ಖಿನ್ನತೆ ಯಿಂದ ಆತ್ಮಹತ್ಯಾ ಮಾಡಿಕೊಳ್ಳಬೇಕೆಂದುಕೊಂಡಿದ್ದೆ, ಇಲಿಯಾನಾ ಡಿಕ್ರೂಸ್




ದೆಹಲಿಯಲ್ಲಿ ನಡೆದ ೧೨ನೇ ಮೆಂಟಲ್ ಹೆಲ್ತ್ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು,ನವದೆಹಲಿಯ ಈ ಸಂದರ್ಭದಲ್ಲಿ ಅವರು ತಮ್ಮ ಜೀವನದಲ್ಲಿ ಎದುರಾದ ಒತ್ತಡಗಳ ಬಗ್ಗೆ ಬಾಲಿವುಡ್ ನಟಿ ಇಲಿಯಾನಾ ಡಿಕ್ರೊಸ್ ಹೇಳಿಕೊಂಡಿದ್ದಾರೆ.
ನವದೆಹಲಿ: ಖಿನ್ನತೆಯಿಂದ ಬಳಲುತ್ತಿದ್ದ ನಾನು , ಒಂದು ಕಾಲದಲ್ಲಿ ಆತ್ಮಹತ್ಯಾ ಮಾಡಿಕೊಳ್ಳಬೇಕೆಂದುಕೊಂಡಿದ್ದೆ ಎಂದು
ಇಲಿಯಾನಾ ಡಿಕ್ರೂಸ್ ಹೇಳಿದ್ದಾರೆ.
ದೆಹಲಿಯಲ್ಲಿ ನಡೆದ ೧೨ನೇ ಮೆಂಟಲ್ ಹೆಲ್ತ್ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು,ನವದೆಹಲಿಯ ಈ ಸಂದರ್ಭದಲ್ಲಿ ಅವರು ತಮ್ಮ ಜೀವನದಲ್ಲಿ ಎದುರಾದ ಒತ್ತಡಗಳ ಬಗ್ಗೆ ಹೇಳಿಕೊಂಡಿದ್ದಾರೆ. ಹಲವರು ನನ್ನ ದೇಹದ ಬಗ್ಗೆ ಕಮೆಂಟ್ ಮಾಡುತ್ತಿದ್ದರು. ಅವರ ಮಾತುಗಳನ್ನು ಕೇಳಿದಾಗ ನೋವು ಅನುಭವಿಸುತ್ತಿದ್ದೆ.ಒತ್ತಡಕ್ಕೆ ಒಳಗಾಗುತ್ತಿದ್ದೆ, ಆದರೆ ನಾನು ಖಿನ್ನತೆಯಿಂದ ನರುಳುತ್ತಿದ್ದೇನೆ ಎಂಬ ಸಂಗತಿಯನ್ನು ಬೇರೆ ಯಾರೋ ಹೇಳುವವರೆಗೂ ನನಗೆ ಗೊತ್ತಾಗಲಿಲ್ಲ. ಅಂತಹ ವೇಳೆಯಲ್ಲ ಆತ್ಮಹತ್ಯೆಯ ಬಗ್ಗೆಯೂ ಸಹ ಯೋಚನೆ ಮಾಡಿದ್ದೆ, ಇಂತಹ ವೇಳೆಯಲ್ಲಿ ನನಗೆ ನಾನೇ ಧೈರ್ಯ ತಂದುಕೊಂಡೆ, ಮೊದಲು ಮಾಡಬೇಕಾದ ಕೆಲಸ ನಮಗೆ ನಾವೇ ಧೈರ್ಯ ತಂದುಕೊಳ್ಳುವುದು ಎಂದಿದ್ದಾರೆ ಇಲಿಯಾನಾ.
ನಮ್ಮ ಮಿದುಳಿನಲ್ಲಿ ರಾಸಾಯನಿಕ ಕ್ರಿಯೆಗಳಿಗೆ ಅನುಗುಣವಾಗಿ ಚಿಕಿತ್ಸೆ ತೆಗೆದುಕೊಳ್ಳಬೇಕು. ಅದೃಷ್ಟಕ್ಕೆ ಅದೇ ಕಡಿಮೆಯಾಗುತ್ತದೆ ಬಿಡು ಎಂದು ನಿರ್ಲಕ್ಷ್ಯ ಮಾಡಿದರೆ ಬಳಿಕ ತುಂಬಾ ನೋವು ಅನುಭವಿಸಬೇಕು. ಆದ್ದರಿಂದ ತಕ್ಷಣ ವೈದ್ಯರ ಬಳಿಕ ಹೋಗಬೇಕು.
ಎಂದು ಇಲಿಯಾನಾ ಹೇಳಿದ್ದಾರೆ.
Comments