2.0 ಚಿತ್ರದಲ್ಲಿ ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಂಡಿರುವ ಅಕ್ಷಯ್ ಕುಮಾರ್

2.0 ಚಿತ್ರ 2010ರಲ್ಲಿ ಬಿಡುಗಡೆಯಾದ ಎಂದಿರನ್ ಚಿತ್ರದ ಮುಂದುವರೆದ ಭಾಗ. ಭಾರಿ ಬಜೆಟ್ ನಲ್ಲಿ ನಿರ್ಮಾಣವಾಗುತ್ತಿರುವ 2.0 ಚಿತ್ರ ಈಗಾಗಲೇ ಭಾರಿ ನಿರೀಕ್ಷೆ ಮೂಡಿಸಿದೆ.
ರಜನಿಕಾಂತ್ ಹಾಗೂ ಅಕ್ಷಯ್ ಕುಮಾರ್ ಅಭಿನಯದ 2.0 ಚಿತ್ರದ ಶೂಟಿಂಗ್ ಭರದಿಂದ ಸಾಗಿದ್ದು, ಬಹುತೇಕ ಭಾಗಗಳು ಪೂರ್ಣಗೊಂಡಿದೆ. ಈಗಾಗಲೇ ಅಕ್ಷಯ್ ಕುಮಾರ್ ಅವರ ಮೊದಲ ಪೋಸ್ಟರ್ ಭಾರಿ ಸದ್ದುಮಾಡಿತ್ತು. ಇದರ ಬೆನ್ನಲ್ಲೆ ಇದೀಗ ಚಿತ್ರತಂಡ ಮತ್ತೊಂದು ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ. ಇದೀಗ ಬಿಡುಗಡೆಯಾಗಿರುವ ಪೋಸ್ಟರ್ ನಲ್ಲಿ ಅಕ್ಷಯ್ ಕುಮಾರ್ ಚೂಪಾದ ಹಲ್ಲು, ಹಳದಿ ಬಣ್ಣದ ಕಣ್ಣು, ಬಿಳಿ ಕೂದಲು ಮತ್ತು ಉದ್ದುದ್ದ ಕಣ್ಣಿನ ರೆಪ್ಪೆಗಳು ಮತ್ತು ಐಬ್ರೋದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಅಕ್ಷಯ್ ಕುಮಾರ್ ರಿಚರ್ಡ್ ಹೆಸರಿನ ವಿಜ್ಞಾನಿಯಾಗಿ ಕಾಣಿಸಿಕೊಂಡರೆ, ರಜನಿಕಾಂತ್ ವಾಸೆಗಾರನ್ ಆಗಿದ್ದಾರೆ. ಆಮಿ ಜಾಕ್ಸನ್ ಕೂಡ ಚಿತ್ರದಲ್ಲಿ ನಟಿಸಿದ್ದಾರೆ.
Comments