ಸೋದರಳಿಯ ನಿರ್ದೇಶನದ ಮೊದಲ ಸಿನಿಮಾದಲ್ಲಿ ಶಿವಣ್ಣ ನಟನೆ..!
ತಮ್ಮ ಅಂಕಲ್ ಜೊತೆಗೆ ಕೆಲಸ ಮಾಡಲು ತೀವ್ರ ಉತ್ಸುಕರಾಗಿರುವ ಲಕ್ಕಿ ಗೋಪಾಲ್ ನವೆಂಬರ್ 1 ರ ಕನ್ನಡ ರಾಜ್ಯೋತ್ಸವದಂದು ರಾಘವೇಂದ್ರ ರಾಜ್ ಹಾಗೂ, ಪುನೀತ್ ಮತ್ತು ಇಡೀ ರಾಜ್ ಕುಟುಂಬಸ್ಥರ ಸಮ್ಮುಖದಲ್ಲಿ ಮೋಷನ್ ಪೋಸ್ಚರ್ ರಿಲೀಸ್ ಮಾಡಲಿದ್ದಾರೆ.
ಲಕ್ಕಿ ನಿರ್ದೇಶನದ ಸಿನಿಮಾದಲ್ಲಿ ಶಿವಣ್ಣ ಮೂರು ಶೇಡ್ ಗಳಲ್ಲಿ ನಟಿಸುತ್ತಿದ್ದು, ಸಾಮಾಜಿಕ ಸಂದೇಶ ನೀಡಲಿದ್ದಾರೆ. ಸಿನಿಮಾ ವೊಂದಕ್ಕೆ ಟೈಟಲ್ ಅತಿ ಪ್ರಾಮುಖ್ಯವೆಂದು ತಿಳಿದಿರುವ ಚಿತ್ರತಂಡ ಉತ್ತಮ ಶೀರ್ಷಿಕೆ ಇಡಲು ನಿರ್ಧರಿಸಿದೆ. ಶಿವರಾಜ್ ಕುಮಾರ್ ನಟನೆಯ ಈ ಸಿನಿಮಾಗೆ ಎಸ್ ಆರ್ ಕೆ ಎಂದು ಟೈಟಲ್ ಇಡಲು ಚಿತ್ರತಂಡ ನಿರ್ದರಿಸಿದೆ. ದಕ್ಷಿಣ ಭಾರತೀಯ ಸಿನಿಮಾ ರಂಗದಲ್ಲಿ ನಟ ಶಿವರಾಜ್ ಕುಮಾರ್ ಅವರನ್ನು ಅವರ ಅಭಿಮಾನಿಗಳು ಪ್ರೀತಿಯಿಂದ ಎಸ್ ಆರ್ ಕೆ ಎಂದು ಕರೆಯುತ್ತಾರೆ, ಹೀಗಾಗಿ ಈ ಟೈಟಲ್ ಸೂಕ್ತವಾಗಿದೆ ಎಂದು ಮೂಲಗಳು ತಿಳಿಸಿವೆ. ಇನ್ನು ಶಿವರಾಜ್ ಕುಮಾರ್ ಅವರ ಅಭಿಮಾನಿ ಕಿರಣ್ ಕುಮಾರ್ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಈ ವಾರದ ಕೊನೆಯಲ್ಲಿ ಸಿನಿಮಾ ಟೈಟಲ್ ಲಾಂಚ್ ಆಗಲಿದೆ. 2018ರ ಮಾರ್ಚ್ ಅಥವಾ ಏಪ್ರಿಲ್ ನಲ್ಲಿ ಸಿನಿಮಾ ಸೆಟ್ಟೇರಲಿದೆ. ಅದಕ್ಕೂ ಮುನ್ನ ಪೋಟೋ ಶೂಟ್ ನಡೆಸಲು ಸಿನಿಮಾ ನಿರ್ದೇಶಕರು ನಿರ್ಧರಿಸಿದ್ದಾರೆ. ಎಸ್ ಆರ್ ಕೆ ಸಿನಿಮಾಗೆ ಕಿರಿಕ್ ಪಾರ್ಟಿಯ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಸಂಭಾಷಣೆ ಚೇತನ್ ಕುಮಾರ್ ಬರೆದಿದ್ದಾರೆ.
Comments