ಯಶ್ ಸಾರಥ್ಯದಲ್ಲಿ 'ಕನ್ನಡದ ಕೋಟ್ಯಾಧಿಪತಿ' ಕಾರ್ಯಕ್ರಮ ಮೂಡಿಬರುತ್ತಾ ?

ನಟ ಪುನೀತ್ ರಾಜ್ ಕುಮಾರ್ ಬದಲು ಈ ಬಾರಿ ಯಶ್ ಸಾರಥ್ಯದಲ್ಲಿ 'ಕನ್ನಡದ ಕೋಟ್ಯಾಧಿಪತಿ' ಕಾರ್ಯಕ್ರಮ ಬರಲಿದೆ ಎನ್ನುವ ಗುಸು ಗುಸು ಕೇಳಿ ಬಂದಿತ್ತು. ಆದರೆ ಈ ಬಗ್ಗೆ ಸ್ವತಃ ಯಶ್ ಇದೀಗ ಮಾತನಾಡಿದ್ದಾರೆ. 'ಕನ್ನಡದ ಕೋಟ್ಯಾಧಿಪತಿ'ಗೆ ತಮಗೆ ಆಫರ್ ಬಂದಿರುವ ವಿಷಯದ ಬಗ್ಗೆ ಯಶ್ ಸ್ಪಷ್ಟಪಡಿಸಿದ್ದಾರೆ.
ನಟ ಯಶ್ ಇದೀಗ 'ಕನ್ನಡ ಕೋಟ್ಯಾಧಿಪತಿ' ನಿರೂಪಣೆ ಮಾಡುವ ಬಗ್ಗೆ ಇದ್ದ ಎಲ್ಲ ಗಾಸಿಪ್ ಗಳನ್ನು ನಿವಾರಿಸಿದ್ದಾರೆ. 'ಕನ್ನಡದ ಕೋಟ್ಯಾಧಿಪತಿ' ಕಾರ್ಯಕ್ರಮ ನಿರೂಪಣೆಗಾಗಿ ಸುವರ್ಣ ವಾಹಿನಿ ಆಫರ್ ನೀಡಿದ್ದು ನಿಜ. ಆದರೆ ಸುವರ್ಣ ವಾಹಿನಿ ಕಡೆಯಿಂದ ಬಂದಿರುವ ಆಫರ್ ಅನ್ನು ನಾನು ಇನ್ನು ಒಪ್ಪಿಕೊಂಡಿಲ್ಲ. ಸದ್ಯಕ್ಕೆ ಕಾರ್ಯಕ್ರಮವನ್ನು ನಾನು ಒಪ್ಪಿಕೊಂಡಿಲ್ಲ. ಆದರೆ ಮುಂದಿನ ದಿನದಲ್ಲಿ ಏನಾಗುತ್ತದೆ ಎನ್ನುವುದು ಗೊತ್ತಿಲ್ಲ. ಪುನೀತ್ ಸದ್ಯ ಕಲರ್ಸ್ ಕನ್ನಡ ವಾಹಿನಿಗೆ 'ಫ್ಯಾಮಿಲಿ ಪವರ್' ಎಂಬ ಹೊಸ ಕಾರ್ಯಕ್ರಮವನ್ನು ಮಾಡುತ್ತಿದ್ದು, ಇದರಿಂದ ಯಶ್ ಗೆ 'ಕನ್ನಡ ಕೋಟ್ಯಾಧಿಪತಿ'ಯ ಆಫರ್ ನೀಡಲಾಗಿದೆ. ಸದ್ಯ ಯಶ್ ತಮ್ಮ ಮಹತ್ವಾಕಾಂಕ್ಷೆಯ 'ಕೆ.ಜಿ.ಎಫ್' ಸಿನಿಮಾದಲ್ಲಿ ಬಿಜಿ ಇದ್ದು, ಇದರೊಂದಿಗೆ 'ಕನ್ನಡ ಕೋಟ್ಯಾಧಿಪತಿ' ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಾರಾ ಎನ್ನುವುದು ದೊಡ್ಡ ಪ್ರಶ್ನೆಯಾಗಿದೆ.
Comments