ಬಿಗ್ ಬಾಸ್ - 5 : ಎಲ್ಲರ ಮನ ಗೆದ್ದ ದಿವಾಕರ್

ಲಕ್ಸುರಿ ಬಜೆಟ್ ಟಾಸ್ಕ್ ನ ಮುಂದುವರೆದ ಭಾಗವಾಗಿ ನೀಡಲಾದ ಗೋಲ್ ಮಾಲ್ ಸವಾಲ್ ನಲ್ಲಿ ಸದಸ್ಯರು ಗೋಲು ಹೊಡೆಯಬೇಕಿತ್ತು. ಇದರಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದ ದಿವಾಕರ್ ವಿಜೇತರಾಗಿದ್ದಾರೆ.
ನಂತರದ ಸವಾಲ್ ನಲ್ಲಿ ಸದಸ್ಯರಿಗೆ ತಲಾ 1 ಶೂ ನೀಡಲಾಗಿದ್ದು, ಅದರ ಜೊತೆಯ ಮತ್ತೊಂದು ಶೂ ಅನ್ನು ಮರದ ಪೆಟ್ಟಿಗೆಯಲ್ಲಿ ಇಡಲಾಗಿದ್ದ ಶೂಗಳ ರಾಶಿಯಿಂದ ಹುಡುಕಿ ತೆಗೆಯಬೇಕಿತ್ತು. ಇದರಲ್ಲಿ ಕಡಿಮೆ ಅವಧಿಯಲ್ಲಿ ಶೂ ಹುಡುಕಿದ ರಿಯಾಜ್ ವಿಜೇತರಾಗಿದ್ದಾರೆ. ದಿವಾಕರ್ ಸರಿಯಾಗಿ ಶೂಗಳನ್ನು ಮಿಕ್ಸ್ ಮಾಡದ ಕಾರಣ ರಿಯಾಜ್ ವಿಜೇತರಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಕುರಿತಾಗಿ ಸದಸ್ಯರ ನಡುವೆ ಭಾರೀ ಚರ್ಚೆಯೇ ನಡೆದಿದೆ. ಇನ್ನು ದಯಾಳ್ ಅವರು, ಇಲ್ಲಿ ಕಾಮನ್ ಮ್ಯಾನ್ ಮತ್ತು ಸೆಲೆಬ್ರಿಟಿಗಳು ಎಂದೇನಿಲ್ಲ. ನಾವೆಲ್ಲರೂ ಸ್ಪರ್ಧಿಗಳೇ ಎಂದು ದಿವಾಕರ್ ಗೆ ಹೇಳಿದ್ದಾರೆ. ಗುಂಪುಗಾರಿಕೆ ಕುರಿತಾಗಿ ಚರ್ಚೆ ನಡೆದಿದ್ದು, ಇದನ್ನು ಒಪ್ಪದ ದಿವಾಕರ್, ನಾನು ಗುಂಪು ಇದೆ ಎಂದು ಯಾವತ್ತೂ ಹೇಳಿಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ.
ಪ್ರತಿ ಶನಿವಾರ 'ಬಿಗ್ ಬಾಸ್'ನಲ್ಲಿ ಸುದೀಪ್ ಪಂಚಾಯಿತಿ ನಡೆಸುವ ರೀತಿಯಲ್ಲಿ ದಯಾಳ್ ಅಭಿನಯಿಸಿದ್ದು, ವಿಶೇಷವಾಗಿತ್ತು. ಈ ಸಂದರ್ಭದಲ್ಲಿ ಅಲ್ಲಿದ್ದ ಸದಸ್ಯರೆಲ್ಲರೂ ನಗೆಗಡಲಲ್ಲಿ ತೇಲಿದ್ದಾರೆ. ಇನ್ನು ಚಂದನ್ ಅವರು ನಾನು ಶ್ರುತಿ ಅವರನ್ನು ಇಷ್ಟ ಪಡುತ್ತೇನೆ. ಅವರು ಜೆ.ಕೆ.ಯನ್ನು ಇಷ್ಟ ಪಡ್ತಾರೆ ಎಂದಿದ್ದಕ್ಕೆ ಶ್ರುತಿ ಸಿಟ್ಟಾಗಿದ್ದಾರೆ. ಅನುಪಮಾ ಇದೆಲ್ಲ ತಮಾಷೆಗಾಗಿ ಎಂದು ಅವರನ್ನು ಸಮಾಧಾನಪಡಿಸಿದ್ದಾರೆ. ಕನ್ನಡ ರಾಜ್ಯೋತ್ಸವ ಪ್ರಯುಕ್ತ ಮನೆಯ ಸದಸ್ಯರಿಗೆ ನೃತ್ಯ ಪ್ರದರ್ಶನ ನೀಡಲು 'ಬಿಗ್ ಬಾಸ್' ಸೂಚಿಸಿದ್ದಾರೆ. ಅದರಂತೆ ಸದಸ್ಯರಿಗೆ ಅನುಪಮಾ ತರಬೇತಿ ನೀಡಿದ್ದಾರೆ. ಚಂದನ್ ಕನ್ನಡದ ಹಾಡೊಂದನ್ನು ರಚಿಸಿ ಹಾಡಿದ್ದು ವಿಶೇಷವಾಗಿತ್ತು.
Comments