ಅನುಷ್ಕಾ ಹುಟ್ಟು ಹಬ್ಬದಂದು ತಮ್ಮ ಕಾರ್ ಚಾಲಕನಿಗೆ ನೀಡಿದ ಗಿಫ್ಟ್ ಏನು...!

ಅನುಷ್ಕಾ ತಮ್ಮ ಕಾರು ಚಾಲಕನ ಕೆಲಸದ ನಿಷ್ಠೆಯನ್ನು ಇಷ್ಟಪಟ್ಟಿದ್ದಾರೆ. ನನಗೆ ಅವರು ಕಷ್ಟಪಟ್ಟು ಮಾಡುವ ಕೆಲಸ ಹಾಗೂ ಅವರು ನನ್ನನ್ನು ನೋಡಿಕೊಳ್ಳುವಂತಹ ರೀತಿ ಇಷ್ಟವಾಗಿದೆ. ಹಾಗಾಗಿ ನಾನು ಅವರಿಗೆ 12 ಲಕ್ಷದ ಕಾರನ್ನು ಉಡುಗೊರೆಯಾಗಿ ನೀಡಿದ್ದೇನೆ. ಇದು ನನಗೆ ಖುಷಿಯಾಗಿದೆ' ಎನ್ನುತ್ತಾರೆ ಅನುಷ್ಕಾ ಶೆಟ್ಟಿ.
ಅನುಷ್ಕಾ ಒಟ್ಟು 140 ಕೋಟಿ ಆಸ್ತಿಯ ಒಡತಿ. ಅನುಷ್ಕಾ ತಮ್ಮ ಸಿನಿಮಾಗಳಿಗೆ 4 ರಿಂದ 5 ಕೋಟಿ ಸಂಭಾವನೆ ಪಡೆಯುತ್ತಾರೆ. ಅನುಷ್ಕಾ ಅವರ ನಿಜವಾದ ಹೆಸರು ಸ್ವೀಟಿ ಶೆಟ್ಟಿ. ಕಾರಿನ ಬಗ್ಗೆ ತುಂಬಾ ಕ್ರೇಜ್ ಇರುವ ಅನುಷ್ಕಾ ಬಳಿ ಬಿಎಂಡಬ್ಲೂ 6, ಆಡಿ ಎ6, ಆಡಿ ಕ್ಯೂ5 ಮತ್ತು ಟೊಯೆಟಾ ಕೊರಲಾ ನಂತಹ ವಿಲಾಸಿ ಕಾರುಗಳಿವೆ.
ಇನ್ನು ಇದೇ ಹೊತ್ತಲ್ಲಿ ಅನುಷ್ಕಾ ನಟನೆಯ ಹೊಸ ಚಿತ್ರ 'ಭಾಗಮತಿ'ಯ ಫಸ್ಟ್ಲುಕ್ ಬಿಡುಗಡೆಯಾಗಿದೆ. ಇದರಲ್ಲಿ ಅನುಷ್ಕಾ ಲೀಡ್ ರೋಲ್ನಲ್ಲಿ ನಟಿಸುತ್ತಿದ್ದು, ಇದು ವಿಭಿನ್ನ ಕಾನ್ಸೆಪ್ಟ್ ನ್ನ ಹೊಂದಿದೆ. 'ಭಾಗಮತಿ' ಚಿತ್ರವನ್ನು ಜಿ.ಅಶೋಕ್ ನಿರ್ದೇಶಿಸುತ್ತಿದ್ದಾರೆ. ಈ ಹಿಂದೆ ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ನಟನೆಯ 'ಮಿರ್ಚಿ' ಚಿತ್ರವನ್ನು ನಿರ್ಮಿಸಿದ್ದ ಯುವಿ ಕ್ರಿಯೇಷನ್ ಸಂಸ್ಥೆಯೇ 'ಭಾಗಮತಿ' ಚಿತ್ರವನ್ನು ನಿರ್ಮಿಸುತ್ತಿದೆ.
Comments