ಪ್ರೇಕ್ಷಕರನ್ನು ನಗಿಸಲು ಸಜ್ಜಾದ ಕಲರ್ಸ್ ಕನ್ನಡ

ಕಲರ್ಸ್ ಕನ್ನಡ ಚಾನೆಲ್ನಲ್ಲಿ ಕೆಲ ದಿನಗಳ ಹಿಂದೆ 'ಮಜಾ ಟಾಕೀಸ್' ಮುಗಿದಿದೆ ಎಂಬ ಬೇಸರದಲ್ಲಿದ್ದ ಪ್ರೇಕ್ಷಕರನ್ನು ನಗಿಸಲು ಈಗ ಮತ್ತೊಂದು ಕಾಮಿಡಿ ಶೋ ಸಿದ್ಧವಾಗಿದೆ. ಕುಟುಂಬ ಸಮೇತರಾಗಿ ಕುಳಿತು ನೋಡುವಂಥ 'ಕಾಮಿಡಿ ಟಾಕೀಸ್' ಇಂದಿನಿಂದ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 8ಗಂಟೆಗೆ ಪ್ರಸಾರವಾಗಲಿದೆ. ಇದೊಂದು ನಗೆಯ ಸ್ಪರ್ಧೆ.
ಮೊದಲು ಡ್ಯಾನ್ಸ್ ರಿಯಾಲಿಟಿ ಶೋ ಗೆ ಜಡ್ಜ್ ಆಗಿದ್ದ ರಚಿತಾ, ಈಗ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಕಾಮಿಡಿ ಟಾಕೀಸ್ ಎಂಬ ಕಾಮಿಡಿ ರಿಯಾಲಿಟಿ ಶೋ ನಲ್ಲಿ ಜಡ್ಜ್ ಆಗಿ ಭಾಗವಹಿಸಲಿದ್ದಾರೆ. ರಚಿತಾ ಜೊತೆಗೆ ಮತ್ತೊಬ್ಬ ಪಾಪ್ಯುಲರ್ ನಿರೂಪಕ ಸೃಜನ್ ಲೋಕೇಶ್ ಕೂಡ ಈ ರಿಯಾಲಿಟಿ ಶೋಗೆ ಜಡ್ಜ್ ಆಗಿ ಬರಲಿದ್ದಾರೆ, ಇನ್ನೂ ಅಗ್ನಿ ಸಾಕ್ಷಿ ಧಾರಾವಾಹಿ ಮೂಲಕ ಎಲ್ಲರ ಮನ ಗೆದ್ದಿರುವ ನೀಲಿ ಕಣ್ಣಿನ ಹುಡುಗ ವಿಜಯ್ ಸೂರಿಯಾ ಕಾರ್ಯಕ್ರಮದ ನಿರೂಪಣೆ ಮಾಡಲಿದ್ದಾರೆ. ಮೊದಲ ಕೆಲವೊಂದು ಎಪಿಸೋಡ್ ಗಳ ಶೂಟಿಂಗ್ ಈಗಾಗಲೇ ಆರಂಭವಾಗಿದ್ದು, ನವೆಂಬರ್ 4 ರಿಂದ ಕಾರ್ಯಕ್ರಮ ಪ್ರಸಾರವಾಗಲಿದೆ. ಈ ಮೂವರು ಒಟ್ಟಿಗೆ ಬರುತ್ತಿರುವ ರಿಯಾಲಿಯಿ ಶೋ ಬಗ್ಗೆ ಈಗಾಗಲೇ ಕೂತೂಹಲ ಮೂಡಿದೆ, ಸೃಜನ್ ಅದ್ಬುತ ಕಾಮಿಡಿ ಕಾರ್ಯಕ್ರಮದ ಹೈಲೈಟ್ ಆಗಲಿದೆ.
Comments