ಬಿಗ್ ಬಾಸ್ ನಲ್ಲಿ ಅನುಪಮಾ ಗೌಡರ ಕಣ್ಣೀರ ಧಾರೆಯ ಕಹಾನಿಗೆ ಕಾರಣವೇನು?



ಅನುಪಮಾ ಗೌಡ ರನ್ನ ಪ್ರೀತಿಸುತ್ತಿದ್ದ ಜಗನ್ನಾಥ್ 'ಮದುವೆ ಆಗುವ ಬಗ್ಗೆ' ವಿಶ್ವಾಸದಿಂದ ಎಲ್ಲೂ, ಯಾರೊಂದಿಗೂ ಹೇಳಲೇ ಇಲ್ವಂತೆ. ಹಾಗಂತ ತಮ್ಮ 'ಬ್ರೇಕಪ್ ಕಹಾನಿ' ಬಗ್ಗೆ ಅನುಪಮಾ ಗೌಡ ವಿವರಿಸಲು ಶುರು ಮಾಡಿದರು.ಪ್ರೀತಿ ಮುರಿದು ಬಿದ್ದಿದೆ ಎಂದು ತಾವು ಅರಗಿಸಿಕೊಳ್ಳುವ ಮುನ್ನವೇ, ಕಿರುತೆರೆ ಲೋಕದಲ್ಲಿ ತಮ್ಮ ಬ್ರೇಕಪ್ ಸಂಗತಿ ಹರಿದಾಡಿತ್ತು ಎಂದು ಅನುಪಮಾ ಗೌಡ ಹೇಳಿದ್ದಾರೆ.
'ಅಕ್ಕ' ಧಾರಾವಾಹಿ ಖ್ಯಾತಿಯ ಅನುಪಮಾ ಗೌಡ ಹಾಗೂ 'ಗಾಂಧಾರಿ' ಧಾರಾವಾಹಿ ಖ್ಯಾತಿಯ ಜಗನ್ನಾಥ್ ಚಂದ್ರಶೇಖರ್ ಒಂದ್ಕಾಲದಲ್ಲಿ ಪ್ರಣಯ ಪಕ್ಷಿಗಳು. ವರ್ಷಗಳ ಕಾಲ ಪ್ರೇಮದ ಅಮಲಿನಲ್ಲಿ ತೇಲಾಡಿದ ಈ ಜೋಡಿಯ ಪ್ರೀತಿ ಎರಡು ವರ್ಷಗಳ ಹಿಂದಷ್ಟೇ ಮುರಿದು ಬಿದ್ದಿತ್ತು. ಕಳೆದ ಎರಡು ವರ್ಷಗಳಿಂದ ನಾನೊಂದು ತೀರಾ... ನೀನೊಂದು ತೀರಾ ಅಂತ ತಮ್ಮ ತಮ್ಮ ದಾರಿಯಲ್ಲಿ ಸಾಗುತ್ತಿದ್ದ ಅನುಪಮಾ ಗೌಡ ಹಾಗೂ ಜಗನ್ನಾಥ್ ಇದೀಗ 'ಬಿಗ್ ಬಾಸ್' ಮನೆಯಲ್ಲಿ ಮುಖಾಮುಖಿ ಆಗಿದ್ದಾರೆ. ಮಾಜಿ ಪ್ರಿಯತಮ ಎದುರಿಗೆ ಓಡಾಡಿಕೊಂಡು ಇರುವಾಗಲೇ, ಅನುಪಮಾ ಗೌಡಗೆ ಹಳೆಯದ್ದೆಲ್ಲ ನೆನಪಾಗುತ್ತಿದೆ. ಹೃದಯ ಭಾರ ಎನಿಸುತ್ತಿದೆ. ಹಳೆಯ ನೆನಪುಗಳಿಗೆ ಜಾರುತ್ತಿರುವ ಅನುಪಮಾ ಗೌಡ ತಮ್ಮ ಪ್ರೀತಿ ಮುರಿದು ಬಿದ್ದದ್ದು ಯಾಕೆ ಎಂಬ ಸಂಗತಿಯನ್ನ ನೆನೆದು 'ಬಿಗ್ ಬಾಸ್' ಮನೆಯಲ್ಲಿ ಕಣ್ಣೀರು ಸುರಿಸಿದ್ದಾರೆ.
ಪ್ರೀತಿ ಮುರಿದು ಬಿದ್ದಿದೆ ಎಂದು ತಾವು ಅರಗಿಸಿಕೊಳ್ಳುವ ಮುನ್ನವೇ, ಕಿರುತೆರೆ ಲೋಕದಲ್ಲಿ ತಮ್ಮ ಬ್ರೇಕಪ್ ಸಂಗತಿ ಹರಿದಾಡಿತ್ತು ಎಂದು ಅನುಪಮಾ ಗೌಡ ಹೇಳಿದ್ದಾರೆ. ಅಸಲಿಗೆ, ಪ್ರೀತಿಸುತ್ತಿರುವಾಗ... ಜಗನ್ ಹುಟ್ಟುಹಬ್ಬದಂದು ಇಬ್ಬರು ಉಂಗುರ ಬದಲಾಯಿಸಿಕೊಂಡಿದ್ದರಂತೆ. ರಿಂಗ್ ಎಕ್ಸ್ ಚೇಂಜ್ ಮಾಡಿಕೊಂಡ ಬಳಿಕ ಅದೇ ರೀತಿ ಇಬ್ಬರೂ ತಮ್ಮ ತಮ್ಮ ಕೈ ಮೇಲೆ ಒಂದೇ ರೀತಿಯ ಟಾಟ್ಯೂ ಹಾಕಿಸಿಕೊಂಡಿದ್ದರಂತೆ. ಆದ್ರೆ, 'ಬಿಗ್ ಬಾಸ್' ಮನೆಯೊಳಗೆ ಬರುವ ಮುನ್ನ ಅನುಪಮಾ ಗೌಡ ಜೊತೆಗೆ ಹಾಕಿಸಿಕೊಂಡಿದ್ದ ಟಾಟ್ಯೂನ ಜಗನ್ ಬದಲಿಸಿಕೊಂಡಿದ್ದಾರೆ.ಜಗನ್ ಟಾಟ್ಯೂ ಬದಲಾಯಿಸಿಕೊಂಡಿರುವ ವಿಷಯ ಅನುಪಮಾ ಗೌಡಗೆ ಗೊತ್ತಿಲ್ಲ. 'ಬಿಗ್ ಬಾಸ್' ಮನೆಯೊಳಗೆ ಬಂದ ನಾಲ್ಕು ದಿನ ಆದ್ಮೇಲೆ ಟಾಟ್ಯೂ ಬದಲಾಗಿರುವ ಸಂಗತಿ ಅನುಪಮಾ ಗೌಡಗೆ ಗೊತ್ತಾಗಿದೆ.
Comments