ವೈವಾಹಿಕ ಜೀವನಕ್ಕೆ ಕಾಲಿಟ್ಟ ತಿಥಿ ಚಿತ್ರದ ನಟ ಅಭಿಷೇಕ್

06 Nov 2017 5:57 PM | Entertainment
328 Report

ಮಂಡ್ಯ ಮೂಲದ ಹುಲಿಕೆರೆ ಕೊಪ್ಪಲು ಗ್ರಾಮದ ಅಭಿಷೇಕ್, ತಮ್ಮ ಅಕ್ಕನ ಮಗಳು ಹೊಂಬಾಳೆ ಎಂಬಾಕೆಯನ್ನು ವರಿಸಲಿದ್ದು ಇದೇ 14 ಮತ್ತು 15ರಂದು ಮದುವೆ ಕಾರ್ಯಕ್ರಮಗಳು ನಡೆಯಲಿವೆ.

ತಿಥಿ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ಯುವ ನಟ ಅಭಿಷೇಕ್ ಇದೇ 14ರಂದು ಗೃಹಸ್ಥಾಶ್ರಮಕ್ಕೆ ಕಾಲಿರಿಸಲಿದ್ದಾರೆ. ಮಂಡ್ಯದ ಆಂಜನೇಯ ಸ್ವಾಮಿ ದೇವಾಲಯದ ಕಲ್ಯಾಣಮಂಟಪದಲ್ಲಿ ಅಭಿಷೇಕ್ ಮದುವೆ ನಡೆಯಲಿದೆ.ತಿಥಿ ಸಿನಿಮಾದ ನಂತರ ತರ್ಲೆ ವಿಲೇಜ್, ಏನ್ ನಿನ್ನ ಪ್ರಾಬ್ಲಂ ಮತ್ತು ಹಳ್ಳಿ ಪಂಚಾಯಿತಿ ಚಿತ್ರದಲ್ಲಿ ನಟಿಸಿದ್ದರು.

 

Edited By

Hema Latha

Reported By

Madhu shree

Comments

Cancel
Done