡ್ ಎಂದು ಕಾರಣ ನೀಡಿ ರಿಯಾಝ್ ಹಾಗೂ ನಿವೇದಿತಾ ನಾಮಿನೇಟ್ ಮಾಡಿದರು. ಸಿಹಿ ಕಹಿ ಚಂದ್ರು ಮತ್ತು ಜೆಕೆ ವೋಟ್ ಹಾಕಿದ್ರಿಂದಾಗಿ ದಿವಾಕರ್ ಕೂಡ ನಾಮಿನೇಟ್ ಆದರು. ಸಮೀರಾಚಾರ್ಯ, ಜಯಶ್ರೀನಿವಾಸನ್, ಅನುಪಮಾ ಗೌಡ ಹಾಗೂ ಜಯರಾಂ ಕಾರ್ತಿಕ್ (ಜೆಕೆ) ರವರಿಗೆ ತಲಾ ಒಂದು ವೋಟ್ ಬಿದ್ದ ಪರಿಣಾಮ ನಾಮಿನೇಷನ್ ಲಿಸ್ಟ್ ನಿಂದ ಬಚಾವ್ ಆದರು.
Comments