'ನಿರ್ಮಾಪಕರ ಕುಟುಂಬದ ಮಹಿಳೆಯರಿಗೆ ದಿನಕೊಬ್ಬ ಪತಿ ಬೇಕು', ವಿವಾದ ಸೃಷ್ಟಿಸಿದ ಈ ಮಾತು

ನವದೆಹಲಿ: ಚಿತ್ರ ನಿರ್ಮಾಪಕರ ಕುಟುಂಬದ ಮಹಿಳೆಯರಿಗೆ ದಿನಕೊಬ್ಬ ಪತಿ ಬೇಕು. ಆದಕಾರಣ ಅವರಿಗೆ ಆತ್ಮಗೌರವಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುವವರ ಮನಸ್ಥಿತಿ ಅರ್ಥವಾಗುವುದಿಲ್ಲ ಎಂಬ ಹೇಳಿಕೆ ಇದೀಗ ವಿವಾದ ಸೃಷ್ಟಿಸಿದೆ.
ನವದೆಹಲಿ: ಚಿತ್ರ ನಿರ್ಮಾಪಕರ ಕುಟುಂಬದ ಮಹಿಳೆಯರಿಗೆ ದಿನಕೊಬ್ಬ ಪತಿ ಬೇಕಂತೆ ಆದಕಾರಣ ಅವರಿಗೆ ಆತ್ಮಗೌರವಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುವವರ ಮನಸ್ಥಿತಿ ಅರ್ಥವಾಗುವುದಿಲ್ಲ ಎಂದು ಹೇಳಲಾಗಿದೆ. ಈ ರೀತಿ ಹೇಳಿಕೆ ನೀಡಿರುವುದು ಬಿಜೆಪಿಯ ಸಂಸದರೊಬ್ಬರು. ಈಗ ಹೇಳಿಕೆ ವಿವಾದ ಸೃಷ್ಠಿಸಿ ಸುದ್ದಿಯಾಗಿದೆ. ಪದ್ಮಾವತಿ ಚಿತ್ರದ ಬಗ್ಗೆ ನಿಮಗೆಲ್ಲಾ ಗೊತ್ತು. ಡಿಸೆಂಬರ್ ನಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ರಾಣಿ ಪದ್ಮಿನಿ ಬಗ್ಗೆ ಹಿಂದಿ ಚಿತ್ರ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ತೆಗೆಯುತ್ತಿರುವ ಪದ್ಮಾವತಿ ಚಿತ್ರದ ವಿರುದ್ಧ ಕೇಳಿ ಬರುತ್ತಿರುವ ಫೇಸ್ ಬುಕ್ ಗರ್ಜನೆಗೆ ಸಂಸದ ಚಿಂತಾಮಣಿ ಮಾಳವೀಕಾ ಧ್ವನಿಗೂಡಿಸಿರುವುದು ಇದೀಗ ತಿಳಿದು ಬಂದಿದೆ.
'ಪದ್ಮಾವತಿ' ಚಿತ್ರದಲ್ಲಿ ರಾಣಿ ಪದ್ಮಿನಿಯು ಪಕ್ಕದ ರಾಜ ಅಲ್ಲಾವುದ್ದೀನ್ ಖಿಲ್ಜಿ ತಮ್ಮ ರಾಜ್ಯವನ್ನು ವಶಪಡಿಸಿಕೊಂಡಾಗ ಆತವ ಕೈವಶ ವಾಗುವುದನ್ನು ತಪ್ಪಿಸಿಕೊಳ್ಳಲು ಬೆಂಕಿಗೆ ಹಾರುತ್ತಾಳೆ. ಆದ್ರೆ ಈ ಚಿತ್ರದಲ್ಲಿ ಖಿಲ್ಜಿ ಹಾಗೂ ಪದ್ಮಾವತಿ ನಡುವೆ ರೋಮ್ಯಾನ್ಸ್ ನಡೆಯುವ ದೃಶ್ಯಗಳನ್ನು ತೋರಿಸಲಾಗಿದೆ. ಇದನ್ನು ಹಿಂದೂ ಸಂಘಟನೆಗಳು ಹಾಗೂ ಬಿಜೆಪಿ ವಿರೋಧ ವ್ಯಕ್ತಪಡಿಸಿವೆ.
ದುಷ್ಟ ಮನಸ್ಥಿತಿ ಹೊಂದಿರುವ ಚಿತ್ರ ನಿರ್ಮಾಪಕರನ್ನು ಚಪ್ಪಲಿಯಿಂದ ಹೊಡೆಯುವುದಾಗಿ ಸಂಸದ ಚಿಂತಾಮಣಿ ಮಾಳವೀಯ ಬೆದರಿಕೆ ಒಡ್ಡಿದ್ದಾರೆ. ಈ ದೇಶ ರಾಣಿ ಪದ್ಮಿನಿಗೆ ಆಗುತ್ತಿರುವ ಅವಮಾನವನ್ನು ಸಹಿಸುವುದಿಲ್ಲ, ನಮ್ಮ ಹೆಮ್ಮೆಯ ಇತಿಹಾಸಕ್ಕೆ ಧಕ್ಕೆ ತರುವುದನ್ನು ಒಪ್ಪಲಾಗುವುದಿಲ್ಲ ಎಂದು ಮಾಳವೀಯ ಫೇಸ್ ಬುಕ್ ನಲ್ಲಿ ಬರೆದಿದ್ದಾರೆ. ಇನ್ನು ಚಿತ್ರ ರಿಲೀಸ್ ಆಗಬಾರದು ಅಂತ ಎಲ್ಲಾ ದಾಂಧಲೆ, ಗಲಾಟೆ, ಘರ್ಷಣೆಗಳು ಆಗುತ್ತಿವೆ. ರಾಣಿ ಪದ್ಮಿನಿ ಬಗ್ಗೆ ಮೂಡಿ ಬಂದಿರುವ ಕಥೆಗೆ ಇಲ್ಲಿ ಬೇರೆನೇ ಹೇಳಲಾಗಿದೆ ಎಂದು ಆಕ್ರೋಶ ವ್ಯಕ್ತವಾಗುತ್ತಿದೆ. ಪದ್ಮಾವತಿ ಚಿತ್ರ ರಿಲೀಸ್ ಆದ್ಮೇಲೆ ಯಾವ ರೀತಿ ಪ್ರೇಕ್ಷಕರಿಂದ ರೆಸ್ಪಾನ್ಸ್ ಸಿಗಲಿದೆ ಎಂದು ಕಾದು ನೋಡ್ಬೇಕು.
Comments