ಬ್ಯುಸಿ ಶೆಡ್ಯೂಲ್ ನಲ್ಲೂ ಸಿಸಿಎಲ್ ಟೂರ್ನಮೆಂಟ್ ಗೆ ತಯಾರಾಗುತ್ತಿರುವ ಕಿಚ್ಚ ಸುದೀಪ್

ಸದ್ಯದಲ್ಲೇ ಸೆಲೆಬ್ರಿಟಿ ಕ್ರಿಕೆಟ್ ಲೀಗ್ (CCL) ಟೂರ್ನಮೆಂಟ್ ನಡೆಯಲಿದ್ದು, ಈ ಟೂರ್ನಿಯಲ್ಲಿ ಸುದೀಪ್ ನೇತೃತ್ವದ 'ಕರ್ನಾಟಕ ಬುಲ್ಡೋಜರ್ಸ್' ತಂಡ ಆಡಲಿದೆ. ಹೀಗಾಗಿ, ಸುದೀಪ್ ಸೇರಿದಂತೆ ಸ್ಯಾಂಡಲ್ ವುಡ್ ಸ್ಟಾರ್ಸ್ ಪ್ರಾಕ್ಟೀಸ್ ಆರಂಭಿಸಿದ್ದಾರೆ.
ಬ್ಯುಸಿ ಶೆಡ್ಯೂಲ್ ನಲ್ಲೂ ಸುದೀಪ್ ಸಿಸಿಎಲ್ ಟೂರ್ನಮೆಂಟ್ಗೆ ಪ್ರಾಕ್ಟೀಸ್ ಆರಂಭಿಸಿದ್ದಾರೆ. ಪ್ರಾಕ್ಟೀಸ್ ವೇಳೆ ಕರ್ನಾಟಕ ರಣಜಿ ತಂಡದ ಆಟಗಾರ ವಿ.ಕರಿಯಪ್ಪ ಅವರು ಬೌಲಿಂಗ್ ಮಾಡಿ 'ಕರ್ನಾಟಕ ಬುಲ್ಡೋಜರ್ಸ್' ಆಟಗಾರರಿಗೆ ಸಹಕಾರಿಯಾಗಿದ್ದರು. ಇದಕ್ಕೆ ನಾಯಕ ಸುದೀಪ್ ತಮ್ಮ ಟ್ವಿಟ್ಟರ್ ನಲ್ಲಿ ಧನ್ಯವಾದ ತಿಳಿಸಿದ್ದಾರೆ.
ಕಿಚ್ಚ ಸುದೀಪ್, ನಟ ಪ್ರದೀಪ್, ರಾಹುಲ್, ಸೇರಿದಂತೆ ಇನ್ನು ಹಲವು ಯುವ ನಟರು ಪ್ರಾಕ್ಟೀಸ್ ಮಾಡುತ್ತಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಸಿಸಿಎಲ್ ಪಂದ್ಯಾವಳಿಗಳು ಯಾವಾಗ ಆರಂಭವಾಗುತ್ತಿದೆ ಎಂಬುದರ ಬಗ್ಗೆ ನಿಖರವಾದ ಮಾಹಿತಿ ಇಲ್ಲ. ಆದ್ರೆ, ಅದಕ್ಕೆ ಸಂಬಂಧಿಸಿದ ಎಲ್ಲ ರೀತಿಯ ಸಿದ್ದತೆಗಳು ನಡೆಯುತ್ತಿದೆ. ಈ ಟೂರ್ನಿಯಲ್ಲಿ ಕನ್ನಡ, ತಮಿಳು, ಹಿಂದಿ, ಮಲಯಾಳಂ, ಬೋಜ್ ಪುರಿ, ಮರಾಠಿ ಸಿನಿಮಾ ಇಂಡಸ್ಟ್ರಿ ಸೇರಿದಂತೆ ಸುಮಾರು 8 ತಂಡಗಳು ಭಾಗಿಯಾಗಲಿವೆ ಎನ್ನಲಾಗಿದೆ.
Comments