ಚಿತ್ರ ರಿಲೀಸ್ ಗೂ ಮುನ್ನ ಶಿರಡಿ ಸಾಯಿಬಾಬಾ ದರ್ಶನ ಪಡೆದ ನಟ

ಕಪಿಲ್ ಶರ್ಮಾ ಅಭಿನಯದ 'ಫಿರಂಗಿ ಸಿನಿಮಾ 24 ಅಕ್ಟೋಂಬರ್ ನಂದು ರಿಲೀಸ್ ಆಗಲಿದೆ. ಮೊನ್ನೆ ಚಿತ್ರದ ಟ್ರೇಲರ್ ರಿಲೀಸ್ ಆಗಿತ್ತು. ಬಹಳಷ್ಟು ಪ್ರೇಕ್ಷಕರು ಟ್ರೇಲರ್ ನ್ನು ಮೆಚ್ಚಿಕೊಂಡಿದ್ದರು.
ಕಪಿಲ್ ಶರ್ಮಾ ಅಭಿನಯದ 'ಫಿರಂಗಿ' ಸಿನಿಮಾ 24 ಅಕ್ಟೋಂಬರ್ ನಂದು ರಿಲೀಸ್ ಆಗಲಿದೆ. ಮೊನ್ನೆ ಚಿತ್ರದ ಟ್ರೇಲರ್ ರಿಲೀಸ್ ಆಗಿತ್ತು. ಬಹಳಷ್ಟು ಪ್ರೇಕ್ಷಕರು ಟ್ರೇಲರ್ ನ್ನು ಮೆಚ್ಚಿಕೊಂಡಿದ್ದರು. ಚಿತ್ರಕ್ಕೆ ಯಶಸ್ಸು ಸಿಗಲಿ ಎಂದು ನಟ ಕಪಿಲ್ ಶರ್ಮಾ ಹಾಗೂ ಸಿನಿಮಾದ ನಿರ್ಮಾಪಕ ರಾಜೀವ್ ಅವರು ಶಿರಡಿಗೆ ತೆರಳಿ ಸಾಯಿ ಬಾಬಾರ ದರ್ಶನ ಪಡೆದಿದ್ದಾರೆ.
ಈ ಸಂದರ್ಭದಲ್ಲಿ ಅವರ ಜತೆ ಗರ್ಲಫ್ರೆಂಡ್ ಕೂಡ ಇದ್ದರು.ಇತ್ತೀಚೆಗೆ ಚಿತ್ರದ ಪ್ರಮೋಷನ್ ಗಾಗಿ ಕಪಿಲ್ ಶರ್ಮಾ ಸರಿಗಮಪ ಫಿನಾಲೆ ನಲ್ಲಿ ಭಾಗಿಯಾಗಿದ್ದರು. ಹಳೇ ಸ್ಟೈಲ್ ನಲ್ಲಿ ಕಾಣಿಸಿ ಕೊಂಡಿದ್ದರು.ಅನಾರೋಗ್ಯದಿಂದಾಗಿ ಕೆಲ ದಿನಗಳಿಂದ ಕಪಿಲ್ ಶರ್ಮಾ ಟಿವಿ ಶೋ ಇಂದ ಬ್ರೇಕ್ ತೆಗೆದುಕೊಂಡಿದ್ದರು. ಬೆಂಗಳೂರಿನಲ್ಲಿ ಹೆಚ್ಚಿನ ಚಿಕಿತ್ಸೆ ಪಡೆದುಕೊಂಡಿದ್ದರು. ಇನ್ನು ಕೆಲ ದಿನಗಳ ಹಿಂದೆ ಕಪಿಲ್ ಶರ್ಮಾ ಹಾಗೂ ಗರ್ಲ್ ಫ್ರೆಂಡ್ ಮಧ್ಯೆ ಬ್ರೇಕ್ ಆಗಿರುವುದರ ಬಗ್ಗೆ ಸುದ್ದಿ ಹರಡಿತ್ತು. ಇದನ್ನು ಕಪಿಲ್ ಶರ್ಮಾ ಆಪ್ತರು ನಿರಾಕರಿಸಿದ್ದರು ಎನ್ನಲಾಗಿದೆ.
Comments