ಪದ್ಮಾವತಿ ಚಿತ್ರ ಬಿಡುಗಡೆ ರದ್ದುಗೊಳಿಸುವಂತೆ ಸಲ್ಲಿಸಿದ್ದ ಅರ್ಜಿ ವಜಾ
ಪದ್ಮಾವತಿ ಸಿನಿಮಾದಲ್ಲಿ ರಜಪೂತ ಸಮುದಾಯದ ಭಾವನೆಗಳಿಗೆ ನೋವುಂಟು ಮಾಡುವಂತ ಅಂಶಗಳಿವೆ, ಹೀಗಾಗಿ ಸಿನಿಮಾ ಬಿಡುಗಡೆ ರದ್ದುಗೊಳಿಸುವಂತೆ ಗುಂಪೊಂದು ಅರ್ಜಿ ಸಲ್ಲಿಸಿತ್ತು. ಪದ್ಮಾವತಿ ಸಿನಿಮಾ ರಿಲೀಸ್ ಮಾಡದಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.
ಸೆನ್ಸಾರ್ ಬೋರ್ಡ್ ಇದುವರೆಗೂ ಪದ್ಮಾವತಿ ಚಿತ್ರಕ್ಕೆ ಪ್ರಮಾಣಪತ್ರ ನೀಡಿಲ್ಲ, ಸೆನ್ಸಾರ್ ಬೋರ್ಡ್ ಒಂದು ಸ್ವತಂತ್ರ್ಯ ಸಂಸ್ಥೆ, ಸುಪ್ರೀಂಕೋರ್ಟ್ ಅದರ ಕಾರ್ಯವ್ಯಾಪ್ತಿಯಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ಡಿಸೆಂಬರ್ 1 ರಂದು ಬಿಡುಗಡೆಗೆ ಸಿದ್ಧವಾಗಿರುವ ಪದ್ಮಾವತಿ ಸಿನಿಮಾಗೆ ಹಲವು ವಿರೋಧಗಳು ವ್ಯಕ್ತವಾಗಿವೆ. ಸಿನಿಮಾ ಪ್ರದರ್ಶನ ಮಾಡದಂತೆ ಹಲವು ಮಂದಿ ಪ್ರತಿಭಟನೆ ಕೂಡ ನಡೆಸಿದ್ದಾರೆ.
Comments