ಬಿಗ್ ಬಾಸ್'ನಲ್ಲಿ ರಜನಿಕಾಂತ್ ಸ್ಟೈಲ್ ನಲ್ಲಿ ಮಿಂಚಿದ ಜಯಶ್ರೀನಿವಾಸನ್
ಹಾಲಿನ ವಿಚಾರ ಮನೆಯಲ್ಲಿ ಹಾಲಾಹಲಕ್ಕೆ ಕಾರಣವಾಗಿದೆ. ದಿವಾಕರ್, ಜಯಶ್ರೀನಿವಾಸನ್ ಅವರು ಆಚಾರ್ಯ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ.ಸದಸ್ಯರೆಲ್ಲರೂ ಚರ್ಚೆ ಮಾಡುವಾಗ ಜಯಶ್ರೀನಿವಾಸನ್ ಫುಲ್ ಜೋಶ್ ನಲ್ಲಿ ಮಾತನಾಡಿದ್ದಾರೆ. ತಾವು ಮಾತನಾಡುವಾಗ ಮಧ್ಯ ಯಾರೂ ಮಾತನಾಡಬಾರದೆಂದು ಅಷ್ಟೇ ತಾಕೀತು ಮಾಡಿದ್ದಾರೆ.
ಜಯಶ್ರೀನಿವಾಸನ್ 'ಬಿಗ್ ಬಾಸ್' ಮನೆಯಲ್ಲಿ ಸಂಚಲನ ಮೂಡಿಸಿದ್ದಾರೆ. ಸುದೀಪ್ ಅಭಿನಯದ 'ಹೆಬ್ಬುಲಿ' ಸಿನಿಮಾ ಡೈಲಾಗ್ ಹೊಡೆದಿದ್ದ ಅವರು, ಕಳಪೆ ಬೋರ್ಡ್ ಹಾಕಿಕೊಂಡು ರಜನಿಕಾಂತ್ ಸ್ಟೈಲ್ ನಲ್ಲಿ ಮಿಂಚಿದ್ದಾರೆ. ಲಕ್ಸುರಿ ಬಜೆಟ್ ಟಾಸ್ಕ್ ನಲ್ಲಿ ನೀಡಲಾಗಿದ್ದ ಸವಾಲ್ ನಲ್ಲಿ ಬಟ್ಟಲಿನಲ್ಲಿ ನೀರು ಹೆಚ್ಚು ಉಳಿಸಿಕೊಂಡ ಶ್ರುತಿ ವಿಜೇತರಾಗಿದ್ದಾರೆ. ಕೊನೆಯವರೆಗೂ ಉಳಿದರೂ ಚಂದನ್ ನೀರು ಜಾಸ್ತಿ ಉಳಿಸಿಕೊಳ್ಳದ ಕಾರಣ ನಿರಾಸೆ ಅನುಭವಿಸಿದ್ದಾರೆ. ಇನ್ನು ವಿಜೇತರಾದ ಕೆಲವು ಸದಸ್ಯರಿಗೆ ನೀಡಲಾಗಿದ್ದ ಸಣ್ಣ ಪೆಟ್ಟಿಗೆಯಲ್ಲಿ ಮುಂದಿನ ವಾರಕ್ಕೆ ಇಮ್ಯುನಿಟಿ ಪಡೆದಿದ್ದಾರೆ ಎಂದು ತಿಳಿಸಲಾಗಿದೆ.
ಸಮೀರಾಚಾರ್ಯ ಹಾಲು ಕುಡಿಯಲು ಸಿಹಿಕಹಿ ಚಂದ್ರು ಬಳಿ ಕೇಳಿದ್ದು, ಅವರು ಮೊದಲಿಗೆ ಬೇಡವೆಂದರೂ ಬಳಿಕ ಕುಡಿಯಿರಿ ಎಂದು ತಿಳಿಸಿದ್ದಾರೆ. ಹಾಲಿನ ವಿಚಾರ ಮನೆಯಲ್ಲಿ ಹಾಲಾಹಲಕ್ಕೆ ಕಾರಣವಾಗಿದೆ. ದಿವಾಕರ್, ಜಯಶ್ರೀನಿವಾಸನ್ ಅವರು ಆಚಾರ್ಯ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ.ಜಗನ್ ಅವರೂ ಆಚಾರ್ಯ ಬಳಿ ಇದೇ ವಿಚಾರಕ್ಕೆ ಸಿಟ್ಟಿನಿಂದ ಮಾತಾಡಿದ್ದಾರೆ. ನಂತರದಲ್ಲಿ ಸದಸ್ಯರೆಲ್ಲರೂ ಚರ್ಚೆ ಮಾಡುವಾಗ ಜಯಶ್ರೀನಿವಾಸನ್ ಫುಲ್ ಜೋಶ್ ನಲ್ಲಿ ಮಾತನಾಡಿದ್ದಾರೆ. ತಾವು ಮಾತನಾಡುವಾಗ ಮಧ್ಯ ಯಾರೂ ಮಾತನಾಡಬಾರದೆಂದು ಅಷ್ಟೇ ತಾಕೀತು ಮಾಡಿದ್ದಾರೆ. ಅವರು ಅಷ್ಟೇ ಎಂದು ಹೇಳಿದ್ದಕ್ಕೆ ಜಗನ್ ಮತ್ತು ಆಶಿತಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕ್ಯಾಪ್ಟನ್ ಆಗಿದ್ದ ಸಮೀರಾಚಾರ್ಯ ಉತ್ತಮ ಪ್ರದರ್ಶನ ನೀಡಿದ್ದಕ್ಕಾಗಿ ಅನುಪಮಾ ಮತ್ತು ಕಳಪೆ ಪ್ರದರ್ಶನ ನೀಡಿದ್ದಕ್ಕಾಗಿ ಚಂದ್ರು ಅವರನ್ನು ಆಯ್ಕೆ ಮಾಡಿದ್ದರಾದರೂ, ಆಕ್ಷೇಪ ವ್ಯಕ್ತವಾದ ಬಳಿಕ ನಿರ್ಧಾರ ಬದಲಿಸಿ, ಉತ್ತಮ ಪ್ರದರ್ಶನ ನೀಡಿದ್ದಕ್ಕಾಗಿ ಚಂದನ್, ಕಳಪೆ ಪ್ರದರ್ಶನಕ್ಕಾಗಿ ಜಯಶ್ರೀನಿವಾಸನ್ ಅವರನ್ನು ಆಯ್ಕೆ ಮಾಡಿದ್ದಾರೆ.ನೀವು ಕ್ಯಾಪ್ಟನ್ ಆಗಿ ಸರಿಯಾಗಿ ಕೆಲಸ ಮಾಡ್ಲಿಲ್ಲ ಎಂದು ದಿವಾಕರ್ ಆಚಾರ್ಯರನ್ನು ನಿಂದಿಸಿದ್ದಾರೆ. ಉತ್ತಮ ಪ್ರದರ್ಶನ ನೀಡಿದ ಮೂವರಿಗೆ ಐಸ್ ಕ್ರೀಂ ಕೊಡಲಾಗಿದ್ದು, ಅದನ್ನು ಬೇರೆಯವರಿಗೆ ಕೊಟ್ಟು ನಿಯಮ ಉಲ್ಲಂಘಿಸಿದ ಕಾರಣಕ್ಕೆ ಸಮೀರಾಚಾರ್ಯ ಬೋರ್ಡ್ ಮೇಲೆ ತಪ್ಪೊಪ್ಪಿಗೆ ಬರೆಯುವಂತಾಗಿದೆ.
Comments