ಬಿಗ್ ಬಾಸ್- 5 : ' ಕಿಚ್ಚನ್ ಟೈಮ್ ' ಗೆ ಆಗಮಿಸಿದ ಕನಸಿನ ರಾಣಿ

'ಕಿಚ್ಚನ್ ಟೈಮ್'ಗೆ ಅತಿಥಿಯಾಗಿ ನಟಿ ಮಾಲಾಶ್ರೀ ಆಗಮಿಸಿದ್ದರು. ವೆಜ್ ಮತ್ತು ನಾನ್ ವೆಜ್ ಅಡುಗೆ ತಯಾರಿಸಿ, ರುಚಿ ಸವಿದಿದ್ದಾರೆ. ಇದೇ ಸಂದರ್ಭದಲ್ಲಿ ಅಡುಗೆ ಮಾಡಲು ಕಲಿತಿದ್ದು, ಸಿನಿಮಾ ರಂಗದ ನೆನಪುಗಳನ್ನು ಮೆಲುಕು ಹಾಕಿದ್ದಾರೆ.
ಸಿಹಿ, ಕಹಿ ಕ್ಷಣಗಳ ಕುರಿತಾಗಿ ಮಾತನಾಡಿದ್ದಾರೆ. 'ಕಿಚ್ಚನ್ ಟೈಮ್' ಅನುಭವವೇ ವಿಭಿನ್ನವಾದುದು ಎಂದು ಹೇಳಿದ್ದಾರೆ. ಅತಿಥಿಯಾಗಿ ಆಗಮಿಸಿದ್ದ ಮಾಲಾಶ್ರೀ ಅವರಿಗೆ ಸುದೀಪ್ ಉಡುಗೊರೆ ನೀಡಿದ್ದಾರೆ. ಈ ವಾರ ಮನೆಯಿಂದ ಹೊರ ಬಂದಿರುವ ತೇಜಸ್ವಿನಿ, 'ಸೂಪರ್ ಸಂಡೇ ವಿತ್ ಸುದೀಪ್' ವೇದಿಕೆಯಲ್ಲಿ ಮನೆಯಲ್ಲಿನ ಅನುಭವ ಹಂಚಿಕೊಂಡಿದ್ದಾರೆ. 'ಬಿಗ್ ಬಾಸ್'ಗೆ 2 ನೇ ಸಲ ಎಂಟ್ರಿ ಪಡೆದರೂ, ಹೊರಗೆ ಬಂದಿದ್ದು ಬೇಸರವಾಗಿದೆ. ಇನ್ನಷ್ಟು ದಿನ ಇರಬೇಕಿತ್ತು. ಮತ್ತೆ ಕಳಿಸಿದರೆ ಒಳಗೆ ಹೋಗುತ್ತೇನೆ ಎಂದು ಹೇಳಿದ್ದಾರೆ. 27 ದಿನಗಳ ಕಾಲ 'ಬಿಗ್ ಬಾಸ್' ಮನೆಯಲ್ಲಿದ್ದ ಅವರು, 2 ದಿನ ತಂದೆಯ ಅನಾರೋಗ್ಯದ ಕಾರಣದಿಂದ ಹೊರಗೆ ಹೋಗಿದ್ದರು.
ಮನೆಯಲ್ಲಿ ನಾನು ಸೇಫ್ ಪ್ಲೇಯರ್ ಆಗೋದೆ ಅನಿಸ್ತು. ಅದೇ ಹೊರ ಬರಲು ಕಾರಣವಾಗಿರಬಹುದು ಎಂದು ತಿಳಿಸಿದ್ದಾರೆ. ಇನ್ನು ಮನೆಯಲ್ಲಿನ ಅನುಭವ ವಿಶೇಷವಾಗಿತ್ತು. ಜಾಯಿಂಟ್ ಫ್ಯಾಮಿಲಿ, ಎಲ್ಲವನ್ನೂ ಹಂಚಿಕೊಳ್ಳುವುದು ಇಷ್ಟವಾಯ್ತು ಎಂದು ಹೇಳಿದ ಅವರು, ಮನೆಯ ಸದಸ್ಯರ ಕುರಿತಾಗಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ. 'ಬಿಗ್ ಬಾಸ್' ಮನೆಯ ಅನುಭವ ಜೀವನದಲ್ಲಿ ಮರೆಯಲಾಗದ ಕ್ಷಣ ಎಂದಿದ್ದಾರೆ. ಮನೆಯಲ್ಲಿನ ತಮ್ಮ ಸಿಹಿ, ಕಹಿ ಕ್ಷಣಗಳನ್ನು ತೋರಿಸಿದ ಸಂದರ್ಭದಲ್ಲಿ ತೇಜಸ್ವಿನಿ ಕುತೂಹಲದಿಂದ ವೀಕ್ಷಿಸಿದ್ದಾರೆ. ನಂತರದಲ್ಲಿ 'ಬಿಗ್ ಬಾಸ್' ವೇದಿಕೆಗೆ ಆಗಮಿಸಿದ್ದ 'ಉಪ್ಪು ಹುಳಿ ಖಾರ' ಚಿತ್ರತಂಡದವರು ಹಾಡಿಗೆ ನೃತ್ಯ ಪ್ರದರ್ಶಿಸಿದ್ದಾರೆ. ಸುದೀಪ್ ಅವರಿಗೆ ನೃತ್ಯ ಮಾಡುವಂತೆ ಚಿತ್ರತಂಡದವರು ಕೋರಿದಾಗ, ಸುದೀಪ್ ತಮ್ಮದೇ ಸ್ಟೈಲ್ ನಲ್ಲಿ ಡ್ಯಾನ್ಸ್ ಮಾಡಿದ್ದು ವಿಶೇಷವಾಗಿತ್ತು.
Comments