ಸುದೀಪ್ ಬ್ಯಾಟಿಂಗ್ ಶೈಲಿಯನ್ನು ಮೆಚ್ಚಿಕೊಂಡ ಇಂಗ್ಲೆಂಡ್ ಆಟಗಾರ

ಇಂಗ್ಲೆಂಡ್ ಆಟಗಾರ ಮೆಚ್ಚಿದ ಸುದೀಪ್ ಶಾರ್ಟ್ ಇದೆ.! ಪ್ರಾಕ್ಟೀಸ್ ವೇಳೆ ಕರ್ನಾಟಕ ತಂಡದ ಆಟಗಾರ ವಿ.ಕರಿಯಪ್ಪ ಅವರ ಎಸೆದ ಎಸೆತವನ್ನ ಸುದೀಪ್ ಭರ್ಜರಿಯಾಗಿ ಹೊಡೆದಿದ್ದಾರೆ. ಈ ವಿಡಿಯೋ ಟ್ವಿಟ್ಟರ್ ನಲ್ಲಿ ವೈರಲ್ ಆಗಿದೆ. ಈ ವಿಡಿಯೋ ಬಗ್ಗೆ ಇಂಗ್ಲೆಂಡ್ ಆಟಗಾರ ಕಾಮೆಂಟ್ ಮಾಡಿದ್ದಾರೆ.
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಬ್ಯಾಟಿಂಗ್ ಶೈಲಿಯನ್ನ ಇಂಗ್ಲೆಂಡ್ ನ ಖ್ಯಾತ ಕ್ರಿಕೆಟ್ ಆಟಗಾರ ಮೆಚ್ಚಿಕೊಂಡಿದ್ದಾರೆ. ಪ್ರಾಕ್ಟೀಸ್ ವೇಳೆ ಸುದೀಪ್ ಹೊಡೆದಿರುವ ಒಂದು ಶಾರ್ಟ್ ಬಗ್ಗೆ ಈ ಆಟಗಾರ ಟ್ವೀಟ್ ಮಾಡಿ ಹೊಗಳಿದ್ದಾರೆ. ಅಂದ್ಹಾಗೆ, ಸುದೀಪ್ ಅವರು ಒಂದು ರೀತಿಯ ಆಲ್ ರೌಂಡರ್. ಅಂದ್ರೆ, ಕೇವಲ ಸಿನಿಮಾದಲ್ಲಿ ಮಾತ್ರವಲ್ಲ, ಸಿನಿಮಾ ಬಿಟ್ಟು ಕೂಡ ವಿವಿಧ ಕ್ಷೇತ್ರಗಳಲ್ಲಿ ಸುದೀಪ್ ಖ್ಯಾತಿಗಳಿಸಿಕೊಂಡಿದ್ದಾರೆ. ಸಿನಿಮಾ ಬಿಟ್ಟರೆ ಸುದೀಪ್ ಹೆಚ್ಚು ಆಸಕ್ತಿ ಹೊಂದಿರುವುದು ಕ್ರಿಕೆಟ್. ಓವೈಸ್ ಶಾ ಗ್ರೇಟ್ ಶಾರ್ಟ್ ಅಂತೆ ''ವಾಹ್ವ್ ಗ್ರೇಟ್ ಶಾರ್ಟ್''...ಎಂದಿರುವ ಓವೈಸ್ ಶಾ, ''ಇದೇ ರೀತಿಯ ಶಾರ್ಟ್ ನ್ನ ಇಂಗ್ಲೆಂಡ್ ನಲ್ಲಿ ನಡೆದ ಟೂರ್ನಿಯ ಪ್ರಾಕ್ರೀಸ್ ವೇಳೆ ನೀವು ಹೊಡೆದಿದ್ರಿ'' ಎಂದು ಕಾಮೆಂಟ್ ಮಾಡಿದ್ದಾರೆ. ಇಂಗ್ಲೆಂಡ್ ನಲ್ಲಿ ಸುದೀಪ್ ಆಡಿದ್ರು.! ಇಂಗ್ಲೆಂಡ್ ನ ಲಾರ್ಡ್ಸ್ ಮೈದಾನದಲ್ಲಿ ಮೇ 11 ರಂದು ಕಾರ್ಪೊರೇಟ್ ಕ್ರಿಕೆಟ್ ಡೇ ಟೂರ್ನಿ ನಡೆದಿತ್ತು. ಈ ಟೂರ್ನಿಯಲ್ಲಿ ಸುದೀಪ್ ಕೂಡ ಒಂದು ತಂಡವನ್ನ ಮುನ್ನಡೆಸಿದ್ದರು. ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಸಿಸಿಎಲ್ ಗೆ ರೆಡಿ ಸದ್ಯ, ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಆರಂಭವಾಗಲಿದ್ದು, ಕರ್ನಾಟಕ ಬುಲ್ಡೋಜರ್ಸ್ ತಂಡವನ್ನ ಸುದೀಪ್ ಮುನ್ನಡೆಸಲಿದ್ದಾರೆ. ಇದಕ್ಕಾಗಿ ಸುದೀಪ್, ರಾಹುಲ್, ಪ್ರದೀಪ್, ಚಂದನ್ ಸೇರಿದಂತೆ ಹಲವರು ಪ್ರಾಕ್ಟೀಸ್ ಮಾಡುತ್ತಿದ್ದಾರೆ.
Comments