ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ಸೂಪರ್ ಮ್ಯಾನ್

ಸ್ಪೈಡರ್ ಮ್ಯಾನ್, ಐರನ್ ಮ್ಯಾನ್ ಗಳನ್ನ ನೋಡಿದ್ದೀರಿ. ಇನ್ನು ಮುಂದೆ ನಮ್ಮ ಕನ್ನಡ ಚಿತ್ರದಲ್ಲೂ ಸಹ ಈ ಮ್ಯಾನ್ ಗಳನ್ನ ನೋಡಬಹುದು. ಹೌದು. ಮೊದಲ ಸಿನೆಮಾದಲ್ಲಿ ಸ್ಪೆಷಲ್ ಆಗಿ ಕಾಣಿಸಿಕೊಂಡ ನಿರೂಪ್ ಭಂಡಾರಿ ತಮ್ಮ ' ರಾಜರಥ' ಚಿತ್ರದಲ್ಲಿ ಸೂಪರ್ ಮ್ಯಾನ್ ಆಗಿ ಕಾಣಿಸಿಕೊಳ್ಳಲಿದ್ದಾರೆ.
ಈ ಚಿತ್ರದಲ್ಲಿ ಅಭಿ ಅಲಿಯಾಸ್ ಮಿಸ್ಟರ್ ಪಚ್ಬಾಳೆಯಾಗಿ ಕಾಣಿಸಿಕೊಂಡಿರುವ ನಿರೂಪ್ ಭಂಡಾರಿ ಸೂಪರ್ ಮ್ಯಾನ್ ಟೀಶರ್ಟ್ ತೊಟ್ಟು ಪೋಸ್ ಕೊಟ್ಟಿದ್ದಾರೆ. ಶಾರ್ಟ್ಸ್ ಹಾಕ್ಕೊಂಡು ಹುಡುಗಿಯರ ಹಾಸ್ಟೆಲ್ ಎದುರು ನಿಂತಿರುವ ಪೋಸ್ಟರ್ ಕುತೂಹಲ ಸೃಷ್ಟಿಸಿದೆ. ಹೊಸ ಹ್ಯಾಸಲ್ ಬ್ಲಾಡ್ ಕ್ಯಾಮರಾದಲ್ಲಿ ಬಾಲಿವುಡ್ನ ಖ್ಯಾತ ಫೋಟೋಗ್ರಾಫರ್ ಮನೀಷ್ ಠಾಕುರ್ ಈ ಚಿತ್ರಗಳನ್ನು ತೆಗೆದಿದ್ದಾರೆ. ಫರ್ನ್ ಹಿಲ್ ಇಂಜಿನಿಯರಿಂಗ್ ಕಾಲೇಜಿನ ಅಭಿ ಅಲಿಯಾಸ್ ಮಿಸ್ಟರ್ ಪಚ್ಬಾಳೆಯ ಸಾಹಸಮಯ ಕಥೆಯೇ ರಾಜರಥ. ಈ ಚಿತ್ರ ತೆಲುಗು ಮತ್ತು ಕನ್ನಡದಲ್ಲಿ ಏಕಕಾಲಕ್ಕೆ ರಿಲೀಸ್ ಆಗಲಿದೆ. ಅಂದಹಾಗೇ ಈ ಚಿತ್ರದಲ್ಲಿ ನಿರೂಪ್ ಭಂಡಾರಿ, ಅವಂತಿಕಾ ಶೆಟ್ಟಿ, ರವಿಶಂಕರ್ ಜೊತೆಗೆ ಆರ್ಯ ನಟಿಸಿದ್ದಾರೆ. ಅನೂಪ್ ಭಂಡಾರಿ ಈ ಸಿನೆಮಾದ ನಿರ್ದೇಶಕ. ಜೊತೆಗೆ ಸಂಗೀತ ಕೂಡಾ ಇವರದ್ದೇ. ಹಾಗೆಯೇ ಈ ಚಿತ್ರವನ್ನು ಅಜಯ್ ರೆಡ್ಡಿ, ಅಂಜು ವಲ್ಲಭ್, ವಿಷ್ಣು ಡಾಕಪ್ಪಗರಿ, ಸತೀಶ್ ಶಾಸ್ತ್ರಿ ಮುಂತಾದವರು ನಿರ್ಮಿಸುತ್ತಿದ್ದಾರೆ. ತಮಿಳಿನ ಜನಪ್ರಿಯ ನಟ ಆರ್ಯ, ಈ ಚಿತ್ರದ ಮೂಲಕ ಕನ್ನಡಕ್ಕೆ ಕಾಲಿಟ್ಟಿದ್ದು, ಈಗಾಗಲೇ ಶೂಟಿಂಗ್ನಲ್ಲಿ ಪಾಲ್ಗೊಂಡಿದ್ದಾರೆ. ಈ ಚಿತ್ರದಲ್ಲಿ ಆರ್ಯ ಅವರ ಪಾತ್ರ ಏನು ಎಂಬುದನ್ನು ಚಿತ್ರತಂಡದವರು ಬಹಿರಂಗಗೊಳಿಸಿಲ್ಲ. ಆರ್ಯ ಅವರ ಪಾತ್ರವನ್ನು ರಹಸ್ಯವಾಗಿಡಲಾಗಿದೆ.
Comments