ಕುಡಿದ ಅಮಲಿನಲ್ಲಿ ನಟಿ ತಬು ಜತೆಗೆ ಅಸಭ್ಯವಾಗಿ ವರ್ತಿಸಿದ್ದ ಜಾಕಿ ಶ್ರಾಫ್
ಬಾಲಿವುಡ್ ನ ಮೋಸ್ಟ್ ಬ್ಯುಟಿಫುಲ್ ನಟಿ ತಬು ನವೆಂಬರ್ 4ರಂದು ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. 1971ರಲ್ಲಿ ಹೈದ್ರಾಬಾದ್ ನಲ್ಲಿ ಜನಿಸಿರುವ ತಬು ಜಮಾಲಾ ಹಶೀಮ್ ಹಾಗೂ ರಿಜ್ವಾನಾ ದಂಪತಿಯ ಪುತ್ರಿ.
ಬಾಲಿವುಡ್ ನ ಮೋಸ್ಟ್ ಬ್ಯುಟಿಫುಲ್ ನಟಿ ತಬು ನವೆಂಬರ್ 4ರಂದು ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. 1971ರಲ್ಲಿ ಹೈದ್ರಾಬಾದ್ ನಲ್ಲಿ ಜನಿಸಿರುವ ತಬು ಜಮಾಲಾ ಹಶೀಮ್ ಹಾಗೂ ರಿಜ್ವಾನಾ ದಂಪತಿಯ ಪುತ್ರಿ. ಪ್ರಾಥಮಿಕ ಶಿಕ್ಷಣ ಹೈದ್ರಾಬಾದ್ ನಲ್ಲಿ ಪೂರ್ಣಗೊಳಿಸಿರುವ ತಂಬು, ಕಾಲೇಜು ಶಿಕ್ಷಣವನ್ನು ಮುಂಬೈಯಲ್ಲಿ ಪೂರ್ಣಗೊಳಿಸಿದರು. ತಬು ಜೀವನದಲ್ಲಿ ಯಾರಿಗೆ ಗೊತ್ತಿರದ ಒಂದು ನಿಜ ಸಂಗತಿ ಇದೆ. ಅವರು ಒಂದು ವೇಳೆ ಈ ನಿಜ ಹೇಳಿದ್ರೆ ಬಾಲಿವುಡ್ ನಟ ಜಾಕಿ ಶ್ರಾಫ್ ಕೆರಿಯರ್ ಮುಗಿದು ಹೋಗ್ತಿತ್ತು.
1986ರಲ್ಲಿ ತಬು ದಿಲ್ ಜಲಾ ಎಂಬ ಚಿತ್ರದ ಶೂಟಿಂಗ್ ನಲ್ಲಿದ್ದರು. ತಂಬು ತನ್ನ ಸಹೋದರಿಯ ಜತೆಗೆ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿದ್ದರು. ಚಿತ್ರದ ಡೈನಿ ಎಂಬಾತರು ವಿಲನ್ ಪಾತ್ರ ಪ್ಲೇ ಮಾಡುತ್ತಿದ್ದರು. ವರದಿ ಪ್ರಕಾರ ಚಿತ್ರದ ಶೂಟಿಂಗ್ ಮುಕ್ತಾಯಗೊಂಡ ಬಳಿಕ ಡೈನಿ ತಮ್ಮ ಮನೆಯಲ್ಲಿ ಪಾರ್ಟಿ ಆಯೋಜಿಸಿದ್ದರಂತೆ. ತಬು ಜತೆಗೆ ಸಹೋದರಿ ಫರಹಾ ಕೂಡ ಪಾರ್ಟಿಯಲ್ಲಿ ಭಾಗಿಯಾದರು. ಈ ವೇಳೆ ಹೆಚ್ಚಾಗಿ ಕುಡಿದಿದ್ದ ಜಾಕಿ ಶ್ರಾಫ್ ತಬು ಹತ್ತಿರ ಬಂದು ಅಸಭ್ಯವಾಗಿ ಒತ್ತಾಯ ಪಡಿಸಲು ಶುರುಮಾಡಿದರು. ಈ ಮಾಹಿತಿಯನ್ನು ಫರ್ಹಾ ಒಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಡೈನಿ ಹತ್ತಿರ ಬಂದು ಜಾಕಿ ಶ್ರಾಫ್ ಅವರಿಂದ ಬಚಾವ್ ಮಾಡಿದರು. ಜಾಕಿ ಶ್ರಾಫ್ ವರ್ತನೆ ಬಗ್ಗೆ ನಟಿ ತಬು ಯಾವತ್ತು ಹೇಳಿಕೊಂಡಿಲ್ಲ.
ಇನ್ನು ಬಾಲಿವುಡ್ ನಟಿ ತಬು ದೊಡ್ಡ ದೊಡ್ಡ ಸ್ಟಾರ್ ಗಳ ಜತೆಗೆ ನಟಿಸಿದ್ದಾರೆ. ಆದರೆ ಯಾವತ್ತು ಜಾಕಿ ಶ್ರಾಫ್ ಜತೆಗೆ ನಟಿಸಿಲ್ಲ. ಅಜಯ್ ದೇವಗನ್ ಜತೆಗೆ ದೃಶಂ ಚಿತ್ರದಲ್ಲಿ ನಟಿಸಿದ್ದ ತಬು ಇವರಿಬ್ಬರ ಜೋಡಿಯನ್ನು ಹಲವರು ಇಷ್ಟಪಟ್ಟರು. ಈ ಚಿತ್ರ ಯಶಸ್ವಿ ಕಂಡಿತು.
Comments