ಪದ್ಮಾವತಿ ಸಿನಿಮಾ ರಿಲೀಸ್ ಗೂ ಮುನ್ನವೇ ಚಿತ್ರಕ್ಕೆ ಕತ್ತರಿ

ಚಿತ್ರೀಕರಣ ಪೂರ್ಣಗೊಳಿಸಿ ಚಿತ್ರದ ಉಳಿದ ಕೆಲಸವನ್ನು ಫೈನಲ್ ಮಾಡಲಾಗಿತ್ತು. ಆದ್ರೆ ಚಿತ್ರದ ಅವಧಿ 210 ನಿಮಿಷವಾಗಿದೆ. ಇದು ತುಂಬಾ ಹೆಚ್ಚಿನ ಅವಧಿಯಾಗಿದ್ದು ಪ್ರೇಕ್ಷಕರಿಗೆ ಬೋರ್ ಆಗುವ ಸಾಧ್ಯತೆಯಿದೆ ಎಂಬುದನ್ನು ಅರಿತ ಸಂಜಯ್ ಲೀಲಾ ಬನ್ಸಾಲಿ ಚಿತ್ರದ ದೃಶ್ಯಕ್ಕೆ ಕತ್ತರಿ ಹಾಕಲು ಮುಂದಾಗಿದ್ದಾರೆ.
ಚಿತ್ರದ ದೃಶ್ಯಕ್ಕೆ ಕತ್ತರಿ ಹಾಕೋದು ಸುಲಭದ ಕೆಲಸವಲ್ಲ. ಮೂವರು ದಿಗ್ಗಜರು ಕತ್ತರಿ ಕೆಲಸ ಶುರುಮಾಡಿದ್ದಾರೆ. ಆದ್ರೆ ಕಥೆಗೆ ಧಕ್ಕೆ ಬರಬಾರದು. ಜೊತೆಗೆ ನಾಯಕರಿಗೆ ಅನ್ಯಾಯವಾಗಬಾರದು. ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ದೃಶ್ಯಕ್ಕೆ ಕತ್ತರಿ ಹಾಕಬೇಕಾಗಿದೆ. ದೀಪಿಕಾ ಪಡುಕೋಣೆ, ಶಾಹಿದ್ ಕಪೂರ್, ರಣವೀರ್ ಸಿಂಗ್ ಗೆ ನೋವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಸಂಜಯ್ ಮೇಲಿದೆ. ಚಿತ್ರ ಡಿಸೆಂಬರ್ 1ರಂದು ತೆರೆಗೆ ಬರಲಿದ್ದು, ಈಗಾಗ್ಲೇ ಚಿತ್ರದ ಹಾಡು ಹಿಟ್ ಆಗಿದೆ.
Comments