ನಟ ಕಮಲ್ ಹಾಸನ್ ಜನ್ಮ ದಿನಾಚರಣೆ ರದ್ದು ಮಾಡಿದ್ದು ಯಾಕೆ ?

ನಟ ಕಮಲ್ ಹಾಸನ್ ಅವರು, ನನ್ನ ಜನ್ಮ ದಿನಕ್ಕಾಗಿ ಕಾದು ಆಚರಣೆ ಮಾಡಲು ಮುಂದಾಗಿದ್ದ ಅಭಿಮಾನಿಗಳಿಗೆ ನಾನು ಧನ್ಯವಾದ ಹೇಳುತ್ತೇನೆ. ಆದರೆ ನನ್ನ ನಿರ್ಧಾರದಿಂದ ನಿಮಗೆ ನಿರಾಸೆಯಾಗಿರಬಹುದು ಎಂದು ನಟ ಕಮಲ್ ಹಾಸನ್ ತಿಳಿಸಿದರು.
ನನ್ನ ಪ್ರಕಾರ ಜನ್ಮದಿನ ಮತ್ತೊಂದು ಸಾಮಾನ್ಯ ದಿನವಷ್ಟೇ..ಆದರೆ ಈ ದಿನವನ್ನು ನಾವು ಸೇವಾ ಕಾರ್ಯಗಳ ಮೂಲಕ ವಿಶೇಷವಾಗಿಸಬಹುದು. ಒಂದು ಅತ್ಯುತ್ತಮ ಕಾರಣಕ್ಕಾಗಿ ಈ ದಿನವನ್ನು ಮೀಸಲಿಡುವ ಮೂಲಕ ಇದನ್ನು ವಿಶೇಷವಾಗಿಸಬಹುದು. ಇದೇ ಕಾರಣಕ್ಕೆ ನಾನು ವೈದ್ಯಕೀಯ ಶಿಬಿರಕ್ಕೆ ತೆರಳುತ್ತಿದ್ದೇನೆ. ಇದಕ್ಕೂ ನನ್ನ ರಾಜಕೀಯಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. ಆದರೆ ಇದರಿಂದ ಕನಿಷ್ಠ ಪಕ್ಷ ಒಂದಷ್ಟು ಮಂದಿಗಾದರೂ ನೆರವಾಗುತ್ತದೆ ಎಂದು ಹೇಳಿದ್ದಾರೆ. ಅಂತೆಯೇ ತಮ್ಮ ರಾಜಕೀಯ ಭವಿಷ್ಯದ ಕುರಿತು ಮಾತನಾಡಿರುವ ಕಮಲ್, ಜನ ನಾನೇನೋ ದೊಡ್ಡದ್ದನ್ನು ಸಾಧಿಸುತ್ತೇನೆ ಎಂಬ ನಿರೀಕ್ಷೆಯಲ್ಲಿದ್ದಾರೆ. ಅವರ ನಂಬಿಕೆಗೆ ನಾನು ಚಿರಋಣಿ, ಹಾಗೂ ಅವರ ನಂಬಿಕೆಯನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದ್ದಾರೆ.
Comments