ಮತ್ತೆ ಒಂದಾದ ಸ್ಯಾಂಡಲ್ ವುಡ್ ಕುಚುಕು ಗೆಳೆಯರು
ಲೂಸ್ ಮಾದ ಯೋಗಿ ಮತ್ತು ರಾಕಿಂಗ್ ಸ್ಟಾರ್ ಯಶ್ ಇವರಿಬ್ಬರ ಸ್ನೇಹ ಎಷ್ಟರ ಮಟ್ಟಿಗೆ ಇತ್ತಂದ್ರೆ, ಯಶ್ ಚಿತ್ರೀಕರಣದಲ್ಲಿದ್ದಾಗ ಶೂಟಿಂಗ್ ಸೆಟ್ ಗೆ ಯೋಗಿ ಭೇಟಿಕೊಟ್ಟು ಟೈಂ ಪಾಸ್ ಮಾಡ್ತಿದ್ರು. ಯೋಗಿ ಶೂಟಿಂಗ್ ನಲ್ಲಿದ್ದಾಗ ಯಶ್ ಭೇಟಿ ಕೊಟ್ಟು ಟೈಂ ಪಾಸ್ ಮಾಡ್ತಿದ್ರು.
ಇನ್ನು ಇಬ್ಬರಿಗೂ ಶೂಟಿಂಗ್ ಇಲ್ಲದ ಟೈಂನಲ್ಲಿ ಹೇಳೋದೆ ಬೇಡ ಬಿಡಿ. ಒಂದು ಕಾಲದಲ್ಲಿ ಹೀಗಿದ್ದ ಸ್ನೇಹಿತರು ಕೆಲ ವರ್ಷಗಳು ಕಳೆದಂತೆ ಇಬ್ಬರ ಸ್ನೇಹದಲ್ಲಿ ಬಿರುಕು ಬಿಟ್ಟಿತ್ತು. ಯಶ್ ಮತ್ತು ಯೋಗಿ ಇಬ್ಬರು ಒಂದೇ ಸಂದರ್ಭದಲ್ಲಿ ಅಂದ್ರೆ ಎರಡು ಮೂರು ವರ್ಷ ಅಂತರದಲ್ಲಿ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿಕೊಟ್ಟವರು. ಇಬ್ಬರು ಒಂದೇ ವಯಸ್ಸಿನವರು ಆಗಿರೋದ್ರಿಂದ ಇಬ್ಬರು ಒಳ್ಳೆ ಫ್ರೆಂಡ್ಸ್ ಆಗಿದ್ದರು. ಆದ್ರೆ ವರ್ಷಗಳು ಕಳೆದಂತೆ ಇಬ್ಬರಲ್ಲಿ ಮನಸ್ಥಾಪಗಳು ಹೆಚ್ಚಾಗುವುದಕ್ಕೆ ಪ್ರಾರಂಭ ಆಯ್ತು. ರಾಕಿಂಗ್ ಸ್ಟಾರ್ ಯಶ್ ಮದುವೆಯಲ್ಲಿ ಯೋಗಿ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಯೋಗಿಗೆ ಆಹ್ವಾನವೇ ಹೋಗಿರಲಿಲ್ವಾ ಅಥವಾ ಹೋಗಿದ್ದರು ಶೂಟಿಂಗ್ ಬಿಜಿ ಅಂತ ಬರಲಿಲ್ಲವಾ ಗೊತ್ತಿಲ್ಲ. ಆದ್ರೆ, ಮದುವೆ ಹಾಗೂ ಆರತಕ್ಷತೆಯಲ್ಲಿ ಯೋಗಿ ಗೈರು ಮಾತ್ರ ಎದ್ದು ಕಾಣಿಸಿತ್ತು. ಇದು ಕೂಡ ಇವರಿಬ್ಬರ ಮುನಿಸಿಗೆ ಸಾಕ್ಷಿಯಾಗಿತ್ತು.
ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಯೋಗಿ ಮತ್ತು ಸಾಹಿತ್ಯ ಮದುವೆಗೆ ರಾಕಿಂಗ್ ಸ್ಟಾರ್ ಆಗಮಿಸಿ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಹೀಗಾಗಿ, ಇವರಿಬ್ಬರ ನಡುವಿನ ಸ್ನೇಹಕ್ಕೆ ಮತ್ತೆ ಮರು ಜೀವ ಬಂದಿದೆ ಎನ್ನಲಾಗಿದೆ. ಬಹುಕಾಲದ ಸ್ನೇಹಿತನಿಗೆ ಶುಭಾಶಯ ಹೇಳಿ ಸಿಹಿಯಾದ ಅಪ್ಪುಗೆ ಕೊಟ್ಟು ಎಲ್ಲವನ್ನು ಮರೆತು ಮುಂದುವರೆಯೋಣ ಎಂದಿದ್ದಾರೆ. ಒಟ್ನಲ್ಲಿ, ಇಷ್ಟು ದಿನ ಹರಿದಾಡ್ತಿದ್ದ ಅಂತೆ ಕಂತೆಗಳಿಗೆ ಯಶ್ ಮತ್ತು ಯೋಗಿ ಜೋಡಿ ತೆರೆ ಎಳೆದಿದ್ದಾರೆ.
Comments