ಬಿಗ್ ಬಾಸ್ ಮನೆಯಿಂದ ತೇಜಸ್ವಿನಿ ಹೊರಕ್ಕೆ
ತೇಜಸ್ವಿನಿ ಅವರ ತಂದೆಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಮನೆಯಿಂದ ಕರೆ ಬಂದಿರುವುದಾಗಿ 'ಬಿಗ್ ಬಾಸ್' ತಿಳಿಸಿದ್ದಾರೆ. ತಾಯಿಯೊಂದಿಗೆ ಫೋನ್ ನಲ್ಲಿ ಮಾತನಾಡಿದ ತೇಜಸ್ವಿನಿ ಬಿಕ್ಕಿ ಬಿಕ್ಕಿ ಅತ್ತಿದ್ದು, ಅವರಿಗೆ ಮನೆಯ ಸದಸ್ಯರು ಸಮಾಧಾನಪಡಿಸಿದ್ದಾರೆ. ತಾಯಿಯ ಸೂಚನೆಯಂತೆ 'ಬಿಗ್ ಬಾಸ್' ಮನೆಯಿಂದ ಹೊರ ಹೋಗಲು ತೇಜಸ್ವಿನಿ ಮುಂದಾಗಿದ್ದಾರೆ.
ಒಗ್ಗಟ್ಟಿನಲ್ಲಿ ಬಲವಿದೆ ಲಕ್ಸುರಿ ಬಜೆಟ್ ಟಾಸ್ಕ್ ನಲ್ಲಿ ಜ್ಯೂಸ್ ಬೇಕು ಸವಾಲ್ ನಲ್ಲಿ 2 ತಂಡಗಳನ್ನು ಮಾಡಲಾಗಿದೆ. ಒಂದು ತಂಡಕ್ಕೆ ಕ್ಯಾಪ್ಟನ್ ರಿಯಾಜ್ ನಾಯಕನಾದರೆ, ಮತ್ತೊಂದು ತಂಡಕ್ಕೆ ಜಗನ್ ನಾಯಕನಾಗಿದ್ದಾರೆ. ತಂಡಗಳು ವಿವಿಧ ಬಗೆಯ ಜ್ಯೂಸ್ ಮಾಡಿದ್ದು, ಅದನ್ನು ಪರಿಶೀಲಿಸುವ ಸಂದರ್ಭದಲ್ಲಿ ಜಗನ್ ಮತ್ತು ರಿಯಾಜ್ ನಡುವೆ ವಾಗ್ವಾದ ನಡೆದಿದೆ. ಇವರಿಬ್ಬರ ಕಾರಣದಿಂದ ಕಾರ್ತಿಕ್ ಮತ್ತು ಆಶಿತಾ, ನಂತರದಲ್ಲಿ ಅನುಪಮಾ, ಕೃಷಿ ಅವರು, ಜಗನ್ ಬಳಿ ಏರಿದ ದನಿಯಲ್ಲಿ ಮಾತನಾಡಿದ್ದಾರೆ. ಎರಡೂ ತಂಡಗಳ ಸದಸ್ಯರು ಕಷ್ಟಪಟ್ಟಿದ್ದಾರೆ. ನಿಮ್ಮಿಬ್ಬರ ವೈಯಕ್ತಿಕ ಕಾರಣಗಳಿಂದ ಜಗಳವಾಗುತ್ತಿದೆ ಎಂದು ಆಕ್ಷೇಪಿಸಿದ್ದಾರೆ. ಈ ವೇಳೆ ಮಧ್ಯಪ್ರವೇಶಿಸಿದ ಸಿಹಿಕಹಿ ಚಂದ್ರು, ನಿಮ್ಮಿಬ್ಬರ ಕಾರಣದಿಂದ ಜಗಳವಾಗುತ್ತಿದೆ. ಏನು ತಪ್ಪಾಗಿದೆ ಎಂದು ಮೊದಲು ನೀವಿಬ್ಬರು ಮಾತಾಡಿಕೊಳ್ಳಿ.
