ಬಿಗ್ ಬಾಸ್' ಮನೆಯಿಂದ ಈ ಬಾರಿ ಯಾರು ಎಲಿಮಿನೇಟ್ ಆಗ್ತಾರೆ ?

ಜನಸಾಮಾನ್ಯ ಸ್ಪರ್ಧಿಗಳ ಪರ ದನಿ ಎತ್ತಿ, ಸೆಲೆಬ್ರಿಟಿ ಸ್ಪರ್ಧಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ರಿಯಾಝ್ ಈ ವಾರ 'ಬಿಗ್ ಬಾಸ್' ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿದ್ದಾರೆ.
ಇತ್ತ 'ಮೊಟ್ಟೆ' ಆಟದಲ್ಲಿ ಸಿಕ್ಕಾಪಟ್ಟೆ ಗರಂ ಆಗಿದ್ದ ದಯಾಳ್ ಪದ್ಮನಾಭನ್ ರನ್ನೂ ಸ್ಪರ್ಧಿಗಳು ನಾಮಿನೇಟ್ ಮಾಡಿದ್ದಾರೆ. ಇತ್ತ ಎಲ್ಲರೊಂದಿಗೆ ಚೆನ್ನಾಗಿ ಮಾತನಾಡಿಕೊಂಡಿದ್ದರೂ, ಸಂಖ್ಯಾಶಾಸ್ತ್ರಜ್ಞ ಜಯಶ್ರೀನಿವಾಸನ್ ಟಾರ್ಗೆಟ್ ಆಗಿದ್ದಾರೆ. ಹಾಗಾದ್ರೆ, 'ಬಿಗ್ ಬಾಸ್' ಮನೆಯಿಂದ ಮೂರನೇ ವಾರ ಹೊರ ಹೋಗಲು ನಾಮಿನೇಟ್ ಆಗಿರುವ ಸದಸ್ಯರು ಯಾರು.? ಕ್ಯಾಪ್ಟನ್ ಆಯ್ಕೆಗಾಗಿ 'ಬಿಗ್ ಬಾಸ್' ನೀಡಿದ ಟಾಸ್ಕ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಸಮೀರಾಚಾರ್ಯ ಕ್ಯಾಪ್ಟನ್ ಆದರು. ಹೀಗಾಗಿ ನಾಮಿನೇಷನ್ ಪ್ರಕ್ರಿಯೆಯಲ್ಲಿ ಸಮೀರಾಚಾರ್ಯ ಸೇಫ್ ಆದರು. ಕಳಪೆ' ಕಿತ್ತಾಟದ ಪರಿಣಾಮ ಕಳೆದ ವಾರದ ಕ್ಯಾಪ್ಟನ್ ಶ್ರುತಿ ಪ್ರಕಾಶ್ ಹಾಗೂ ದಿವಾಕರ್ ನೇರವಾಗಿ ನಾಮಿನೇಟ್ ಆಗಿದ್ದಾರೆ. ಇದ್ದದ್ದನ್ನ ಇದ್ದ ಹಾಗೆ ಹೇಳುವ ರಿಯಾಝ್ ಈ ವಾರ ಕೂಡ ಡೇಂಜರ್ ಝೋನ್ ನಲ್ಲಿ ಇದ್ದಾರೆ. ಸಿಹಿ ಕಹಿ ಚಂದ್ರು, ಜೆಕೆ, ಆಶಿತಾ, ಅನುಪಮ ಗೌಡ, ಜಗನ್, ಕೃಷಿ ತಾಪಂಡ, ದಯಾಳ್, ಶ್ರುತಿ ಪ್ರಕಾಶ್ ಸೇರಿದಂತೆ ಒಟ್ಟು ಎಂಟು ಮಂದಿ ಮತ ಚಲಾಯಿಸಿದ್ದರಿಂದ ರಿಯಾಝ್ ನಾಮಿನೇಟ್ ಆಗಿದ್ದಾರೆ. ಜಯಶ್ರೀನಿವಾಸನ್ ರವರನ್ನು ನಿವೇದಿತಾ ಗೌಡ, ಜೆಕೆ, ತೇಜಸ್ವಿನಿ, ಆಶಿತಾ, ಅನುಪಮಾ ಗೌಡ, ಜಗನ್, ಕೃಷಿ ತಾಪಂಡ ಹಾಗೂ ದಯಾಳ್ ನಾಮಿನೇಟ್ ಮಾಡಿದ್ದಾರೆ. ಸೆಲೆಬ್ರಿಟಿಗಳ ಮಧ್ಯೆ ಸೇರಿಕೊಂಡು ಸೆಲೆಬ್ರಿಟಿಯೇ ಆಗಿರುವ ನಿವೇದಿತಾ ಗೌಡ ರನ್ನು ಚಂದನ್ ಶೆಟ್ಟಿ, ತೇಜಸ್ವಿನಿ, ಶ್ರುತಿ ಪ್ರಕಾಶ್ ಹಾಗೂ ದಿವಾಕರ್ ನಾಮಿನೇಟ್ ಮಾಡಿದ್ದಾರೆ. 'ಅಕ್ಕ' ಅನುಪಮಾ ಗೌಡ ಹೆಸರನ್ನು ಕ್ಯಾಪ್ಟನ್ ಸಮೀರಾಚಾರ್ಯ ಸೂಚಿಸಿದ್ದರಿಂದ, ಅನುಪಮಾ ಗೌಡ ನೇರವಾಗಿ ನಾಮಿನೇಟ್ ಆದರು.
Comments