ಹುಟ್ಟು ಹಬ್ಬದ ಸಂಭ್ರಮದಲ್ಲಿ ಅನುಷ್ಕಾ ಶೆಟ್ಟಿ

07 Nov 2017 2:56 PM | Entertainment
368 Report

ಖ್ಯಾತರಾದ ನಟಿ ಅನುಷ್ಕ ಶೆಟ್ಟಿ, ಇಂದು 36ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ತೆಲುಗು ಚಿತ್ರ ಸೂಪರ್ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಅನುಷ್ಕಾ ಬಾಹುಬಲಿ ಚಿತ್ರದಲ್ಲಿ ತನ್ನ ಅದ್ಭುತ ಅಭಿನಯದ ಮೂಲಕ ಭಾರತೀಯ ಚಿತ್ರರಂಗದಲ್ಲಿ ಹೆಸರುವಾಸಿಯಾಗಿದ್ದಾರೆ.

ತಮಿಳು ಮತ್ತು ತೆಲುಗು ಚಿತ್ರರಂಗಗಳಲ್ಲಿ ಹೆಸರು ಮಾಡಿದ ಅನುಷ್ಕಾ ಶೆಟ್ಟಿ ವಿಕ್ರಮಾರ್ಕುಡು , ಅರುಂಧತಿ , ವೇದಂ ,ರುದ್ರಮಾದೇವಿ, ಬಾಹುಬಲಿ, ಸಿಂಗಮ್ , ಉತ್ತರಭಾಗ ಸಿಂಗಮ್ II ಯೆನ್ನೈ ಅರಿಂಧಾಳ್, ವಾನಮ್ ದೈವ ತಿರುಮಗಳ್ ಚಿತ್ರಗಳ ಮೂಲಕ ಹಿಟ್ ಚಿತ್ರಗಳನ್ನು ನೀಡಿದರು. ಅನುಷ್ಕ ಶೆಟ್ಟಿ ಮೂಲತಃ ಮಂಗಳೂರಿನವರಾಗಿದ್ದು ಪ್ರಫುಲ್ಲ ಮತ್ತು ಎ.ಎನ್. ವಿಠಲ ಶೆಟ್ಟಿ ದಂಪತಿಯ ಪುತ್ರಿ.

Edited By

Hema Latha

Reported By

Madhu shree

Comments