ಚಿರಂಜೀವಿ ಮನೆಗೆ ಕನ್ನ ಹಾಕಿದವರು ಯಾರು ?

ತೆಲುಗಿನ ಹಿರಿಯ ನಟ ಚಿರಂಜೀವಿಯವರ ಹೈದ್ರಾಬಾದ್ನ ಜುಬ್ಲಿ ಹಿಲ್ಸ್ ಮನೆಯಲ್ಲಿ ಕಳ್ಳತನವಾಗಿದೆ. ಒಟ್ಟಾರೆ 2 ಲಕ್ಷ ಕಳ್ಳತನವಾಗಿದೆ. ಈ ಬಗ್ಗೆ ಚಿರಂಜೀವಿ ಮ್ಯಾನೇಜರ್ ಗಂಗಾಧರ್ ಎಂಬುವವರು ದೂರು ನೀಡಿದ್ದಾರೆ. ಹೀಗಾಗಿ ಪೊಲೀಸರು ಪ್ರಕರಣ ದಾಖಲಿಸಿ ಮನೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಗಳನ್ನ ವಿಚಾರಣೆ ಮಾಡಿದ್ದಾರೆ.
ಚಿರಂಜೀವಿ ಮನೆಯಲ್ಲಿ ಕೆಲ ಕಾಲದಿಂದ ಚೆನ್ನಯ್ಯ ಎಂಬುವವರು ಸರ್ವರ್ ಆಗಿ ಕೆಲಸ ಮಾಡುತ್ತಿದ್ದರು. ಹೀಗಾಗಿ ಇವರ ಮೇಲೆ ಅನುಮಾನ ವ್ಯಕ್ತಪಡಿಸಿ ವಿಚಾರಣೆ ನಡೆಸಲಾಗುತ್ತಿದೆ. ಮನೆಯ ಸಮೀಪದ ಸಿಸಿ ಟಿವಿ ಕ್ಯಾಮೆರಾದಲ್ಲಿನ ಸನ್ನಿವೇಶಗಳನ್ನೂ ಪೊಲೀಸರು ಪರಿಶೀಲಿಸಿದ್ದಾರೆ. ತನಿಖೆ ಪ್ರಗತಿಯಲ್ಲಿದೆ. ಚಿರಂಜೀವಿ ತಮ್ಮ 151ನೇ ಚಿತ್ರ 'ಸೈರಾ ನರಸಿಂಹಾ ರೆಡ್ಡಿ' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರವನ್ನು ರಾಮ್ ಚರಣ್ ತೇಜಾ ನಿರ್ಮಿಸುತ್ತಿದ್ದಾರೆ. ಈ ಚಿತ್ರವನ್ನು ಸುರೇಂದ್ರ ರೆಡ್ಡಿ ನಿರ್ದೇಶಿಸುತ್ತಿದ್ದಾರೆ. ಸ್ವತಂತ್ರ ಹೋರಾಟಗಾರ ಉಯ್ಯಲವಾಡ ನರಸಿಂಹ ರೆಡ್ಡಿ ರ ಜೀವನಾಧಾರಿತ ಚಿತ್ರವಾಗಿದೆ ಇದು. ಈ ಚಿತ್ರದಲ್ಲಿ ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್, ನಯನತಾರಾ, ವಿಜಯ್ ಸೇತುಪತಿ, ಜಗಪತಿ ಬಾಬು ಮತ್ತು ಸುದೀಪ್ ನಟಿಸಲಿದ್ದಾರೆ.
Comments