ಬಿಗ್ ಬಾಸ್ ಮನೆಯಲ್ಲಿ ನಿನ್ನೆ ಏನೆಲ್ಲಾ ನಡೀತು ಗೊತ್ತಾ ?

ಚಂದ್ರು ಬಳಿ ಮಾತನಾಡುತ್ತಿದ್ದ ಕೃಷಿ ಅಡಿಗೆ ಮಾಡುವಾಗ ಚಮಚ ಬಳಸುತ್ತಿಲ್ಲ. ಎಲ್ಲದರಲ್ಲೂ ಕೈ ಹಾಕುತ್ತಾರೆ. ತಿನ್ನಲು ಮನಸಾಗುತ್ತಿಲ್ಲ. ಕೆಲವರಿಗೆ ಅಡಿಗೆ ಕಡಿಮೆಯಾಗಿದೆ. ಆದರೂ ತೋರಿಸಿಕೊಳ್ತಿಲ್ಲ ಎಂದು ದೂರಿದ್ದಾರೆ.
'ಬಂತು ಬಂತು ಕರೆಂಟು ಬಂತು' ವಿಶೇಷ ಚಟುವಟಿಕೆಯಲ್ಲಿ ಚಂದನ್ ಅವರ ಕೈಲ್ಲಿದ್ದ ಲಾಟೀನ್ ಜಯಶ್ರೀನಿವಾಸನ್ ಅವರಿಗೆ ವರ್ಗಾವಣೆಯಾಗಿದ್ದು, ಅವರು ಹಲವು ಸಲ ನಿಯಮ ಉಲ್ಲಂಘಿಸಿದ ಕಾರಣ ಶಿಕ್ಷೆ ಅನುಭವಿಸುವಂತಾಗಿದೆ. ನಂತರದಲ್ಲಿ ಲಾಟೀನ್ ದಿವಾಕರ್ ಗೆ ವರ್ಗಾವಣೆಯಾಗಿದೆ. ಅಡುಗೆ ಮನೆಯಲ್ಲಿದ್ದ ದಿವಾಕರ್, ಡ್ರೆಸ್ ಕುರಿತಾಗಿ ನಿವೇದಿತಾ ಅವರಿಗೆ ಸಲಹೆ ನೀಡಿದ್ದಾರೆ. ಇಂತಹ ಬಟ್ಟೆಗಳನ್ನು ಹಾಕಿಕೊಳ್ಳಬೇಡಿ ಎಂದು ಹೇಳಿದ್ದು, ಅವರು ಮಾತು ಮುಗಿಸುವಷ್ಟರಲ್ಲೇ ಜಯಶ್ರೀನಿವಾಸನ್ ಹಾಗೆಲ್ಲಾ ಮಾತನಾಡಬೇಡ. ದೊಡ್ಡ ವಿಷಯವಾಗುತ್ತೆ ಎಂದು ಎಚ್ಚರಿಸಿದ್ದಾರೆ. ರಿಯಾಜ್, ನಿವೇದಿತಾ ಏನು ಹೇಳ್ತಾರೆ ಹೇಳಲಿ ಎಂದಾಗ, ನಿವೇದಿತಾ ಶಾರ್ಟ್ ಡ್ರೆಸ್ ಹಾಕಿದವರೆಲ್ಲಾ ಕೆಟ್ಟವರಲ್ಲ, ಫುಲ್ ಡ್ರೆಸ್ ಹಾಕಿದವರೆಲ್ಲಾ ಒಳ್ಳೆಯವರಲ್ಲ. ಡ್ರೆಸ್ ಗಿಂತ ಮೈಂಡ್ ಸೆಟ್ ಮುಖ್ಯ ಎಂದು ದಿವಾಕರ್ ಅವರಿಗೆ ತಿಳಿಸಿದ್ದಾರೆ.
ವಿಶೇಷ ಚಟುವಟಿಕೆಯಲ್ಲಿ ಕಾರ್ತಿಕ್ 'ಸಾಲುತಿಲ್ಲವೇ..' ಹಾಡನ್ನು ಶ್ರುತಿ ಅವರಿಗೆ ಹೇಳಿಕೊಡಬೇಕಿತ್ತು. ಇದಕ್ಕೆ ಚಂದನ್ ಸಹಾಯ ಪಡೆಯಬಹುದೆಂದು 'ಬಿಗ್ ಬಾಸ್' ಸೂಚಿಸಿದ್ದಾರೆ. ಜೊತೆಗೆ ಹಾಡಿನ ಸಾಹಿತ್ಯವನ್ನೂ ನೀಡಲಾಗಿದ್ದು, ಶ್ರುತಿಗೆ ಚಂದನ್ ಮತ್ತು ಕಾರ್ತಿಕ್ ಹಾಡು ಕಲಿಸಿದ್ದಾರೆ. ಇನ್ನು ಸದಸ್ಯರ ಒಳ್ಳೆಯ ಮತ್ತು ಕೆಟ್ಟ ಗುಣಗಳ ಕುರಿತಾಗಿ ಚಟುವಟಿಕೆ ನೀಡಲಾಗಿದ್ದು, ಪ್ರಾಮಾಣಿಕ ಮತ್ತು ಮೋಸಗಾರ ಸಾಲಿನಲ್ಲಿ ರಿಯಾಜ್ ತಮಗೆ ಸರಿ ಎನಿಸಿದವರನ್ನು ನಿಲ್ಲಿಸಿದ್ದಾರೆ. ಅವರು ಕೈಗೊಂಡ ತೀರ್ಮಾನಕ್ಕೆ ಚಂದ್ರು ಸಹಮತ ವ್ಯಕ್ತಪಡಿಸಿದರೆ, ಸಮೀರಾಚಾರ್ಯ ಆಕ್ಷೇಪಿಸಿದ್ದಾರೆ. ಮೋಸಗಾರರ ಸಾಲಿನಲ್ಲಿದ್ದ ಸಮೀರಾಚಾರ್ಯ ಪ್ರಾಮಾಣಿಕ ಸಾಲಿನಲ್ಲಿದ್ದ ದಿವಾಕರ್ ಸ್ಥಾನಕ್ಕೆ ಬಂದಿದ್ದಾರೆ. ನಿವೇದಿತಾ ಮನೆಯಲ್ಲಿ ಏನೂ ಕೆಲಸ ಮಾಡುತ್ತಿಲ್ಲ. ಆಕೆ ಚಿಕ್ಕ ಹುಡುಗಿಯಂತಿದ್ದರೂ, ಬುದ್ಧಿವಂತಳಾಗಿದ್ದಾಳೆ ಎಂದೆಲ್ಲಾ ಕೃಷಿ, ತೇಜಸ್ವಿನಿ, ಆಶಿತಾ ಮಾತಾಡಿಕೊಂಡಿದ್ದಾರೆ. ರಿಯಾಜ್ ಕ್ಯಾಪ್ಟನ್ ಆದ ಬಳಿಕ ಮನೆಯಲ್ಲಿ ಮತ್ತೆ ಗುಸುಗುಸು ಚರ್ಚೆ ಹೆಚ್ಚಾದಂತಿದೆ.
Comments