ಬಿಗ್ ಬಾಸ್ ಮನೆಯ ಸದಸ್ಯರು ಶಾಕ್ ಆಗಿದ್ದು ಯಾಕೆ ?
'ಬಿಗ್ ಬಾಸ್' ಸೀಸನ್ 4 ನೇ ವಾರಕ್ಕೆ ಕಾಲಿಟ್ಟಿದೆ. ಕ್ಯಾಪ್ಟನ್ ಆಯ್ಕೆಗಾಗಿ ನೀಡಲಾದ ಚಟುವಟಿಕೆಯಲ್ಲಿ ಮೊದಲಿಗರಾದರೂ ಅನುಪಮಾ ಕ್ಯಾಪ್ಟನ್ ಆಗಿಲ್ಲ. ಅವರ ಬದಲಿಗೆ ರಿಯಾಜ್ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದು, ಸದಸ್ಯರಿಗೆಲ್ಲಾ ಶಾಕ್ ಆಗಿದೆ. ಆಗಿದ್ದೇನು ಗೊತ್ತಾ..?
ಕ್ಯಾಪ್ಟನ್ ಆಯ್ಕೆ ಚಟುವಟಿಕೆಗಾಗಿ ಬ್ಲಾಕ್ ಗಳನ್ನು ಜೋಡಿಸಿ ಸದಸ್ಯರ ಫೋಟೋ ರಚಿಸಬೇಕಿತ್ತು. ಮೊದಲಿಗೆ ರಚನೆಯಾದ ಫೋಟೋ ಇರುವ ಸದಸ್ಯರು ಕ್ಯಾಪ್ಟನ್ ಆಗಲಿದ್ದಾರೆ ಎಂದು ತಿಳಿಸಲಾಗಿತ್ತು. ಈ ಚಟುವಟಿಕೆಯಲ್ಲಿ ಅನುಪಮಾ ಮೊದಲಿಗರಾಗಿ ರಿಯಾಜ್ ಅವರ ಫೋಟೋ ಜೋಡಿಸಿದ್ದಾರೆ. ಅನುಪಮಾ ಅವರೇ ಕ್ಯಾಪ್ಟನ್ ಆಗಲಿದ್ದಾರೆ ಎಂದು ಎಲ್ಲರೂ ಭಾವಿಸಿದ್ದರು. ಅನುಪಮಾ ಕೂಡ ಖುಷಿಪಟ್ಟಿದ್ದರು. ಆಗ 'ಬಿಗ್ ಬಾಸ್' ರಿಯಾಜ್ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದ್ದಾರೆ. ಇದಕ್ಕೆ ಅನುಪಮಾ ಕ್ಯಾಮೆರಾ ಬಳಿ ಕೋಪ ಮಾಡಿಕೊಂಡು ಮಾತಾಡಿದ್ದಾರೆ. ಕ್ಯಾಪ್ಟನ್ ಆದ ರಿಯಾಜ್, ಸಮೀರಾಚಾರ್ಯ ಸೇರಿ ಹಲವರ ಬಳಿ ಮಾತನಾಡುತ್ತಾ ಸಹಕಾರ ಬಯಸಿದ್ದಾರೆ. ಹಣ್ಣುಗಳನ್ನು ಸಮನಾಗಿ ಹಂಚಿಕೆ ಮಾಡಿದ್ದಾರೆ. ಮನೆಯನ್ನು ಹಿಡಿತಕ್ಕೆ ತೆಗೆದುಕೊಳ್ಳುವ ಪ್ರಯತ್ನ ನಡೆಸಿದ್ದಾರೆ.
ಇನ್ನು 'ಬಂತು ಬಂತು ಕರೆಂಟು ಬಂತು' ವಿಶೇಷ ಚಟುವಟಿಕೆಯಲ್ಲಿ ಸದಸ್ಯರೊಬ್ಬರು ಲಾಟೀನ್ ಹಿಡಿದುಕೊಂಡು ಸದಾ ಓಡಾಡುತ್ತಿರಬೇಕು. ಜೊತೆಗೆ ಅವರಿಗೆ ತಿಳಿಸಲಾದ ಚಟುವಟಿಕೆ ಮಾಡಬೇಕಿದೆ. ಮೊದಲಿಗೆ ಲಾಟೀನ್ ಹಿಡಿದ ಅನುಪಮಾ ಡ್ಯಾನ್ಸ್ ಮಾಡಿಕೊಂಡೇ ಮಾತನಾಡಬೇಕಿತ್ತು. ಬಳಿಕ ಲಾಟೀನ್ ಚಂದನ್ ಕೈಗೆ ವರ್ಗಾವಣೆಯಾಗಿದ್ದು, ಅವರು ಹಾಡಿನ ಧಾಟಿಯಲ್ಲಿ ಮಾತನಾಡಬೇಕಿದೆ. ಅವರ ಕೈಗೆ ಲಾಟೀನ್ ಕೊಟ್ಟ ಅನುಪಮಾ ಚಂದನ್ ಅವರನ್ನು ಗಮನಿಸಬೇಕಿದೆ. ಈ ವಾರ ಸದಸ್ಯರ ಆಯ್ಕೆಯನುಸಾರ ಸಮೀರಾಚಾರ್ಯ, ಜಯಶ್ರೀನಿವಾಸನ್, ನಿವೇದಿತಾ, ಜಗನ್, ಸಿಹಿಕಹಿ ಚಂದ್ರು, ತೇಜಸ್ವಿನಿ ಅವರು ನಾಮಿನೇಟ್ ಆಗಿದ್ದಾರೆ. ಕ್ಯಾಪ್ಟನ್ ರಿಯಾಜ್, ಜೆ.ಕೆ. ಅವರನ್ನು ನೇರ ನಾಮಿನೇಟ್ ಮಾಡಿದ್ದಾರೆ.
Comments