ಚಿತ್ರರಂಗ ಬಿಡುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ : ಉಪೇಂದ್ರ

ನಾನು ಸಿನಿಮಾ ಬಿಡುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ, ಆದರೆ ನನಗೆ ಸ್ವಲ್ಪ ಬಿಡುವು ಬೇಕು, ನಾನು ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ, ಹಾಲಲ್ಲಾದರೂ ಹಾಕು, ನೀರಲ್ಲಾದರೂ ಹಾಕು ಎಂಬ ವಾಕ್ಯದಂತೆ ನಡೆಯುತ್ತೇನೆ, ಜನರಿಗೆ ನಾನು ಬೇಕಾದರೇ ಅವರೇ ನಿರ್ಧಾರ ತೆಗೆದುಕೊಳ್ಳುತ್ತಾರೆ, ನಟನೆ ಬೇಕೆಂದರೆ ಅದಕ್ಕಾಗಿಯೂ ನಾನು ವಾಪಸ್ ಬರುತ್ತೇನೆ ಎಂದು ಉಪೇಂದ್ರ ಹೇಳಿದ್ದಾರೆ.
ತಮ್ಮ ಪಕ್ಷದ ಪೊಲಿಟಿಕಲ್ ಆಯಪ್ ಬಿಡುಗಡೆ ಮಾಡಿದ ಉಪೇಂದ್ರ ಅದೇ ದಿನ ಸಂಜೆ 'ಉಪೇಂದ್ರ ಮತ್ತೆ ಬಾ' ಸಿನಿಮಾದ ಮಾದ್ಯಮ ಸಂವಾದದಲ್ಲಿ ಪಾಲ್ಗೊಂಡಿದ್ದರು. ಒಬ್ಬ ನಿರ್ದೇಶಕನಾಗಿ ತೆರೆಯ ಮೇಲೆ ಅಭಿಮಾನಿಗಳು ಉಪೇಂದ್ರ ಅವರನ್ನು ನೋಡಲು ಬಯಸುತ್ತಾರೆ. ರಾಜಕೀಯ ಸೇರಿದ ಮೇಲೂ ಸಿನಿಮಾ ರಂಗದಲ್ಲಿ ಸಕ್ರಿಯರಾಗಿ ಉಳಿದ ಕೆಲವು ಕಲಾವಿದರು ನಮ್ಮಲ್ಲಿ ಇದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಉಪೇಂದ್ರ, ರಾಜಕೀಯ ಪ್ರವೇಶಿಸುವ ಮುನ್ನ ಹಾಗೂ ನಂತರ ಜನತೆಗಾಗಿ ಏನನ್ನಾದರೂ ಮಾಡಲು ಬಯಸಿದ್ದೆ, ಆದರೆ ರಾಜಕೀಯದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಸ್ವಲ್ಪ ಕಾಲಾವಕಾಶದ ಅವಶ್ಯಕತೆಯಿದೆ ಎಂದು ಹೇಳಿದ್ದಾರೆ.
Comments