ಇಲ್ಲಿ ಆಟವಾಡಲು ಬಂದಿರುವುದು ಜಗಳವಾಡಲು ಅಲ್ಲ ಎಂದು ಏರಿದ ದನಿಯಲ್ಲಿ ತಿಳಿಹೇಳಿದ್ದಾರೆ. ಜಗನ್ ಮತ್ತು ರಿಯಾಜ್ ಕೂಡ ಏರಿದ ದನಿಯಲ್ಲಿ ಮಾತನಾಡಿದ್ದು, ಚಂದ್ರು ಅವರಿಗೆ ಕಾರ್ತಿಕ್ ನೀರು ಕೊಟ್ಟಿದ್ದಾರೆ. ಇನ್ನು ಸಮೀರಾಚಾರ್ಯ ಅಡುಗೆ ಮನೆಯಲ್ಲಿ ಸರಿಯಾಗಿ ಮಾತನಾಡದೇ ಸಮಸ್ಯೆಯಾಗಿದೆ ಎಂದು ಕೆಲವು ಸದಸ್ಯರು ಆಕ್ಷೇಪಿಸಿದ್ದಾರೆ. ಏನು ಕಡಿಮೆಯಾಗಿದೆ. ಎಷ್ಟು ಬಳಸಬೇಕೆಂದು ಸದಸ್ಯರೊಂದಿಗೆ ಚರ್ಚಿಸುತ್ತಿಲ್ಲ ಎಂದು ದೂರಿದ್ದು, ಕ್ಯಾಪ್ಟನ್ ರಿಯಾಜ್ ಮಾತನಾಡಿದರೂ, ಸಮೀರ್ ಸುಮ್ಮನೆ ನಿಂತಿದ್ದಾರೆ. ಚಂದನ್ ಬಳಿ ರಿಯಾಜ್ ಮಾತನಾಡುತ್ತಿದ್ದ ಸಂದರ್ಭದಲ್ಲಿ ಜಗನ್ ಪ್ರಶ್ನಿಸಿದ್ದು, ಇದೇ ವಿಚಾರಕ್ಕೆ ಜಗನ್ ಮತ್ತು ರಿಯಾಜ್ ನಡುವೆ ಭಾರೀ ಮಾತಿನ ಚಕಮಕಿ ನಡೆದಿದೆ. ಕಾರ್ತಿಕ್ ಬಳಿ ಇದ್ದ ಲಾಟೀನ್ ಜಗನ್ ಗೆ ನಂತರದಲ್ಲಿ ಸಮೀರ್ ಗೆ ವರ್ಗಾವಣೆಯಾಗಿದೆ. ಜಗನ್ ಲಾಟೀನು ಹಿಡಿದಾಗ ಮಹಿಳಾ ಸದಸ್ಯರಿಗೆ ನೀರು ಕುಡಿಸಬೇಕಿತ್ತು. ತಿಂಡಿ -ಊಟ ತಿನ್ನಿಸಬೇಕಿತ್ತು. ಆಶಿತಾ ಅವರಿಗೆ ಜಗನ್ ಹಣ್ಣು ತಿನ್ನಿಸಿದ ಸಂದರ್ಭದಲ್ಲಿ ಆಶಿತಾ ಜಗನ್ ಕೆನ್ನೆಗೆ ಮುತ್ತುಕೊಟ್ಟಿದ್ದಾರೆ. ಕೆನ್ನೆ ಮೇಲೆ ಇರುವ ಲಿಪ್ ಸ್ಟಿಕ್ ಅಳಿಸುವಂತೆ ಜಗನ್ ಹೇಳಿದಾಗ, ಅಳಿಸಿದ್ದಾರೆ. ಲಾಟೀನ್ ಹಿಡಿದುಕೊಂಡ ಸಂದರ್ಭದಲ್ಲಿ ಕುಳಿತ ಕಾರಣಕ್ಕೆ ಸಮೀರ್ ಶಿಕ್ಷೆ ಅನುಭವಿಸಿದ್ದಾರೆ.
Comments