ಕಿಚ್ಚನ ಹಾಲಿವುಡ್ ಚಿತ್ರದ ಫಸ್ಟ್ ಲುಕ್ ಹೇಗಿದೆ ಗೊತ್ತಾ ?
ಎಡ್ಡಿ ಆರ್ಯ ನಿರ್ದೇಶನದ ಈ ಚಿತ್ರಕ್ಕೆ ಫಿಲಿಪ್ ಜೆ ಪಡ್ವಾಲ್ ಮ್ಯೂಸಿಕ್ ನೀಡಿದ್ದು, ವೈಜ್ಞಾನಿಕ ಕಾಲ್ಪನಿಕ ಕಥಾಹಂದರವಿರುವ ಚಿತ್ರ ಇದಾಗಿದೆ. 'ರೈಸನ್' ಹೆಸರಿನ ಈ ಚಿತ್ರದಲ್ಲಿ ಸುದೀಪ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಇತ್ತೀಚೆಗಷ್ಟೇ ಸುದೀಪ್ ಅವರನ್ನು ಭೇಟಿ ಮಾಡಿದ್ದ ಚಿತ್ರ ತಂಡ ಫೋಟೋ ಶೂಟ್ ಕೂಡ ಮುಗಿಸಿತ್ತು.
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಲಿವುಡ್ ಚಿತ್ರದಲ್ಲಿ ಅಭಿನಯಿಸಲಿದ್ದಾರೆ ಎನ್ನುವುದು ಎಲ್ಲರಿಗೂ ತಿಳಿದ ವಿಚಾರವೇ. ಕನ್ನಡ, ತೆಲುಗು, ತಮಿಳು, ಹಿಂದಿ ಚಿತ್ರಗಳಲ್ಲಿ ಅಭಿನಯಿಸಿರುವ ಸುದೀಪ್ ಮೊದಲ ಬಾರಿಗೆ ಹಾಲಿವುಡ್ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ 'ರೈಸನ್' ಚಿತ್ರದ ಫಸ್ಟ್ ಲುಕ್ ನೊಂದಿಗೆ ಸೌಂಡ್ ಟ್ರ್ಯಾಕ್ ರಿಲೀಸ್ ಮಾಡಲಾಗಿದೆ. ಸುದೀಪ್ ಫಸ್ಟ್ ಲುಕ್ ನಲ್ಲಿ ಹಾಲಿವುಡ್ ಮಂದಿಯ ಕಣ್ಣು ಕುಕ್ಕುವಂತೆ ಕಾಣಿಸಿಕೊಂಡಿದ್ದಾರೆ. 'ಪೈಲ್ವಾನ್' ಚಿತ್ರೀಕರಣ ಮುಗಿಸಿದ ಬಳಿಕ ಸುದೀಪ್ 'ರೈಸನ್' ತಂಡವನ್ನು ಸೇರಿಕೊಳ್ಳಲಿದ್ದಾರೆ. ಅಮೆರಿಕ, ಆಸ್ಟ್ರೇಲಿಯಾದಲ್ಲಿ ಚಿತ್ರೀಕರಣ ನಡೆಯಲಿದೆ.
Comments