ಬಿಗ್ ಬಾಸ್ ನ ಹಿಂದಿಕ್ಕಿ ಜನರಿಗೆ ಮೋಡಿ ಮಾಡ್ತಿರುವ ಪುಟ್ಟಗೌರಿ

ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ 'ಪುಟ್ಟಗೌರಿ ಮದುವೆ' BARC ರೇಟಿಂಗ್ ನಲ್ಲಿ ಮೊದಲ ಸ್ಥಾನದಲ್ಲಿದೆ. ಟಾಪ್ 5 ರಲ್ಲಿ 'ಬಿಗ್ ಬಾಸ್' ಸ್ಥಾನ ಪಡೆದಿಲ್ಲ. 'ಬಿಗ್ ಬಾಸ್' ಹಿಂದಿನ ಸೀಸನ್ ಗಳಲ್ಲಿ ಮೊದಲ ಸ್ಥಾನ ಗ್ಯಾರಂಟಿಯಾಗಿತ್ತು. ಈ ಬಾರಿ ಧಾರಾವಾಹಿಗಳು ಪಾರಮ್ಯ ಮೆರೆದಿವೆ.
ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ರಿಯಾಲಿಟಿ ಶೋ 'ಬಿಗ್ ಬಾಸ್' ಜನಪ್ರಿಯವಾಗಿದೆ. ಆದರೆ, 'ಪುಟ್ಟಗೌರಿ' ವೀಕ್ಷಕರನ್ನು ಮೋಡಿ ಮಾಡಿದ್ದು, 'ಬಿಗ್ ಬಾಸ್' ಅನ್ನೇ ಹಿಂದಿಕ್ಕಿದ್ದಾಳೆ. BARC ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ 'ಪುಟ್ಟಗೌರಿ ಮದುವೆ', 'ಲಕ್ಷ್ಮಿ ಬಾರಮ್ಮ', 'ಶನಿ ಮಹಾಸಂಚಿಕೆ', 'ಕುಲವಧು', 'ಅಗ್ನಿಸಾಕ್ಷಿ' 1 ರಿಂದ 5 ನೇ ಸ್ಥಾನಗಳಲ್ಲಿವೆ. 'ಬಿಗ್ ಬಾಸ್' ಇಲ್ಲಿ ಸ್ಥಾನ ಪಡೆದುಕೊಂಡಿಲ್ಲ. ಮೊದಲ ವಾರ ವೀಕ್ಷಕರನ್ನು ಸೆಳೆದಿದ್ದ 'ಬಿಗ್ ಬಾಸ್' ನಂತರದಲ್ಲಿ ಹಿಂದೆ ಉಳಿದಿದೆ. 'ಪುಟ್ಟಗೌರಿ ಮದುವೆ' ನಿರೀಕ್ಷೆಗೂ ಮೀರಿ ಭರ್ಜರಿ ವೀಕ್ಷಕರನ್ನು ಸೆಳೆದಿದೆ.
Comments