ಜನೆವರಿ ಕೊನೆಯ ವಾರಕ್ಕೆ 'ಅಮ್ಮೆರ್ ಪೊಲೀಸಾ' ತುಳು ಚಿತ್ರ ಬಿಡುಗಡೆ

ದಕ್ಷಿಣ ಕನ್ನಡ: ದಕ್ಷಿಣ ಕನ್ನಡ ಜಿಲ್ಲೆಯಾದಂತ್ಯ ತುಳುವಿನಲ್ಲಿ ಹಾಸ್ಯ ಪ್ರಧಾನ ಚಿತ್ರವೊಂದು ಬರಲು ಸಜ್ಜಾಗಿದೆ. ಸೂರಜ್ ಶೆಟ್ಟಿ ನಿರ್ದೇಶನದ 'ಅಮ್ಮೆರ್ ಪೊಲೀಸಾ' ಚಿತ್ರದ ಶೂಟಿಂಗ್ ಮುಕ್ತಾಯಗೊಂಡಿದ್ದು, ಚಿತ್ರದ ಎಡಿಟಿಂಗ್ ಕೆಲಸಗಳು ಭರದಿಂದ ಸಾಗುತ್ತಿವೆ. ಜನವರಿ ಕೊನೆಯ ವಾರಕ್ಕೆ 'ಅಮ್ಮೇರ್ ಪೊಲೀಸಾ' ಚಿತ್ರ ಪ್ರೇಕ್ಷಕರ ಎದುರಿಗೆ ಬರಲಿದೆ.

ಪ್ರೊಡೇಕ್ಷನಲ್ಲಿ ಕಾರ್ಯನಿರ್ವಹಿಸಿರುವ ಶರಣಬಸಪ್ಪಾ ಅವರು ಸಿವಿಕ್ ನ್ಯೂಸ್ ಗೆ ಮಾಹಿತಿ ನೀಡಿದ್ದಾರೆ.'ಅಮ್ಮೇರ್ ಪೊಲೀಸಾ' ಟೈಟಲ್ ಅಡಿಯಲ್ಲಿ ದಕ್ಷಿಣ ಕನ್ನಡದ ಜನರಿಗೆ ನಗೆ ಮೂಡಿಸುತ್ತದೆ ಎಂದರೆ ತಪ್ಪಾಗಿಲಿಕ್ಕಿಲ್ಲ. ಯಾಕಂದ್ರೆ ಈ ಚಿತ್ರ ಪಕ್ಕಾ ಹಾಸ್ಯಮಯ ಚಿತ್ರ, ಎಲ್ಲೂ ಬೋರ್ ಮೂಡಿಸುವುದಿಲ್ಲ. ಉತ್ತಮವಾದ ಹಳ್ಳಿ ಪರಿಸರದ ವಾತಾವರಣದಲ್ಲಿ ಚಿತ್ರದ ಶೂಟಿಂಗ್ ನಡೆದಿದೆ. ನೈಜ ಗುತ್ತಿನ ಮನೆಯಲ್ಲಿ ಶೂಟಿಂಗ್ ನಡೆಸಲಾಗಿದೆ. ಇರಾ, ಮುಡಿಪು, ದೇರಳಕಟ್ಟೆ ಭಾಗದಲ್ಲಿಯು 'ಅಮ್ಮೇರ್ ಪೊಲೀಸಾ' ಚಿತ್ರದ ಚಿತ್ರೀಕರಣ ನಡೆದಿದೆ ಎಂದು ಪ್ರೊಡೆಕ್ಷನ್ ಟೀಮ್ ನ ಶರಣಬಸಪ್ಪಾ ತಿಳಿಸಿದರು.
ಚಿತ್ರದ ನಿರ್ಮಾಪಕ ರಾಜೇಶ್ ಬಿ.ಶೆಟ್ಟಿ ಆಗಿದ್ದು, ಇನ್ನು ಛಾಯಾಗ್ರಾಹಕ ಸಚಿನ್ ಎಸ್ ಶೆಟ್ಟಿ, ಸಂದೀಪ್ ಆರ್. ಬಳ್ಳಾಲ್ ಅವರು ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಇನ್ನು ಸತೀಶ್ ಬ್ರಹ್ಮಾವರ್ ಪ್ರೊಡೆಕ್ಷನ್ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸಿದ್ದಾರೆ. ಸಿವಿಕ್ ನ್ಯೂಸ್ ಜೊತೆಗೆ ಮಾತನಾಡಿರುವ ಶರಣಬಸಪ್ಪಾ ಅವರು, ಯುವ ನಿರ್ದೇಶಕ ಸೂರಜ್ ಶೆಟ್ಟಿ ಈ ಚಿತ್ರಕ್ಕಾಗಿ ಸಾಕಷ್ಟು ಶ್ರಮ, ಶ್ರದ್ಧೆ ವಹಿಸಿದ್ದಾರೆ. ಅವರ ಜೊತೆಗೆ ಟೀಮ್ ವರ್ಕ್ ಕೂಡ ಅಂದರೆ ಯುವ ಕಲಾವಿದರು, ಪ್ರೊಡೆಕ್ಷನ್ ಶ್ರಮ ಹಾಕಿದ್ದಾರೆ. ಈ ಸಿನಿಮಾದಲ್ಲಿನ ಎಲ್ಲಾ ಕಲಾವಿದರ ಶ್ರಮದಿಂದ ಚಿತ್ರದ ಶೂಟಿಂಗ್ ಯಶಸ್ವಿಯಾಗಿ ನೆರವೇರಿದೆ ಎಂದು ಹೇಳಿದರು.
ಇದೊಂದು ಫ್ಯಾಮಿಲಿ ಸಮೇತ ಬಂದು ನೋಡಬಹುದಾದ ಸಿನಿಮಾ, ಪಕ್ಕಾ ಮನೋರಂಜನಾತ್ಮಕ ಸಿನಿಮಾ. ಹಾಸ್ಯಮಯ ಚಿತ್ರವೊಂದು ತುಳು ಜನರನ್ನು ರಂಜಿಸಲಿದೆ. ಜನೆವರಿ ಕೊನೆಯ ವಾರಕ್ಕೆ ಚಿತ್ರ ರಿಲೀಸ್ ಆಗಲಿದೆ. ಈ ಚಿತ್ರ ಯಶಸ್ಸು ಕಾಣಲಿ ಅನ್ನೋದು ನಮ್ಮ ಆಶಯ.
Comments