ಆತ್ಮಹತ್ಯೆಗೆ ಯತ್ನಿಸಿದ್ದ ಗಾಯಕ ಕೈಲಾಶ್ ಖೇರ್

ಮುಂಬೈ: ಗಾಯಕ ಕೈಲಾಶ್ ಖೇರ್ ಬಾಲಿವುಡ್ ಅಲ್ಲದೇ ಬೇರೆ ಬೇರೆ ಭಾಷೆಗಳಲ್ಲಿ ತಮ್ಮ ಕಂಠ ಹರಿಸಿದ್ದಾರೆ. ಕೈಲಾಶ್ ಕ್ಷೇತ್ರದ ಸಂಗೀತ ಕ್ಷೇತ್ರಕ್ಕೂ ಕಾಲಿಡುವುದಕ್ಕು ಮುನ್ನ ಅವರು ಅನುಭವಿಸಿದ ಯಾತನೆ, ಬ್ಯುಸಿನೆಸ್ ನಲ್ಲಿ ನಷ್ಟ ಅನುಭವಿಸಿದಾಗ ಆತ್ಮಹತ್ಯೆಕ್ಕೆ ಯತ್ನಿಸಿರುವ ಬಗ್ಗೆ ಖಾಸಗಿ ವಾಹಿನಿ ನಡೆಸಿದ ಸಂದರ್ಶನವೊಂದರಲ್ಲಿ ಬಿಚ್ಚಿಟ್ಟಿದ್ದಾರೆ.

ಕೈಲಾಶ್ ಖೇರ್ ಹಣವನ್ನೆಲ್ಲಾ ಕಳೆದುಕೊಂಡು ಬೀದಿಗೆ ಬಂದಿದ್ದ ದಿನಗಳವು. ಇಲ್ಲಿಗೆ ತಮ್ಮ ಬದುಕು ಮುಗಿದೇ ಹೋಯ್ತು ಎಂದು ಕೊಂಡಿದ್ದರಂತೆ. ಇದೇ ನೋವಿನಲ್ಲಿ ಸುಮಾರು ಒಂದು ವರ್ಷಗಳ ಕಾಲ ಮಾನಸಿಕ ಒತ್ತಡವನ್ನು ಅನುಭವಿಸಿದ್ದ ಅವರು, ಹೋರಾಟ ಮಾಡುತ್ತಲೇ ಬದುಕುತ್ತಿದ್ದರು. ಈ ವೇಳೆ ಆತ್ಮಹತ್ಯೆ ಮಾಡಿಕೊಳ್ಳಬೇಕೆಂಬ ಯೋಚನೆ ಅವರಲ್ಲಿ ಬಂದಿತ್ತು. ಬದುಕನ್ನು ಕೊನೆಯಾಗಿಸಿಕೊಳ್ಳಬೇಕುಎಂಬ ನಿರ್ಧಾರ ತೆಗೆದುಕೊಂಡಿದ್ದರಂತೆ. ಅದರಂತೆ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ಕೈಲಾಶ್ ಖೇರ್ ಹೇಳಿಕೊಂಡಿದ್ದಾರೆ.
ಒಂದು ವೇಳೆ ತಮ್ಮ ಸ್ನೇಹಿತ ನನ್ನನ್ನು ಬದುಕಿಸದೇ ಇದ್ದರೆ ನಾನು ಇವತ್ತು ಉತ್ತಮ ಕಲಾವಿದನಾಗುತ್ತಿರಲಿಲ್ಲ, ಸಾಧನೆಯ ಸಂತೋಷ ಅನುಭವಿಸಲು ಸಾಧ್ಯವಾಗುತ್ತಿರಲಿಲ್ಲ, ದುಡುಕಿನ ಸಂದರ್ಭದಲ್ಲಿ ನಾವು ನಿರ್ಧಾರ ಕೈಗೊಳ್ಳಬಾರದು, ಬದುಕಿನ ಸುಂದರ ಕ್ಷಣಗಳಿಗಾಗಿ ಕಾಯಬೇಕು ಅಷ್ಟೇ ಎಂದು ತಿಳಿಸಿದ್ದಾರೆ.
Comments