ಹುಟ್ಟುಹಬ್ಬದಂದು ರಜನೀಕಾಂತ್ ರಾಜಕೀಯಕ್ಕೆ ಎಂಟ್ರಿ
ತಮಿಳು ಸೂಪರ್ ಸ್ಟಾರ್ ರಜನೀಕಾಂತ್ ಅವರು ಡಿ.12ರ ತಮ್ಮ ಹುಟ್ಟುಹಬ್ಬದ ದಿನ ರಾಜಕೀಯ ರಂಗವನ್ನು ಪ್ರವೇಶಿಸಲಿದ್ದಾರೆ. ರಜನೀಕಾಂತ್ ಎಡ - ಬಲ ಮುಂತಾಗಿ ಯಾವುದೇ ಪಕ್ಷವನ್ನು ಸೇರುವುದಿಲ್ಲ; ಬದಲು ತಮ್ಮದೇ ಪಕ್ಷವನ್ನು ಆರಂಭಿಸಲಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ತಾನು ರಾಜಕೀಯ ಪ್ರವೇಶಿಸಲಿದ್ದೇನೆ ಎಂಬುದಾಗಿ ರಜನೀಕಾಂತ್ ಅವರು ಕಳೆದ ಆಗಸ್ಟ್ ತಿಂಗಳಲ್ಲೇ ಹೇಳಿದ್ದರು. ತಮಿಳು ಚಿತ್ರ ನಟ ಕಮಲಹಾಸನ್ ಅವರು ತಮ್ಮ ಅಭಿಮಾನಿಗಳನ್ನು ತಲುಪಲು ಮೊಬೈಲ್ ಆಯಪ್ ಒಂದನ್ನು ಬಿಡುಗಡೆ ಮಾಡಿದ್ದರು. ಒಂದೊಮ್ಮೆ ರಜನೀಕಾಂತ್ ರಾಜಕೀಯ ರಂಗವನ್ನು ಪ್ರವೇಶಿಸಿದರೆ ತಾನೂ ಆತನ ಜತೆ ಸೇರಿಕೊಳ್ಳುವೆ ಎಂದು ಕಮಲಹಾಸನ್ ಹೇಳಿದ್ದರು.
Comments